ETV Bharat / state

ಕಾಂಗ್ರೆಸ್​ ನಾಯಕರು ಐದೂ ಜಾತಿಗೆ ಒಬ್ಬೊಬ್ಬರು ಸಿಎಂ ಎಂದು ತಾವೇ ಘೋಷಿಸಿಕೊಂಡಿದ್ದಾರೆ: ಸಚಿವ ಈಶ್ವರಪ್ಪ ಕಿಡಿ - ಬಿಜೆಪಿ ಪಕ್ಷದ ಮುಂದಿನ ಸಿಎಂ

ಕಾಂಗ್ರೆಸ್​ ನಾಯಕರು ಈಗಲೇ ತಮಗೆ ತಾವೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಬಣಗಳು ಹುಟ್ಟಿಕೊಂಡಿವೆ. ಇಂತಹ ಪರಿಸ್ಥಿತಿ ಕಾಂಗ್ರೆಸ್​ ಪಕ್ಷಕ್ಕೆ ಬರಬಾರದಿತ್ತು. ಅವರ ತಟ್ಟೆಯಲ್ಲಿ ಬಿದ್ದ ಆನೆಯನ್ನು ಯಾವತ್ತೂ ಮೇಲೆತ್ತಲು ಆಗುವುದಿಲ್ಲ. ಕತ್ತಲೆ ಕೊಠಡಿಯಲ್ಲಿ ಇಲ್ಲದೆ ಇರುವ ಕರಿ ಬೆಕ್ಕನ್ನು ಹುಡುಕುತ್ತಿದ್ದಾರೆ ಎಂದು ಕೈ ನಾಯಕರ ವಿರುದ್ಧ ಸಚಿವ ಕೆ.ಎಸ್. ಈಶ್ವರಪ್ಪ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

Congress will not get power in state; KS Eshwarappa
ಸಚಿವ ಕೆ.ಎಸ್.ಈಶ್ಚರಪ್ಪ
author img

By

Published : Jul 1, 2021, 5:17 PM IST

ಬೆಂಗಳೂರು: ಕಾಂಗ್ರೆಸ್​ನಲ್ಲಿ ಸದ್ಯ ಚರ್ಚೆಯಾಗ್ತಿರುವ ಮುಂದಿನ ಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್​ ಸಚಿವ ಕೆ.ಎಸ್. ಈಶ್ವರಪ್ಪ ಮತ್ತೊಮ್ಮೆ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಸಾಯ್ತಾ ಇರುವ ಪಕ್ಷ. ಅದು ಅಪ್ಪ-ಅಮ್ಮ ಇಲ್ಲದ ಪಾರ್ಟಿ ಎಂದು ಲೇವಡಿ ಮಾಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮತನಾಡಿದ ಅವರು, ಅವರು ತಮ್ಮ ಕಷ್ಟವನ್ನು ಯಾರಿಗೆ ಹೇಳ್ಕೋಬೇಕು? ನಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ರೆ, ಅವರ ತಟ್ಟೆಯಲ್ಲಿ ಆನೆ ಸತ್ತು ಬಿದ್ದಿದೆ. ಅದನ್ನು ಎತ್ತೋದಕ್ಕೆ ಆಗೋದಿಲ್ಲ. ಅಷ್ಟರ ಮಟ್ಟಿಗೆ ಕಾಂಗ್ರೆಸ್ ಅಧೋಗತಿಗೆ ಹೋಗಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Phone Tapping case: ಬೆಲ್ಲದ್ ನೀಡಿದ್ದ ನಂಬರ್ ಯಾರದ್ದು ಗೊತ್ತಾ?

ಬಿಜೆಪಿ ಸರ್ಕಾರದ ಬಗ್ಗೆ ಮೂರು ದಿನ ಅರುಣ್ ಸಿಂಗ್ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಬಿಎಸ್​ವೈ ಕೇಂದ್ರ ನಾಯಕರ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಮನಸ್ಸಿನ ಭಾವನೆಗಳನ್ನು ಹೊರಗೆ ಹಾಕಿದ್ದಾರೆ. ಕೇಂದ್ರ ನಾಯಕರು ಅವರನ್ನು ಕರೆದು ಮಾತಾಡುತ್ತಾರೆ. ಗೊಂದಲವನ್ನು ಬಗೆಹರಿಸುವ ಪ್ರಯತ್ನ ಕೈಗೊಳ್ಳುತ್ತಾರೆ. ಆದರೆ, ಕಾಂಗ್ರೆಸ್ ಪರಿಸ್ಥಿತಿ ಏನು? ಐದು ಜಾತಿ ಮುಖಂಡರು ಈಗಲೇ ಸಿಎಂ ಸ್ಥಾನದ ಬಗ್ಗೆ ಘೋಷಣೆ ಮಾಡಿಕೊಂಡುಬಿಟ್ಟಿದ್ದಾರೆ ಎಂದು ಕಿಡಿಕಾರಿದರು.

ಐದೂ ಜಾತಿಗೆ ಒಬ್ಬೊಬ್ಬರು ಸಿಎಂ ಎಂದು ತಾವೇ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಈ ಮಟ್ಟಕ್ಕೆ ಇಳಿಯಬಾರದು. ಬಿಜೆಪಿಯಲ್ಲಿ ಕೆಲವರ ಮಾತು ಹಿತೈಷಿಗಳು ಹಾಗೂ ಕಾರ್ಯಕರ್ತರಿಗೆ ಬೇಸರ ಆಗಿತ್ತು. ನಮ್ಮ ಹೈಕಮಾಂಡ್ ಸುಮ್ಮನಿರದೇ ಅರುಣ್ ಸಿಂಗ್ ಅವರನ್ನು ಕಳಿಸಿಕೊಟ್ಟಿತ್ತು. ಈಗ ಸಮಸ್ಯೆಗೆ ಬ್ರೇಕ್​ ಬಿದ್ದಿದೆ ಎಂದರು.

ಸಚಿವ ಕೆ.ಎಸ್.ಈಶ್ಚರಪ್ಪ ಮಾಧ್ಯಮಗೋಷ್ಟಿ

ಆದರೆ, ಮುಂದಿನ ಸಿಎಂ ಹೇಳಿಕೆ ಬಗ್ಗೆ ತಮ್ಮ ಬೆಂಬಲಿಗ ಶಾಸಕರ ಬಾಯಿ ಮುಚ್ಚಲು ಸಿದ್ದರಾಮಯ್ಯ ಮುಂದಾಗಿಲ್ಲ. ಡಿಕೆಶಿ ಕೂಡಾ ಯಾರ ಬಾಯಿಯನ್ನೂ ಮುಚ್ಚಿಸಿಲ್ಲ. ಎಂ ಬಿ ಪಾಟೀಲ್ ನಾನು ಸನ್ಯಾಸಿ ಅಲ್ಲ ಅಂತಿದ್ದಾರೆ, ದಲಿತ ಸಿಎಂ ಎಂದು ಪರಮೇಶ್ವರ್, ತನ್ವೀರ್ ಸೇಠ್ ನಾನೂ ಸಿಎಂ ಅಭ್ಯರ್ಥಿ ಎನ್ನುತ್ತಿದ್ದಾರೆ. ಇಂತಹ ಹೇಳಿಕೆ ಕೊಡಬಾರದೆಂದು ಯಾರೂ ಹೇಳಿಲ್ಲ. ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಹುಡುಕಬೇಕು. ಕಾಂಗ್ರೆಸ್ ಪಕ್ಷದ ಜೀವಾನೇ ಹೋಗುತ್ತಿದೆ. ಆದರೆ, ಸಿಎಂ ನಾನಾಗುತ್ತೇನೆ ಎಂಬ ಬಡಿದಾಟ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸಾಯುತ್ತಿರುವ ಕಾಂಗ್ರೆಸ್ ಉಳಿಸಲು ಯಾರಿಂದಲೂ ಉಳಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಕನಸಿನ‌ ಮಾತು. ಕತ್ತಲೆ ಕೊಠಡಿಯಲ್ಲಿ ಇಲ್ಲದೆ ಇರುವ ಕರಿ ಬೆಕ್ಕನ್ನು ಕಾಂಗ್ರೆಸ್​ನವರು ಹುಡುಕುತ್ತಿದ್ದಾರೆ. ಅರುಣ್ ಸಿಂಗ್ ಬಂದಾಗ ಸಣ್ಣ-ಪುಟ್ಟ ಗೊಂದಲ ಹೇಳಿಕೊಂಡಿದ್ದೇವೆ. ರಾಜ್ಯದಲ್ಲಿ ಯುವ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕಾಗಿ ಬಡಿದಾಟ ನಡೆಯುತ್ತಿದೆ.‌

ಇದನ್ನೂ ಓದಿ: ಪಕ್ಷ ಕಟ್ಟುವ ಸಾಮರ್ಥ್ಯ, ಜವಾಬ್ದಾರಿ ಇರುವ ನಾಯಕ ಈ ರೀತಿ ಮಾತನಾಡಲ್ಲ: ಜಮೀರ್​ಗೆ ಪ್ರಿಯಾಂಕ್ ಟಾಂಗ್

ಶಾಸಕ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ರಾಜ್ಯದ ಕೋರ್ ಕಮಿಟಿ ಬಹಿರಂಗ ಹೇಳಿಕೆ ಬಗ್ಗೆ ಕ್ರಮದ ಸೂಚನೆ ನೀಡಿದ್ದಾರೆ. ಇಬ್ಬರು ಮೂವರು ಮಾತನಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಆಗುತ್ತದೆ‌ ಎಂದು ತಿಳಿಸಿದರು.

ಈಶ್ವರಪ್ಪ ಸಿಎಂ ಯಾಕಾಗಬಾರದು‌, ನೀವು ಸನ್ಯಾಸಿನಾ ಎಂಬ ಪ್ರಶ್ನೆಗೆ ಈಶ್ವರಪ್ಪ ಆಗಬೇಕು ಬೇಡವೋ ಎಂಬುದನ್ನು ಕೇಂದ್ರ ನಾಯಕರು ನಿರ್ಧಾರ ಮಾಡುತ್ತಾರೆ. ನಾನು ಇತಹದ್ದೇ ಸ್ಥಾನ ಬೇಕು ಅಂತ ಕೇಳುತ್ತಿಲ್ಲ. ಯಾರು ಸಿಎಂ ಆಗಬೇಕು ಎಂಬುದು ಕೇಂದ್ರದ ನಿರ್ಧಾರ ಎಂದು ಸೂಚ್ಯವಾಗಿ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.