ETV Bharat / state

ಆನೇಕಲ್​ ಕ್ವಾರಂಟೈನ್​​ ಕೇಂದ್ರದಲ್ಲಿದ್ದ ಮೂವರಿಗೆ ಸೋಂಕು: ಬೇರೆಡೆಗೆ ಸ್ಥಳಾಂತರಿಸುವಂತೆ ಉಳಿದವರ ಗಲಾಟೆ - ಕ್ವಾರಂಟೈನ್ ಕೇಂದ್ರ

ಆನೇಕಲ್​ನ ಕ್ವಾರಂಟೈನ್ ಕೇಂದ್ರದಲ್ಲಿ ಕೊರೊನಾ ದೃಢಪಟ್ಟವರನ್ನು ಬೇರೆಡೆಗೆ ಕಳುಹಿಸಲಾಗಿದೆ. ಆದರೂ ಉಳಿದವರನ್ನು ಸ್ಥಳಾಂತರ‌ ಮಾಡುವಂತೆ ಕ್ವಾರಂಟೈನ್ ಆದವರು ಹಾಗೂ ಸ್ಥಳೀಯರು ಗಲಾಟೆ ಮಾಡಿದ್ದಾರೆ.

ಉಳಿದವರ ಗಲಾಟೆ
ಉಳಿದವರ ಗಲಾಟೆ
author img

By

Published : Jun 11, 2020, 7:04 PM IST

ಆನೇಕಲ್: ಕ್ವಾರಂಟೈನ್ ಕೇಂದ್ರದಲ್ಲಿದ್ದ ಮೂವರಿಗೆ ಕರೊನಾ ಪಾಸಿಟಿವ್ ಬಂದ ಹಿನ್ನಲೆ ಉಳಿದವರು ಕೂಡಲೇ ಕ್ವಾರಂಟೈನ್ ಕೇಂದ್ರವನ್ನು ಸ್ಥಳಾಂತರಿಸುವಂತೆ ಗಲಾಟೆ ಮಾಡಿದ ಘಟನೆ, ಪಟ್ಟಣದ ಅಮೃತ ಮಹಲ್ ಹಾಸ್ಟೆಲ್​ನಲ್ಲಿ ನಡೆದಿದೆ.

ಈಗಾಗಲೇ ಕ್ವಾರಂಟೈನ್ ಕೇಂದ್ರದಲ್ಲಿ ಕೊರೊನಾ ದೃಢಪಟ್ಟವರನ್ನು ಬೇರೆಡೆಗೆ ಕಳುಹಿಸಲಾಗಿದೆ. ಆದರೂ ಉಳಿದವರನ್ನು ಸ್ಥಳಾಂತರ‌ ಮಾಡುವಂತೆ ಕ್ವಾರಂಟೈನ್ ಆದವರು ಹಾಗೂ ಸ್ಥಳೀಯರು ಗಲಾಟೆ ಮಾಡಿದ್ದಾರೆ. ತಮಗೂ ಕೊರೊನಾ ಹರಡುವ ಭೀತಿಯಲ್ಲಿರುವ ಕ್ವಾರಂಟೈನಿಗಳು ಇಲ್ಲಿನ ಕಲ್ಯಾಣ ಮಂಟಪದಲ್ಲಿರಲು ಒಪ್ಪುತ್ತಿಲ್ಲ. ಕ್ವಾಂರಟೈನ್ ಕೇಂದ್ರವನ್ನು ಮುಂಜಾನೆ ಸ್ಯಾನಿಟೈಸ್ ಮಾಡಲಾಗಿದೆ. ಆದರೂ ತಮ್ಮನ್ನು ಸ್ಥಳಾಂತರಿಸುವಂತೆ ಪಟ್ಟುಹಿಡಿದಿದ್ದಾರೆ.

ಕ್ವಾರಂಟೈನ್​​ ಬದಲಿಸುವಂತೆ ಉಳಿದವರ ಗಲಾಟೆ

ಸ್ಥಳಕ್ಕೆ ಆರೋಗ್ಯ ಅಧಿಕಾರಿಗಳು ದೌಡಾಯಿಸಿ ಮನವೋಲಿಕೆ ಯತ್ನ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ತಾಲೂಕು ಬಿಜೆಪಿ ಘಟಕ ಕ್ವಾರಂಟೈನ್ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸಲು ತಹಶೀಲ್ದಾರರಿಗೆ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.