ETV Bharat / state

ಶೇ 15ರಷ್ಟು ಕಮಿಷನ್ ಬಗ್ಗೆ ದಾಖಲೆ ಕೊಟ್ಟರೆ ಹೋರಾಟದ ಪರ ನಿಲ್ಲುತ್ತೇವೆ: ಕೆಂಪಣ್ಣ - ಗುತ್ತಿಗೆದಾರರ ಬಾಕಿ ಹಣ ಬಿಡುಗಡೆ

ಕಳೆದ 7 ತಿಂಗಳಿನಿಂದ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಯಾಗಿಲ್ಲ. ಚುನಾವಣೆ ಗಡಿಬಿಡಿ, ನೀತಿ ಸಂಹಿತೆ ಮೊದಲಾದ ಕಾರಣಗಳಿಗಾಗಿ ಚುನಾವಣೆಗೂ ಮುನ್ನದ ಬಾಕಿ ಮೊತ್ತ ಬಿಡುಗಡೆಯಾಗಲಿಲ್ಲ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಹೇಳಿದ್ದಾರೆ.

contractors-association-president-d-kempanna-denied-commission-allegations
15% ಕಮಿಷನ್ ಬಗ್ಗೆ ದಾಖಲೆ ಕೊಟ್ಟರೆ ಹೋರಾಟದ ಪರ ನಿಲ್ಲುತ್ತೇವೆ : ಕೆಂಪಣ್ಣ
author img

By

Published : Aug 11, 2023, 1:55 PM IST

Updated : Aug 11, 2023, 2:24 PM IST

ಶೇ 15ರಷ್ಟು ಕಮಿಷನ್ ಬಗ್ಗೆ ಕೆಂಪಣ್ಣ ಪ್ರತಿಕ್ರಿಯೆ

ಬೆಂಗಳೂರು: ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವ ಗುತ್ತಿಗೆದಾರರು ಶೇ 15ರಷ್ಟು ಕಮಿಷನ್ ಬಗ್ಗೆ ದಾಖಲೆ ನೀಡಿದರೆ ಅವರ ಪರವಾಗಿ ನಿಲ್ಲುತ್ತೇವೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಹೇಳಿದ್ದಾರೆ. ಚಾಮರಾಜಪೇಟೆಯಲ್ಲಿರುವ ಸಂಘದ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊಸ ಸರ್ಕಾರದಲ್ಲಿನ ಕಮಿಷನ್ ಬಗ್ಗೆ ಗೊತ್ತಿಲ್ಲ. ಕಳೆದ ಮೂರು ತಿಂಗಳಲ್ಲಿ ಯಾವುದೇ ಕಾಮಗಾರಿ ಕೂಡ ಕರೆದಿಲ್ಲ ಎಂದರು.

ಬಿಬಿಎಂಪಿ ಗುತ್ತಿಗೆದಾರರ ಸಂಘದವರೂ ಇಲ್ಲಿಯೇ ಇದ್ದಾರೆ. ಕಾರ್ಯನಿರತ ಗುತ್ತಿಗೆದಾರರು ಅಂತ ಹೆಸರಲ್ಲಿ ಸಂಘ ನಡೆಸುತ್ತಿದ್ದಾರೆ. ಈ ಹಿಂದೆಲ್ಲ ಕೆಲವೇ ಅಸೋಸಿಯೇಷನ್ ಇತ್ತು. ಆದರೀಗ ಅನೇಕ ಅಸೋಸಿಯೇಷನ್​​​ಗಳು ಇವೆ. ಅವುಗಳ ಬಗ್ಗೆ ನನಗೆ ಗೊತ್ತಿಲ್ಲ. ಅವರ ಆರೋಪದ ಬಗ್ಗೆಯೂ ನಮಗೆ ಗೊತ್ತಿಲ್ಲ ಎಂದು ಕೆಂಪಣ್ಣ ಸ್ಪಷ್ಟಪಡಿಸಿದರು. ನಮ್ಮಲ್ಲಿರುವ ಆಫೀಸ್ ಕೆಲಸಗಾರರಲ್ಲಿ 23 ಜನರ ಪೈಕಿ, 14 ಮಂದಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡವರಿದ್ದಾರೆ. ಆದರೆ, ಹೋರಾಟ ನಡೆಯುವ ಸಂದರ್ಭದಲ್ಲಿ ಅವರೆಲ್ಲರೂ ನಮ್ಮ ಜೊತೆ ಬಂದಿದ್ದಾರೆ ಎಂದು ನೀವು ಪಕ್ಷವೊಂದರ ಪರವೇ ಎಂಬ ಪ್ರಶ್ನೆಗೆ ಕೆಂಪಣ್ಣ ಈ ಉತ್ತರ ನೀಡಿದರು.

ಆರೋಪದ ಬಗ್ಗೆ ದಾಖಲೆ ಕೊಡುತ್ತೇವೆ : ಬಿಜೆಪಿ ಮೇಲಿನ ಶೇ 40ರಷ್ಟು ಕಮಿಷನ್​ ಆರೋಪದ ದಾಖಲೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಒನ್ ಮ್ಯಾನ್ ಕಮಿಟಿಯನ್ನು ನಿವೃತ್ತ ಜಡ್ಜ್ ಮಾಡಿದ್ದಾರೆ. ಎಲ್ಲ ಕಮಿಷನ್ ಬಗ್ಗೆಯೂ ಅವರಿಗೆ ದಾಖಲೆ ಕೊಡುತ್ತೇವೆ ಎಂದು ಹೇಳಿದರು.

ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ :ಶೇ 40ರಷ್ಟು ಆರೋಪದ ಮೂಲಕ ಕಾಂಗ್ರೆಸ್ ರಾಜಕೀಯ ಲಾಭ ವಿಚಾರಕ್ಕೆ ಮಾತನಾಡಿದ ಅವರು, ನಾವು ಕೆಲವು ಕಡೆ ಕೆಲಸ ಆರಂಭಿಸಿದ್ದೇವೆ. ಅದಕ್ಕೆ ಸುದ್ದಿಗೋಷ್ಠಿ ಮಾಡುತ್ತಿದ್ದೇವೆ. ನಮ್ಮ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಈ ಸರ್ಕಾರ ಮಾತ್ರವಲ್ಲ, ಹಿಂದಿನ ಸರ್ಕಾರದಿಂದಲೂ ಹಾಗೆಯೇ ಆಗಿದೆ. ಈಗಲೂ ನಮ್ಮ ಹಣಕ್ಕೆ ಸರ್ಕಾರದ ಬಳಿ ಗೋಗರೆಯುವ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಡಿಸಿಎಂ ಡಿ ಕೆ ಶಿವಕುಮಾರ್ ಸುಳ್ಳು ಹೇಳ್ತಾರೋ, ಸತ್ಯ ಹೇಳ್ತಾರೋ ಗೊತ್ತಿಲ್ಲ. ನಾಲ್ಕು ವರ್ಷದ ಹಿಂದೆ ಕೆಲಸ ಆಗಿದೆ. ಆ ನಂತರ ಬಿಲ್ ಸಲ್ಲಿಕೆ ಆಗಿದೆ. ನಮಗೆ ಒಂದು ವರ್ಷದೊಳಗೆ ಹಣ ಬಿಡುಗಡೆ ಆಗಬೇಕು. ಬಿಬಿಎಂಪಿ ಬಗ್ಗೆ ನಾವು ಆಗ ಮಾತನಾಡಿರಲಿಲ್ಲ. ಎಲ್ಲ ಇಲಾಖೆಗಳ ಬಗ್ಗೆಯೂ ಮಾತನಾಡಿದ್ದೆವು. ಆಗಸ್ಟ್ 31ರೊಳಗೆ ಸರ್ಕಾರ ಹಣ ಬಿಡುಗಡೆ ಮಾಡುವಂತೆ ಸಿಎಂಗೆ ಪತ್ರ ಬರೆದಿದ್ದೇವೆ. ಈಗ ಆತ್ಮಹತ್ಯೆ ಮಾತ್ರವೇ ದಾರಿ ಎಂಬಂತಹ ಪರಿಸ್ಥಿತಿ ಬಂದಿದೆ. ಸಿಎಂ ಸಿದ್ದರಾಮಯ್ಯಗೆ ನಿನ್ನೆ ಕೂಡ ಪತ್ರ ಬರೆದಿದ್ದೇನೆ. ಮುಂದಿನ. ಹೋರಾಟದ ಬಗ್ಗೆ ಸ್ಟೇಟ್ ಅಸೋಸಿಯೇಷನ್ ಎಕ್ಸಿಕ್ಯೂಟಿವ್ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಒತ್ತಡದಲ್ಲಿ ಹೇಳಿಕೆ ಎಂದ ಕೆಂಪಣ್ಣ : ಡಿಸಿಎಂ ಡಿಕೆ ಶಿವಕುಮಾರ್ ಶೇ 15ರಷ್ಟು ಕಮಿಷನ್​ ಕೇಳಿಲ್ಲವೆಂದು ಅಜ್ಜಯ್ಯನ ಮೇಲೆ ಪ್ರಮಾಣ ಮಾಡಲಿ ಎಂದು ಗುತ್ತಿಗೆದಾರ ಹೇಮಂತ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕೆಂಪಣ್ಣ, ಅವರು ಟೆನ್ಷನ್‌ನಲ್ಲಿ ಆಣೆ ಮಾಡಿ ಅಂತ ಹೇಳಿದ್ದಾರೆ. ಶೇ 15ರಷ್ಟು ಕಮಿಷನ್​ ಆರೋಪ ಮಾಡಿದ್ದು ಸುಳ್ಳು. ನಾನು ಟೆನ್ಷನ್‌ನಲ್ಲಿ ಹಾಗೆ ಹೇಳಿದೆ ಅಂತ ಬಳಿ ನನ್ನ ಬಳಿ ಹೇಳಿಕೊಂಡಿದ್ದಾರೆ. ಗುತ್ತಿಗೆದಾರರು ಹಾಗೆ ಹೇಳಿರುವುದು ಸುಳ್ಳು ಎಂದ ಕೆಂಪಣ್ಣ, ನಕಲಿ ಬಿಲ್ ಮಾಡಿರೋದು ನನಗೆ ಗೊತ್ತಿಲ್ಲ. ಡಬಲ್ ಬಿಲ್, ತ್ರಿಬಲ್ ಬಿಲ್ ಬಗ್ಗೆಯೂ ತಿಳಿದಿಲ್ಲ. ಸರ್ಕಾರದ ಬಳಿ ದಾಖಲೆ ಇದ್ದರೆ ತನಿಖೆ ಮಾಡಲಿ. ನಾವು ಯಾವುದೇ ದಾಖಲೆ ಕೊಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಆ.31ರೊಳಗೆ ಗುತ್ತಿಗೆದಾರರ ಬಾಕಿ ಮೊತ್ತ ಬಿಡುಗಡೆ ಮಾಡಬೇಕು: ಸರ್ಕಾರಕ್ಕೆ ಡಿ.ಕೆಂಪಣ್ಣ ಆಗ್ರಹ

Last Updated : Aug 11, 2023, 2:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.