ETV Bharat / state

ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ವಿದ್ಯುತ್ ಚಿತಾಗಾರದಲ್ಲಿ ಮಾಡಿ: ಬಿಬಿಎಂಪಿ ಆಯುಕ್ತರಿಗೆ ಪತ್ರ - ಸಾಮಾಜಿಕ ಕಾರ್ಯಕರ್ತ ಹೆಚ್ ಎಂ ವೆಂಕಟೇಶ್

ಕೋವಿಡ್​ನಿಂದ ಮೃತಪಟ್ಟವರ ಶವಗಳನ್ನು ಜಾತಿ ಧರ್ಮ, ಸಂಪ್ರದಾಯ ಮೀರಿ ವಿದ್ಯುತ್ ಚಿತಾಗಾರಗಳಲ್ಲಿ ಅಗ್ನಿಸ್ಪರ್ಶ ಮಾಡಬೇಕು ಎಂದು ಬಿಬಿಎಂಪಿ ಆಯುಕ್ತರಿಗೆ ಸಾಮಾಜಿಕ ಕಾರ್ಯಕರ್ತ ಹೆಚ್. ಎಂ. ವೆಂಕಟೇಶ್ ಪತ್ರ ಬರೆದಿದ್ದಾರೆ.

Corona corpses to be burnt in electric pits
ಕೊರೊನಾ ಮೃತದೇಹ ಪ್ಲಾಸ್ಟಿಕ್ ನಲ್ಲಿ ಸುತ್ತಿ ಹೂಳುತ್ತಿರುವುದಕ್ಕೆ ವ್ಯಾಪಕ ವಿರೋಧ
author img

By

Published : Jul 7, 2020, 2:55 PM IST

ಬೆಂಗಳೂರು: ನಗರದಲ್ಲಿ ಈಗಾಗಲೇ 156 ಮಂದಿಯನ್ನು ಕೊರೊನಾ ಬಲಿ ತೆಗೆದುಕೊಂಡಿದೆ. ಇದರಲ್ಲಿ ಅನೇಕ ಮೃತದೇಹಗಳನ್ನು ಪ್ಲಾಸ್ಟಿಕ್​ನಲ್ಲಿ ಸುತ್ತಿ, 8 ಅಡಿ ಆಳದಲ್ಲಿ ಮಣ್ಣು ಮಾಡಲಾಗುತ್ತಿದೆ. ಆದ್ರೆ ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗುವುದಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಪರಿಸರಕ್ಕೆ ಅಪಾಯವಾಗಲಿದೆ ಎಂದು ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

letter to BBMP commissioner
ಬಿಬಿಎಂಪಿ ಆಯುಕ್ತರಿಗೆ ಸಾಮಾಜಿಕ ಕಾರ್ಯಕರ್ತ ಹೆಚ್ ಎಂ ವೆಂಕಟೇಶ್ ಪತ್ರ

ಜೊತೆಗೆ ಕೋವಿಡ್​ನಿಂದ ಮೃತಪಟ್ಟವರ ದೇಹಗಳನ್ನು ಹೂಳಲು ಜಾಗದ ಸಮಸ್ಯೆಯೂ ಇರುವುದರಿಂದ ನಗರದ ವಿದ್ಯುತ್ ಚಿತಾಗಾರಗಳ ಮೂಲಕ ಸುಟ್ಟು ಅಂತ್ಯಸಂಸ್ಕಾರ ಮಾಡಬೇಕು. ಇದರಿಂದಾಗಿ ಪರಿಸರಕ್ಕಾಗುವ ಹಾನಿ ತಪ್ಪಿಸಬಹುದು. ಶವ ಸಾಗಣೆ, ಗುಂಡಿ ತೋಡುವುದು, ಗುಂಡಿ ಮುಚ್ಚುವ ಶ್ರಮ, ವೆಚ್ಚವೂ ಉಳಿತಾಯವಾಗಲಿದೆ.

ಹೀಗಾಗಿ ಕೋವಿಡ್ ಸೋಂಕಿತರ ಶವಗಳನ್ನು ಜಾತಿ ಧರ್ಮ, ಸಂಪ್ರದಾಯ ಮೀರಿ ವಿದ್ಯುತ್ ಚಿತಾಗಾರಗಳಲ್ಲಿ ಅಗ್ನಿಸ್ಪರ್ಶ ಮಾಡಬೇಕು ಎಂದು ಬಿಬಿಎಂಪಿ ಆಯುಕ್ತರಿಗೆ ಸಾಮಾಜಿಕ ಕಾರ್ಯಕರ್ತ ಹೆಚ್. ಎಂ. ವೆಂಕಟೇಶ್ ಪತ್ರ ಬರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.