ಬೆಂಗಳೂರು: ಪ್ರದೇಶ ಕಾಂಗ್ರೆಸ್ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಡಾ ಪುಷ್ಪಾ ಅಮರನಾಥ್ ವಿರುದ್ಧ ಭಿನ್ನಮತ ಸ್ಫೋಟಗೊಂಡಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮ್ಯ ನಿವಾಸದ ಮುಂದೆ ಕಾಂಗ್ರೆಸ್ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
ಶಿವಾನಂದ ವೃತ್ತ ಬಳಿಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸ ಮುಂದೆ ಪಕ್ಷದ ಕಾರ್ಯಕರ್ತೆಯರು, ಪುಷ್ಪಾ ಅಮರನಾಥ್ ವಿರುದ್ಧ ಭಿತ್ತಿ ಚಿತ್ರ ಪ್ರದರ್ಶಿಸಿ ಬೇಸರ ವ್ಯಕ್ತಪಡಿಸಿದರು. ಕಳೆದ ಕೆಲ ದಿನಗಳ ಹಿಂದೆ ಏಕಾಏಕಿ ಜಿಲ್ಲಾ ಘಟಕಗಳ ಅಧ್ಯಕ್ಷೆಯರನ್ನು ಬದಲಾಯಿಸಿರುವ ಪುಷ್ಪಾ ಅಮರನಾಥ್ ಅವರನ್ನು ಕೆಳಗಿಳಿಸುವಂತೆ ಕಾರ್ಯಕರ್ತೆಯರು ಆಗ್ರಹಿಸಿದರು. ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ಗೂ ಮಾಹಿತಿ ನೀಡದೇ ಮಹಿಳಾ ಘಟಕಗಳ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಿದ್ದ ಆರೋಪ ಪುಷ್ಪಾ ಅಮರನಾಥ್ ಮೇಲಿದೆ.
ಸ್ವಾಮೀಜಿ ಭೇಟಿ: ಇಂದು ಸಿದ್ದರಾಮಯ್ಯರನ್ನು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಭೇಟಿ ಮಾಡಿ ಚರ್ಚಿಸಿದರು. ಸಿದ್ದರಾಮಯ್ಯ ಸರ್ಕಾರಿ ನಿವಾಸದಲ್ಲಿ ವಾಲ್ಮೀಕಿ ಶ್ರೀಗಳು ಮಾತುಕತೆ ನಡೆಸಿದರು. ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ನಾಗಮೋಹನದಾಸ್ ಕಮಿಟಿ ರಚನೆ ಮಾಡಲಾಗಿತ್ತು. ಮೀಸಲಾತಿ ಹೆಚ್ಚಳಕ್ಕೆ ನಾಗಮೋಹನದಾಸ್ ಕಮಿಟಿ ರಚನೆಯೇ ಪ್ರಮುಖವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯಗೆ ಸ್ವಾಮೀಜಿ ಅಭಿನಂದನೆ ಸಲ್ಲಿಸಿದರು.
(ಓದಿ: ಕಾಂಗ್ರೆಸ್ ನಾಯಕನೆಂದು ಬೆದರಿಕೆ, ಬಿಬಿಎಂಪಿಯಲ್ಲಿ ಗುತ್ತಿಗೆ: ರಾಮಕೃಷ್ಣಯ್ಯ ವಿರುದ್ಧ ದೂರು)