ಬೆಂಗಳೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಆಯುಷ್ಮಾನ್ ಭಾರತ ಕಾರ್ಡ್‌ಗಳ ವಿತರಣೆ ಮುಂದೂಡಿಕೆ ಮಾಡಲಾಗಿದೆ. ಈ ಹಿಂದೆ ಮಾರ್ಚ್ 30ರವರೆಗೂ ಕಾರ್ಡ್ ನೀಡುವುದಕ್ಕೆ ತಡೆ ನೀಡಲಾಗಿತ್ತು. ಇದೀಗ ಮತ್ತೆ ಒಂದು ತಿಂಗಳ ಕಾಲ ಕಾರ್ಡ್ ವಿತರಣೆಯನ್ನು ಆರೋಗ್ಯ ಇಲಾಖೆ ಮುಂದೂಡಿದೆ. ಏಪ್ರಿಲ್ 30ರವರೆಗೂ ಆಯುಷ್ಮಾನ್ ಭಾರತ ಕಾರ್ಡ್ ನೀಡುವುದಿಲ್ಲ. ಕಾರ್ಡ್‌ಗಳನ್ನು ವಿತರಣೆ ಮಾಡದಂತೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಆದೇಶ ನೀಡಿದ್ದಾರೆ.
![](https://etvbharatimages.akamaized.net/etvbharat/prod-images/6569575_179_6569575_1585375418769.png)