ಬೆಂಗಳೂರು: ವಲಸೆ ಎಫೆಕ್ಟ್ನಿಂದ ಹಳ್ಳಿ ಹಳ್ಳಿಗೂ ಸೋಂಕು ಹರಡಿದ್ದು, ರಾಜಧಾನಿಯಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾದರೂ ಹಳ್ಳಿಗಳಲ್ಲಿ ಜಾಸ್ತಿಯಾಗುತ್ತಿದೆ. ಏ. 28ರಂದು ರಾಜ್ಯದ ಸೋಂಕಿತರಲ್ಲಿ ರಾಜಧಾನಿಯ ಪಾಲು ಶೇ. 58ರಷ್ಟಿತ್ತು. ಈಗ ಬೆಂಗಳೂರಿನ ಪಾಲು 34%, ಜಿಲ್ಲೆಗಳಲ್ಲಿ 66%ರಷ್ಟಿದೆ.
ಸೋಂಕು ಹೆಚ್ಚಳಗೊಂಡ ಟಾಪ್ 5 ಜಿಲ್ಲೆಗಳು
ಜಿಲ್ಲೆ | ಏಪ್ರಿಲ್ 28 | ಮೇ 14 |
ಹಾವೇರಿ | 36 | 292 |
ಗದಗ | 129 | 591 |
ಶಿವಮೊಗ್ಗ | 333 | 1045 |
ಚಿತ್ರದುರ್ಗ | 10 | 314 |
ಬೆಳಗಾವಿ | 360 | 1592 |
15 ದಿನಗಳ ಅಂತರದಲ್ಲಿ ರಾಜಧಾನಿ ಬಿಟ್ಟು ಬೇರೆ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಟೆಸ್ಟಿಂಗ್ ಕಡಿಮೆ ಮಾಡಿದ್ದರೂ ಪಾಸಿಟಿವ್ ರೇಟ್ ಹೆಚ್ಚಾಗಿರುವುದು ಕೂಡ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಲ್ಲಿ ಕಂಡು ಬರುತ್ತಿದೆ.