ETV Bharat / state

ಲಾಠಿ ಪ್ರಹಾರಕ್ಕೆ ಅವಕಾಶ ಕೊಡಬೇಡಿ, ಜನ ಹೊರಗೆ ಬರದೆ ಸಹಕರಿಸಿ : ಸಚಿವ ಬೊಮ್ಮಾಯಿ - ಗೃಹ ಸಚಿವ ಬಸವರಾಜ ಬೊಮ್ಮಾಯಿ

ಆನ್​ಲೈನ್​ನಲ್ಲಿ ನೋಂದಾಯಿಸಿಕೊಂಡು ಎಸ್ಎಂಎಸ್ ಯಾರಿಗೆ ಹೋಗಿದೆ ಅವರಿಗೆ ಮಾತ್ರ ಲಸಿಕೆ ಹಾಕಲಾಗುತ್ತದೆ. ಅದಕ್ಕಾಗಿ 200 ಕೇಂದ್ರದಲ್ಲಿ ಲಸಿಕೆ ಅಭಿಯಾನ ಆರಂಭವಾಗಿದೆ. ನೋಂದಣಿ ಮಾಡಿಸಿಕೊಳ್ಳದವರು ಲಸಿಕಾ ಕೇಂದ್ರಕ್ಕೆ ಬರಬೇಡಿ..

Basavaraja Bommai
ಬಸವರಾಜ ಬೊಮ್ಮಾಯಿ
author img

By

Published : May 10, 2021, 10:38 PM IST

ಬೆಂಗಳೂರು : ಲಾಕ್​ಡೌನ್ ಜಾರಿ ವಿಚಾರದಲ್ಲಿ ಜನರಿಗೆ ಹಿಂಸೆ ಕೊಡುವುದು ಸರ್ಕಾರದ ಉದ್ದೇಶವಲ್ಲ. ಲಾಠಿ ಪ್ರಹಾರ ಮಾಡದೇ ಕಠಿಣ ಕ್ರಮಕೈಗೊಳ್ಳುತ್ತೇವೆ. ಅಂತಹ ಅನಿವಾರ್ಯ ಸ್ಥಿತಿಗೆ ನಮ್ಮನ್ನು ದೂಡದೆ ಜನ ಸಹಕಾರ ನೀಡಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.

ರಾಜ್ಯದ ಜನರಿಗೆ ಮನವಿ ಮಾಡಿಕೊಂಡ ಸಚಿವ ಬಸವರಾಜ ಬೊಮ್ಮಾಯಿ..

ಸಿಎಂ ನಿವಾಸದಲ್ಲಿ ಮಾತನಾಡಿದ ಅವರು, ಲಾಕ್​ಡೌನ್ ನಿಯಮವನ್ನು ಎಲ್ಲರೂ ಪಾಲಿಸಬೇಕು. ಮೊದಲ ದಿನವಾದ ಇಂದು ಕೆಲ ಘಟನೆ ಬಿಟ್ಟರೆ ಬಹುತೇಕ ಯಶಸ್ವಿಯಾಗಿದೆ. ಜನ ಸಹಕಾರ ನೀಡಿದರೆ ಮಾತ್ರ ಕೊರೊನಾ ಸೋಂಕು ಹರಡುವಿಕೆ ತಡೆಯಬಹುದು.

ಮೊದಲ ದಿನ ಸ್ವಲ್ಪ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಅದರರ್ಥ ಯಾರಿಗೋ ಹಿಂಸೆ ಕೊಡುವುದಲ್ಲ. ಈಗಾಗಲೇ, ಲಾಠಿ ಪ್ರಹಾರ ಬೇಡ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಸೂಚಿಸಿದ್ದಾರೆ. ವಾಹನ ಜಪ್ತಿ ಸೇರಿದಂತೆ ಇತರ ಕಠಿಣ ಕ್ರಮಕ್ಕೆ ಸೂಚನೆ ನೀಡಲಾಗಿದೆ.

18-44ರ ವಯೋಮಾನದವರಿಗೆ ಲಸಿಕೆ ನೀಡುವ ಅಭಿಯಾನ ಆರಂಭಗೊಂಡಿದೆ. ಲಾಕ್​ಡೌನ್ ಇದೆ ಹೇಗೆ ಇವರಿಗೆಲ್ಲಾ ಲಸಿಕೆ ಕೊಡುವ ಪರಿಸ್ಥಿತಿ ನಿಭಾಯಿಸಬೇಕು ಎಂದು ಚರ್ಚೆಯಾಗಿದೆ.

ಆನ್​ಲೈನ್​ನಲ್ಲಿ ನೋಂದಾಯಿಸಿಕೊಂಡು ಎಸ್ಎಂಎಸ್ ಯಾರಿಗೆ ಹೋಗಿದೆ ಅವರಿಗೆ ಮಾತ್ರ ಲಸಿಕೆ ಹಾಕಲಾಗುತ್ತದೆ. ಅದಕ್ಕಾಗಿ 200 ಕೇಂದ್ರದಲ್ಲಿ ಲಸಿಕೆ ಅಭಿಯಾನ ಆರಂಭವಾಗಿದೆ. ನೋಂದಣಿ ಮಾಡಿಸಿಕೊಳ್ಳದವರು ಲಸಿಕಾ ಕೇಂದ್ರಕ್ಕೆ ಬರಬೇಡಿ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.