ETV Bharat / state

'ಸಾಚಾತನ ನಿರೂಪಿಸುವುದು ಬಿಟ್ಟು ಹಾವು ತುಳಿದಂತೆ ಹೌಹಾರುವುದೇಕೆ?': ಕಾಂಗ್ರೆಸ್ - ಬಹುಕೋಟಿ ರೂಪಾಯಿ ಹಗರಣ

ಲಂಚದ ಆರೋಪ ಬಂದಾಕ್ಷಣ ತನಿಖೆಗೆ ಒಳಪಟ್ಟು ಸಾಚಾತನ ನಿರೂಪಿಸುವುದನ್ನು ಬಿಟ್ಟು, ಹಾವು ತುಳಿದಂತೆ ಹೌಹಾರುವುದೇಕೆ? ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಅವರನ್ನು ಕುರಿತು ಕಾಂಗ್ರೆಸ್​ ಟ್ವೀಟ್​ ಮಾಡಿದೆ.

ಕಾಂಗ್ರೆಸ್​
ಕಾಂಗ್ರೆಸ್​
author img

By

Published : Feb 8, 2023, 6:22 PM IST

ಬೆಂಗಳೂರು : ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಭೋಜೇ ಗೌಡರು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಕಚೇರಿ ವಿರುದ್ಧ ಮಾಡಿರುವ ಆರೋಪ ಮುಂದಿಟ್ಟು ಕಾಂಗ್ರೆಸ್ ಪಕ್ಷವೂ ಸಹ ಜೋಶಿ ಅವರ ಕಾಲೆಳೆಯುವ ಕಾರ್ಯ ಮಾಡಿದೆ. ಟ್ವೀಟ್ ಮಾಡಿ ಪ್ರಹ್ಲಾದ್​ ಜೋಶಿ ಅವರ ವಿರುದ್ಧ ಆರೋಪ ಮಾಡಿರುವ ಕಾಂಗ್ರೆಸ್, ಹುದ್ದೆ ಮಾರಾಟ ಯೋಜನೆ ಈಗ ರಾಜ್ಯದಿಂದ ಕೇಂದ್ರಕ್ಕೂ ವಿಸ್ತರಿಸಿದೆಯೇ ಬಿಜೆಪಿ? ಪ್ರಹ್ಲಾದ್ ಜೋಶಿ ಅವರೇ, ಲಂಚದ ಆರೋಪ ಬಂದಾಕ್ಷಣ ತನಿಖೆಗೆ ಒಳಪಟ್ಟು ಸಾಚಾತನ ನಿರೂಪಿಸುವುದು ಬಿಟ್ಟು, ಹಾವು ತುಳಿದಂತೆ ಹೌಹಾರುವುದೇಕೆ? ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಬ್ಲಾಕ್ಮೇಲ್ ಮಾಡುವುದೇಕೆ? ಈ ಲಂಚ ಪ್ರಕರಣದ ಬಗ್ಗೆ ಉನ್ನತ ತನಿಖೆಯಾಗಲಿ ಎಂದು ಒತ್ತಾಯಿಸಿದೆ.

ಭೋಜೇ ಗೌಡರು ಹೇಳಿದ್ದೇನು?: ರಾಷ್ಟ್ರೀಯ ವೈದ್ಯಕೀಯ ಶಿಕ್ಷಣ ಮಂಡಳಿಗೆ ಸದಸ್ಯರ ನೇಮಕ ಸಂದರ್ಭ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಚೇರಿಯಲ್ಲಿ 2.5 ಕೋಟಿ ರೂ. ಲಂಚ ಸ್ವೀಕರಿಸಲಾಗಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಎನ್ಎಂಸಿ ಸದಸ್ಯರನ್ನಾಗಿ ನೇಮಿಸಲು ಶಿವಮೊಗ್ಗದ ವೈದ್ಯರೊಬ್ಬರಿಂದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್​ ಜೋಶಿ ಕಚೇರಿಯಲ್ಲಿ ಲಂಚ ಪಡೆಯಲಾಗಿದೆ. ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ ಹರೀಶ್ ಅಯ್ಯಣ್ಣ ಎಂಬುವವರನ್ನು ಎನ್ಎಂಸಿ ಸದಸ್ಯರನ್ನಾಗಿ ನೇಮಿಸುವುದಕ್ಕಾಗಿ ಪ್ರಲ್ಹಾದ್​ ಜೋಶಿಯವರ ಕಚೇರಿಯ ಸಿಬ್ಬಂದಿಗೆ 2.5 ಕೋಟಿ ಲಂಚ ನೀಡಿದ್ದಾರೆ ಎಂದು ಆರೋಪಿಸಿದ್ದರು.

ಪ್ರಹ್ಲಾದ್​ ಜೋಶಿ ಕುರಿತು ಕಾಂಗ್ರೆಸ್​ ಟ್ವೀಟ್​

ಜೋಶಿ ಅವರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿತೇಂದ್ರ ಕುಮಾರ್ ಎಂಬುವವರ ಬ್ಯಾಂಕ್ ಖಾತೆಗೆ 2021ರ ಜುಲೈನಲ್ಲಿ 2 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ. ಉಳಿದ 50 ಲಕ್ಷ ರೂ. ನಗದು ರೂಪದಲ್ಲಿ ನೀಡಲಾಗಿದೆ. ಹರೀಶ್ ಅಯ್ಯಣ್ಣ ಅವರನ್ನು ಎನ್ಎಂಸಿ ಸದಸ್ಯರನ್ನಾಗಿ ನೇಮಕ ಮಾಡಬೇಕೆಂಬ ಕೋರಿಕೆಯನ್ನು ಪರಿಗಣಿಸುವುದಾಗಿ ಆಗ ಕೇಂದ್ರ ಆರೋಗ್ಯ ಸಚಿವರಾಗಿದ್ದ ಡಾ ಹರ್ಷವರ್ಧನ್ ಅವರು ಪ್ರಲ್ಹಾದ್​​ ಜೋಶಿಯವರಿಗೆ ಪತ್ರವನ್ನೂ ಬರೆದಿದ್ದರು ಎಂದು ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಕೇಂದ್ರ ಸಚಿವರ ಪತ್ರಗಳನ್ನು ತೋರಿಸಿದ್ದರು.

ಇದನ್ನೂ ಓದಿ : ಮಾರ್ಚ್ 23 ರಿಂದ 30ರ ವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಜೋಶಿ ಅವರ ಕಚೇರಿಯಲ್ಲೇ ಲಂಚದ ಕಳ್ಳ ವ್ಯವಹಾರ ನಡೆದಿರುವ ಕುರಿತು ಏನು ಹೇಳುತ್ತಾರೆ? ಅವರ ಕಚೇರಿಯಲ್ಲಿ ಏನು ನಡೆಯುತ್ತಿದೆ ಎನ್ನುವುದು ರಾಜ್ಯಕ್ಕೆ ಗೊತ್ತಾಗಬೇಕು. ಪರಿಶುದ್ಧರು ಎಂದು ಹೇಳುವ ಅವರ ಭ್ರಷ್ಟಾಚಾರ ಇಲ್ಲಿದೆ. ಹಣಕ್ಕಾಗಿ ಕೇಂದ್ರ ಸಚಿವರ ಕಚೇರಿಯನ್ನು ಬಿಕರಿಗೆ ಇಡಲಾಗಿದೆ. ಈ ಪ್ರಕರಣದ ಉನ್ನತಮಟ್ಟದ ತನಿಖೆ ಆಗಬೇಕು ಎಂದಿದ್ದರು.

ಇದನ್ನೂ ಓದಿ : ಅನುದಾನದಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ: ಮೋದಿ ಸರ್ಕಾರದ ವಿರುದ್ಧ ಹೆಚ್​ಡಿಕೆ ಟೀಕೆ

ತನಿಖೆಯಿಂದ ಸತ್ಯ ಹೊರಬರಲಿ: ಹಣ ನೀಡಿದವರು ಮತ್ತು ಪಡೆದವರು ಯಾರು? ಬಹುಕೋಟಿ ರೂಪಾಯಿ ಹಗರಣದ ನಿಜವಾದ ‘ಕಿಂಗ್ಪಿನ್’ ಯಾರು? ಇದರಲ್ಲಿ ಪ್ರಲ್ಹಾದ್​ ಜೋಶಿಯವರ ಪಾತ್ರ ಏನು? ಎಂಬುದು ತನಿಖೆಯಿಂದ ಹೊರಬರಬೇಕು ಎಂದು ಭೋಜೇ ಗೌಡರು ಒತ್ತಾಯಿಸಿದ್ದರು. ಜೆಡಿಎಸ್ ನಾಯಕರು ತಮ್ಮ ವಿರುದ್ಧ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ತಮ್ಮ ವಿರುದ್ಧ ಮಾಡಿದ ಅವಹೇಳನಕ್ಕೆ ನ್ಯಾಯಾಲಯದ ಮೊರೆ ಹೋಗುತ್ತೇನೆ. ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಸಚಿವ ಜೋಶಿ ಹೇಳಿದ್ದಾರೆ.

ಇದನ್ನೂ ಓದಿ : ಪ್ರಲ್ಹಾದ ಜೋಶಿ ಕಚೇರಿಯಲ್ಲಿ ಲಂಚ ಸ್ವೀಕಾರ- ಭೋಜೇಗೌಡ ಆರೋಪ: ಮಾನನಷ್ಟ ಮೊಕದ್ದಮೆ ಹೂಡುವೆ- ಜೋಶಿ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.