ETV Bharat / state

ಶುಭ ಸಮಾರಂಭಗಳ ಮುಂದೂಡಿಕೆ ಅಪಶಕುನ ಅಲ್ಲ: ಗವಿಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ - ಸೋಮಸುಂದರ ದೀಕ್ಷಿತ್

ಲಾಕ್​​ಡೌನ್ ಆದ ಹಿನ್ನೆಲೆಯಲ್ಲಿ ಮದ್ವೆ-ಮುಂಜಿ ಮುಂದೂಡಿಕೆ ಮಾಡಿದ್ದು ಅಪಶಕುನ ಅಲ್ಲ ಎಂದು ಗವಿಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಸೋಮಸುಂದರ ದೀಕ್ಷಿತ್ ಈಟಿವಿ ಭಾರತಕ್ಕೆ ತಿಳಿಸಿದರು.

Gangadhareshwara temple priest reaction about postponement of marriage
ಗವಿಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ
author img

By

Published : Apr 25, 2020, 7:46 PM IST

ಬೆಂಗಳೂರು: ದೇಶದಲ್ಲಿ ಲಾಕ್​​ಡೌನ್ ಆದ ಹಿನ್ನೆಲೆಯಲ್ಲಿ ಮದುವೆ ಹಾಗೂ ಇನ್ನಿತರ ಸಮಾರಂಭಗಳನ್ನು ಮಾಡಬಾರದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೇಳಿವೆ. ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಸುಮಾರು ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳನ್ನು ಜನರು ಮಾಡುವುದು ಸಾಮಾನ್ಯ.

ಮೂಲಗಳು ಹೇಳುವ ಪ್ರಕಾರ ಬೆಂಗಳೂರು ನಗರದಲ್ಲಿಯೇ ಸುಮಾರು ಎರಡು ತಿಂಗಳಲ್ಲಿ 2000ಕ್ಕೂ ಹೆಚ್ಚು ಮದುವೆಗಳು ಮುಂದೂಡಲಾಗಿದೆ. ಸಮುದಾಯ ಭವನಗಳು, ಛತ್ರಗಳು ಹಾಗೂ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ಮದುವೆ ಮುಂಜಿ ಹಾಗೂ ಇನ್ನಿತರ ಶುಭ ಸಮಾರಂಭಗಳನ್ನು ಜನರು ಮಾಡುತ್ತಾರೆ. ಸರ್ಕಾರದ ಆದೇಶದ ಪ್ರಕಾರ ಮುಂಗಡವಾಗಿ ದಿನಾಂಕವನ್ನು ನಿಗದಿ ಮಾಡಿದ್ದ ಸಂದರ್ಭದಲ್ಲಿ ಸಮುದಾಯ ಭವನಗಳು ನೀಡಿದ್ದ ಹಣವನ್ನು ಹಿಂತಿರುಗಿಸಬೇಕು ಎಂದು ಆದೇಶ ಹೊರಡಿಸಿದೆ ಎಂದು ಗವಿಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಸೋಮಸುಂದರ ದೀಕ್ಷಿತ್ ಈಟಿವಿ ಭಾರತಕ್ಕೆ ತಿಳಿಸಿದರು.

ಇದು ಅಪಶಕುನವಲ್ಲ ಶುಭಶಕುನ:

ಆಗಮ ಪಂಡಿತರಾದ ಸೋಮಸುಂದರ ದೀಕ್ಷಿತ್ ಈಟಿವಿ ಭಾರತಕ್ಕೆ ಮಾತನಾಡಿ, ಜನರಲ್ಲಿ ಈ ರೀತಿಯಾಗಿ ಶುಭ ಸಮಾರಂಭಗಳು ಮುಂದೂಡಿದರೆ ಅಪಶಕುನ ಎಂದು ಚಿಂತಿಸುತ್ತಿದ್ದಾರೆ. ಆದರೆ, ಇದು ಶುಭಶಕುನ. ಶುಭ ಸಮಾರಂಭಗಳು ನಿಗದಿಯಾದ ಕೆಲದಿನಗಳಲ್ಲಿ ಮನೆಯಲ್ಲಿ ಅಕಾಲಿಕ ಮರಣ ಹೊಂದಿದರೆ ಅಪಶಕುನವಾಗುತ್ತದೆ ಹೊರತು ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಇದು ಕಾಯಿಲೆಯಾಗಿ ಪರಿಣಮಿಸಿದೆ.

ಗವಿಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ

ಮದುವೆಯಾದ ಮಾರನೇ ದಿನ ಈ ರೀತಿಯಾಗಿ ಲಾಕ್​​ಡೌನ್ ಆದರೆ ಮದುವೆಯಾದ ಹೆಣ್ಣನ್ನು ಗಂಡನ ಮನೆಗೆ ಬೀಳ್ಕೊಡುವುದು ಕಷ್ಟವಾಗಿರುತ್ತದೆ ಹಾಗೂ ನೆಂಟರು ಹಾಗೂ ಬಂಧು ಬಳಗವಿಲ್ಲದೇ ಶುಭ ಸಮಾರಂಭಗಳನ್ನು ಮಾಡುವುದು ಸೂಕ್ತವಲ್ಲ. ಹೀಗಾಗಿ ಜನರು ಕಾದು ಸೂಕ್ತ ದಿನವನ್ನು ಮತ್ತೆ ನಿಗದಿ ಮಾಡಿ ಬಂಧು ಹಾಗೂ ಬಳಗದ ಸಮ್ಮುಖದಲ್ಲಿ ಶುಭ ಸಮಾರಂಭಗಳನ್ನು ನೆರವೇರಿಸಿದರೆ ಪೂರ್ಣ ಫಲ ದೊರಕುತ್ತದೆ ಎಂದು ಇವರು ವಿವರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.