ETV Bharat / state

ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ತಡೆಗಟ್ಟಲು ಕ್ರಮ: ಶ್ರೀರಾಮುಲು, ಸುಧಾಕರ್ ಮಧ್ಯೆ 'ನೆಗೆಟಿವ್' ಅಂಶ ಪತ್ತೆ! - ಆರೋಗ್ಯ ಸಚಿವ ಶ್ರೀರಾಮುಲು

ಕೊರೊನಾ ವೈರಸ್ ಸಂಬಂಧ ಮುಂಜಾಗ್ರತಾ ಕ್ರಮವಹಿಸುವ ಇಡೀ ಪ್ರಕರಣದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಇಲ್ಲವೇನೋ ಎನ್ನುವಂತೆ ಪರಿಸ್ಥಿತಿಯನ್ನು ಸಚಿವ ಡಾ. ಸುಧಾಕರ್ ನಿಭಾಯಿಸುತ್ತಿದ್ದಾರೆ. ಸುಧಾಕರ್ ವೇಗಕ್ಕೆ ಸ್ವತಃ ಆರೋಗ್ಯ ಸಚಿವ ಶ್ರೀರಾಮುಲು‌ ದಂಗಾಗಿದ್ದು ಮುಖ್ಯಮಂತ್ರಿಗಳ ಬಳಿ ದೂರು ಕೊಂಡೊಯ್ದಿದ್ದಾರೆ.

corona case in karnataka
ಶ್ರೀರಾಮುಲು ಹಾಗೂ ಸುಧಾಕರ್
author img

By

Published : Mar 11, 2020, 10:10 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಭೀತಿಯಿಂದ ಆತಂಕದ ವಾತಾವರಣ‌ ಸೃಷ್ಟಿಯಾಗಿದ್ದರೆ, ಇದನ್ನು ಪರಿಣಾಮಕಾರಿಯಾಗಿ ಎದುರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಿರುವ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವರ ನಡುವಿನ ಹೊಂದಾಣಿಕೆಯಲ್ಲಿ ನೆಗಟಿವ್ ಅಂಶ ಕಂಡು ಬಂದಿದ್ದು ಆತಂಕ‌ ಹೆಚ್ಚುವಂತೆ ಮಾಡಿದೆ.

ಆರೋಗ್ಯ ಸಚಿವ ಬಿ. ಶ್ರೀರಾಮುಲು ತಮ್ಮ ಪುತ್ರಿಯ ವಿವಾಹ ಮಹೋತ್ಸವದಲ್ಲಿ ತೊಡಗಿಕೊಂಡಿದ್ದ ಕಾರಣ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸುವ ಕುರಿತು ಅಧಿಕಾರಿಗಳ ತಂಡ ಕಟ್ಟಿಕೊಂಡು‌ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ.‌

ಪ್ರತಿ‌ದಿನ‌ ಅಧಿಕಾರಿಗಳ ಸಭೆ, ಕೇಂದ್ರದ ಅಧಿಕಾರಿಗಳ ಜೊತೆ ಸಮನ್ವಯತೆ, ಮಾಹಿತಿ ವಿನಿಮಯ ಮಾಡಿಕೊಳ್ಳುವ ಜೊತೆಗೆ ಪ್ರತೀದಿನ ಕೊರೊನಾ ಸಂಬಂಧ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿ ಸುದ್ದಿಗೋಷ್ಠಿ ನಡೆಸಿ ವಿವರ ನೀಡುತ್ತಿದ್ದಾರೆ. ಜೊತೆಗೆ ಸದನದಲ್ಲಿಯೂ ಉತ್ತರ ನೀಡುತ್ತಿದ್ದಾರೆ. ಇದರೊಂದಿಗೆ ಆಸ್ಪತ್ರೆಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೊರೊನಾ ಸಂಬಂಧ ಮುಂಜಾಗ್ರತಾ ಕ್ರಮವಹಿಸುವ ಇಡೀ ಪ್ರಕರಣದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಇಲ್ಲವೇನೋ? ಎನ್ನುವಂತೆ ಎಲ್ಲವನ್ನೂ ಸಚಿವ ಸುಧಾಕರ್ ನಿಭಾಯಿಸುತ್ತಿದ್ದಾರೆ. ಸುಧಾಕರ್ ವೇಗಕ್ಕೆ ಸ್ವತಃ ಆರೋಗ್ಯ ಸಚಿವ ಶ್ರೀರಾಮುಲು‌ ದಂಗಾಗಿದ್ದು ಮುಖ್ಯಮಂತ್ರಿಗಳ ಬಳಿ ದೂರು ಕೊಂಡೊಯ್ದಿದ್ದಾರೆ. ನನ್ನ ಗಮನಕ್ಕೆ ತರದೆ ಕೊರೊನಾ ವಿಚಾರದಲ್ಲಿ ಮುಂದುವರೆಯುತ್ತಿದ್ದಾರೆ, ವೈದ್ಯಕೀಯ ಶಿಕ್ಷಣ ಖಾತೆಯ ಸಚಿವರಾಗಿದ್ದು, ಆರೋಗ್ಯ ಇಲಾಖೆಯಲ್ಲಿ ಸುಧಾಕರ್ ಹಸ್ತಕ್ಷೇಪ ಮಾಡುತ್ತಿದ್ದಾರೆ. ನಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ, ಇದು ಸರಿಯಲ್ಲ ಎಂದು ದೂರಿದ್ದಾರೆ.

ವೈದ್ಯಕೀಯ ಶಿಕ್ಷಣ‌ ಇಲಾಖೆಯ ಅಡಿಯಲ್ಲಿ ಬರುವ ಆಸ್ಪತ್ರೆಗಳಿಗೆ ಬೇಕಿದ್ದರೆ ಹೋಗಿ ಪರಿಶೀಲನೆ ನಡೆಸಲಿ. ಅದನ್ನು ಬಿಟ್ಟು ನಮ್ಮ ಇಲಾಖೆ ಆಸ್ಪತ್ರೆಗೆ ಯಾಕೆ ಬರಬೇಕು ಎಂದು‌ ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಹೊಸದಾಗಿ ಸಚಿವರಾಗಿದ್ದರೂ ಹಿರಿಯ ಸಚಿವರನ್ನು ಓವರ್ ಟೇಕ್ ಮಾಡುತ್ತಿದ್ದಾರೆ ಎಂದು ರಾಮುಲು ಗರಂ ಆಗಿದ್ದು ಇನ್ಮುಂದೆ ಕೊರೊನಾ ಕುರಿತು ಸುದ್ದಿಗೋಷ್ಠಿ ನಡೆಸಿ ನಾನೇ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುತ್ತೇನೆ ಎಂದು ಸಿಎಂಗೆ ತಿಳಿಸಿ ಇಂದು ಅವರೇ ಸುದ್ದಿಗೋಷ್ಠಿ ನಡೆಸಿದ್ದಾರೆ.

ಕೊರೊನಾ ಕುರಿತು ಮೊದಲ ದಿನದಿಂದಲೂ ಸುದ್ದಿಗೋಷ್ಠಿ ನಡೆಸಿಕೊಂಡು ಬಂದಿದ್ದ ಸುಧಾಕರ್ ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂದಿನ ಸುದ್ದಿಗೋಷ್ಠಿಯಿಂದ ದೂರ ಉಳಿಯುವ ಮೂಲಕ ಉಭಯ ಸಚಿವರ ನಡುವೆ ಗೊಂದಲ‌ ಸೃಷ್ಟಿಯಾಗಿರುವ ಅನುಮಾನಕ್ಕೆ ಇಂಬು ನೀಡಿದ್ದಾರೆ. ರಾಜ್ಯದಲ್ಲಿ ಕೊರೊನಾ ನಾಲ್ವರಲ್ಲಿ ಕಾಣಿಸಿಕೊಂಡು ಮತ್ತಷ್ಟು ಜನರಿಗೆ ಹರಡುವ ಭೀತಿ ಸೃಷ್ಠಿಸಿರುವ ನಡುವೆ, ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರ ನಡುವಿನಲ್ಲಿ ಕಾಣಿಸಿಕೊಂಡಿರುವ ವೈಷಮ್ಯ ಆತಂಕವನ್ನು ಹೆಚ್ಚುವಂತೆ ಮಾಡಿದೆ.

ಒಂದು ಕಡೆ ಸದನದಲ್ಲಿ ಕೊರೊನಾ ಚರ್ಚೆ ಬದಲು ಗಲಾಟೆ ನಡೆಯುತ್ತಿದ್ದರೆ ಮತ್ತೊಂದೆಡೆ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ವಿಚಾರದಲ್ಲಿ ಆರೋಗ್ಯ‌ ಸಚಿವ ಶ್ರೀರಾಮುಲು ಅವರನ್ನು ಓವರ್ ಟೇಕ್ ಮಾಡಲಾಗುತ್ತಿದೆ ಎನ್ನುವ ವಿಷಯ ಕೊರೊನಾ ಕಡಿವಾಣಕ್ಕೆ ಹಿನ್ನೆಡೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.