ಬೆಂಗಳೂರು: ಎಲ್ಲೆ ಮೀರಿದ ಕೊರೊನಾದಿಂದ ಪೊಲೀಸರು ಎಚ್ಚೆತ್ತುಕೊಳ್ಳುತ್ತಿದ್ದಾರೆ. ನಿತ್ಯ ಪೊಲೀಸರು ಸಾರ್ವಜನಿಕರ ಜೊತೆ ಒಡನಾಟ ಹೊಂದಿರಬೇಕಾಗುವುದು ಅನಿವಾರ್ಯವಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಹಾಗೂ ಸೋಂಕು ತಪ್ಪಿಸುವ ಮುನ್ನೆಚ್ಚರಿಕಾ ಕ್ರಮವಾಗಿ ಠಾಣೆಗಳಲ್ಲಿ ವರ್ಕಿಂಗ್ ಕಂಪಾರ್ಟ್ಮೆಂಟ್ ನಿರ್ಮಿಸಿಕೊಳ್ಳಲಾಗಿದೆ.
ಸಾರ್ವಜನಿಕರಿಂದ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಚೌಕಾಕಾರದ ಕಂಪಾರ್ಟ್ಮೆಂಟ್ ಅನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್ ಠಾಣೆಯಲ್ಲಿ ವಿನ್ಯಾಸಗೊಳಿಸಲಾಗಿದೆ. ಡಿಸಿಪಿ ರೋಹಿಣಿ ಕಟೋಚ್ ನೇತೃತ್ವದಲ್ಲಿ ಇದನ್ನು ಕಾರ್ಯರೂಪಕ್ಕೆ ತರಲಾಗಿದೆ. ಠಾಣೆಗೆ ಬರುವವರೊಂದಿಗೆ ಮಾತನಾಡಲು ಮೈಕ್, ಲೌಡ್ ಸ್ಪೀಕರ್ ಅಳವಡಿಕೆ, ಖಾಕಿ ಕೋವಿಡ್ ಓವರ್ ಕೋಟ್ ಅನ್ನು ಸಿಬ್ಬಂದಿ ಸುರಕ್ಷತಾ ದೃಷ್ಟಿಯಿಂದ ನೀಡಲಾಗಿದೆ.
ಡಿಸಿಪಿ ರೋಹಿಣಿ ಕಟೋಚ್ ಅವರ ವಿನೂತನ ಪ್ರಯೋಗಕ್ಕೆ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.