ಬೆಂಗಳೂರು: ನಗರದಲ್ಲಿಂದು 18 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಸೋಂಕಿತರ ಸಂಖ್ಯೆ 452ಕ್ಕೆ ಏರಿಕೆಯಾಗಿದೆ. ಈವರೆಗೆ 276 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 162 ಸಕ್ರೀಯ ಪ್ರಕರಣಗಳಿದ್ದು, 13 ಮಂದಿ ಮೃತಪಟ್ಟಿದ್ದಾರೆ. ನಗರದ ಹೊಸ ಪ್ರದೇಶಗಳಲ್ಲಿ ಕೊರೊನಾ ಸೋಂಕು ಕಂಡು ಬಂದಿದ್ದು, ಜನರಲ್ಲಿ ಆತಂಕ ಹುಟ್ಟಿಸಿದೆ.
ಈವರೆಗೆ ಕೇವಲ ಪ್ರಯಾಣದ ಇತಿಹಾಸ ಇರುವವರಲ್ಲಿ ಹೆಚ್ಚಿನ ಸೋಂಕು ಕಂಡು ಬರುತ್ತಿತ್ತು. ಆದರೆ ಇಂದು 13 ಪ್ರಕರಣಗಳು ಬೆಂಗಳೂರಿನದ್ದೇ ಆಗಿವೆ. ಏಳು ಜನರಿಗೆ ಸೋಂಕಿನ ಲಕ್ಷಣ, ಒಬ್ಬರಿಗೆ ತೀವ್ರ ಉಸಿರಾಟದ ಸಮಸ್ಯೆ, ಏಳು ಜನರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಇಬ್ಬರಿಗೆ ಸೋಂಕು ಹರಡಿದ್ದು, ಒಬ್ಬರು ಮಹಾರಾಷ್ಟ್ರದಿಂದ ಪ್ರಯಾಣಿಸಿ ಬಂದವರಾಗಿದ್ದಾರೆ. ಬೆಂಗಳೂರಿನ ಹೊಸಕೆರೆಹಳ್ಳಿ, ಕಲಾಸಿಪಾಳ್ಯ, ಬಸವೇಶ್ವರನಗರ, ಬನಶಂಕರಿ, ತಿಪ್ಪಸಂದ್ರ, ಎಸ್.ಆರ್ ನಗರ, ಬಾಣಸವಾಡಿ, ಮೈಸೂರು ರಸ್ತೆ, ಕೆಹೆಚ್‌ಬಿ ಕಾಲೊನಿಗಳಲ್ಲಿ ಹೊಸದಾಗಿ ಕೊರೊನಾ ಸೋಂಕು ಹರಡಿದೆ.
ನಗರದಲ್ಲಿ ಸಾಕಷ್ಟು ಜನ ಜ್ವರ, ಕೆಮ್ಮು, ನೆಗಡಿಯ ಲಕ್ಷಣದಿಂದ ಪರೀಕ್ಷೆ ನಡೆಸಿದಾಗ ಕೊರೊನಾ ಇರುವುದು ದೃಢಪಟ್ಟಿದೆ.
ರೋಗಿಗಳ ವಿವರ:
- P-4850 - ಬನಶಂಕರಿ- 46 ವರ್ಷದ ಹೆಣ್ಣು
- P-4852- ತಿಪ್ಪಸಂದ್ರ- 2334 ರ ಸಂಪರ್ಕ - 45 ವರ್ಷದ ಮಹಿಳೆ
- P-4851- ಎಸ್ ಆರ್ ನಗರ -67 ವರ್ಷದ ವ್ಯಕ್ತಿ- ತೀವ್ರ ಉಸಿರಾಟದ ಸಮಸ್ಯೆ
- P-4853 - ಬಾಣಸವಾಡಿ -24 ವರ್ಷದ ಹೆಣ್ಣು- ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
- P-4849- ದೆಹಲಿ ಟ್ರಾವೆಲರ್-4 ವರ್ಷದ ಗಂಡು ಮಗು
- P- 4854 -24 ವರ್ಷದ ಗಂಡು- ಪರಪ್ಪನ ಅಗ್ರಹಾರ ಜೈಲಿನ ಆರೋಪಿ.
- P-4858 -ಮೈಸೂರು ರಸ್ತೆ - 32 ವರ್ಷದ ಗಂಡು
- P-4855- 14 ವರ್ಷದ ಹೆಣ್ಣು- ಡಿಆರ್‌ಡಿಒ ಕಮಾಂಡೋ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
- P-4856 -23 ವರ್ಷದ ಗಂಡು- ರಾಬಟ್ಸನ್ ರಸ್ತೆ - ಪ್ರಯಾಣದ ಇತಿಹಾಸ
- P- 4859- ಕೆ.ಹೆಚ್ ಬಿ ಕಾಲನಿ -3270 ಸಂಪರ್ಕದಿಂದ - 45 ವರ್ಷದ ಮಹಿಳೆಗೆ ಹರಡಿದೆ.
ಉಳಿದ ಎಂಟು ಮಂದಿಗೆ ಸೋಂಕು ಹೇಗೆ ಹರಡಿದೆ ಎಂಬುದಾಗಿ ಪತ್ತೆ ಹಚ್ಚಲಾಗುತ್ತಿದೆ ಎಂದು ಸರ್ವಿಲೆನ್ಸ್ ಆಫೀಸರ್ ಡಾ. ಕೋಮಲ ಮಾಹಿತಿ ನೀಡಿದರು.