ಬೆಂಗಳೂರು: ಕೊರೊನಾ ವೈರಸ್ ಲೈಂಗಿಕ ಕಾರ್ಯಕರ್ತೆಯರ ಬದುಕಿನ ಜೊತೆ ಆಟವಾಡುತ್ತಿದ್ದು, ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಜೀವನ ಸಾಗಿಸುವುದಕ್ಕೆ ಹಾಗೂ ಹೆಚ್ಐವಿ ಸೋಂಕಿನಿಂದ ಬಳಲುತ್ತಿದ್ದವರಿಗೆ ಚಿಕಿತ್ಸೆ ಹಣವಿಲ್ಲದೇ, ಕಣ್ಣೀರಲ್ಲಿ ದಿನ ಕಳೆಯುವಂತೆ ಆಗಿದೆ.
ರಾಜ್ಯದ ಕೆಸಾಫ್ಟ್ ಅಡಿಯಲ್ಲಿ ಸುಮಾರು 96,878 ಮಂದಿ ತಮ್ಮ ಹೆಸರನ್ನ ನೋಂದಾಯಿಸಿದ್ದು, ಇವರೆಲ್ಲಾ ಸದ್ಯ ಲೈಂಗಿಕ ಚಟುವಟಿಕೆಯಲ್ಲಿ ಭಾಗಿಯಾಗದೆ ಮನೆಯಲ್ಲಿದ್ದಾರೆ. ಬಡತನ, ಹೃದಯ ರೋಗ, ಬಾಲ್ಯ ವಿವಾಹ, ಅನಕ್ಷರತೆ ಹಾಗೂ ಮಾನವ ಕಳ್ಳಸಾಗಣೆ, ಹೀಗೆ ಬೇರೆ ಬೇರೆ ಕಾರಣಗಳಿಂದ ಇವರು ಈ ವೃತ್ತಿ ಆಯ್ಕೆ ಮಾಡಿಕೊಂಡು ಅದರಲ್ಲೇ ಜೀವನ ಕಟ್ಟಿಕೊಂಡವರು. ಆದ್ರೆ ಮಹಾಮಾರಿ ಕೊರೊನಾ ಇವರಿಗೂ ಸಂಕಷ್ಟ ತಂದೊಡ್ಡಿದೆ.
ಲಾಕ್ಡೌನ್ನಿಂದ ಲೈಂಗಿಕ ಕಾರ್ಯಕರ್ತೆಯರು ತೊಂದರೆಗೀಡಾಗಿದ್ದು, ಯಾವುದಾದರೂ ಉದ್ಯೋಗ ಕೊಡಿ ಎಂದು ಅಂಗಲಾಚುತ್ತಿದ್ದಾರೆ. ಹೆಸರು ಹೇಳಲು ಇಷ್ಟ ಪಡದ ಲೈಂಗಿಕ ಕಾರ್ಯಕರ್ತೆಯೊಬ್ಬರು ಈಟಿವಿ ಭಾರತ ಜೊತೆ ಮಾತನಾಡಿ, ಸರ್ಕಾರ ಅಥವಾ ಯಾರಾದರೂ ಸಹೃದಯಿಗಳು ತಮಗೆ ಸಹಾಯ ಮಾಡಿ ಎಂದು ಅಂಗಲಾಚಿದ್ದಾರೆ.