ETV Bharat / state

ಇಂಧನ ಬೆಲೆ ಏರಿಕೆಗೆ ಖಂಡನೆ: ಕೆಪಿಸಿಸಿ ಕಚೇರಿಯಿಂದ ವಿಧಾನಸೌಧಕ್ಕೆ ಟಾಂಗಾ ಏರಿ ಬಂದ ಕೈ ನಾಯಕರು - ಕಾಂಗ್ರೆಸ್ ಟಾಂಗಾ ಜಾಥಾ

ಅಧಿವೇಶನದ ಆರಂಭದ ದಿನ ತಮ್ಮ - ತಮ್ಮ ನಿವಾಸಿಗಳಿಂದ ಎತ್ತಿನಗಾಡಿ ಮೂಲಕ ಆಗಮಿಸಿ ಪ್ರತಿಭಟಿಸಿದ್ದ ನಾಯಕರು ಎರಡನೇ ಪ್ರತಿಭಟನೆಯನ್ನು ಕೆಪಿಸಿಸಿ ಕಚೇರಿಯಿಂದ ನಡೆಸಿದ್ದರು. ಇದೀಗ ವಿಧಾನಮಂಡಲ ಮಳೆಗಾಲದ ಅಧಿವೇಶನದ ಕಡೆಯ ದಿನವಾದ ಇಂದು ಮತ್ತೊಮ್ಮೆ ಕೆಪಿಸಿಸಿ ಕಚೇರಿಯಿಂದ ಟಾಂಗಾ ಜಾಥಾ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಟಾಂಗಾ ಜಾಥಾ
ಕಾಂಗ್ರೆಸ್ ಟಾಂಗಾ ಜಾಥಾ
author img

By

Published : Sep 24, 2021, 12:17 PM IST

Updated : Sep 24, 2021, 1:01 PM IST

ಬೆಂಗಳೂರು: ಕೇಂದ್ರ ಸರಕಾರದ ನಿರಂತರ ಇಂಧನ ಬೆಲೆ ಹಾಗೂ ತತ್ಪರಿಣಾಮ ದಿನಬಳಕೆ ವಸ್ತುಗಳ ದರ ಏರಿಕೆ ಖಂಡಿಸಿ ಕಾಂಗ್ರೆಸ್​​ ನಾಯಕರು ಟಾಂಗಾ ಜಾಥಾ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ಟಾಂಗಾ ಜಾಥಾ ನಡೆಸಿದರು.

ಬೆಲೆ ಇಳಿಕೆ ಮಾಡೋವರೆಗೂ ಹೋರಾಟ

ಕಾಂಗ್ರೆಸ್ ಟಾಂಗಾ ಜಾಥಾ

ಜಾಥಾಗೆ ಚಾಲನೆ ನೀಡಿದ ಸಂದರ್ಭ ಕೆಪಿಸಿಸಿ ಕಚೇರಿ ಮುಂಭಾಗ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕೇಂದ್ರ ಸರ್ಕಾರ ಬೆಲೆ ಏರಿಕೆಯನ್ನು ನಿಯಂತ್ರಿಸುವ ವರೆಗೂ, ಇಂಧನ ಬೆಲೆ ಇಳಿಕೆ ಮಾಡುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ. ನಾವು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಸರ್ಕಾರದ ವಿರುದ್ಧ ಹೋರಾಟ ಆರಂಭಿಸಿದ್ದು, ಯಶಸ್ಸು ಸಿಗುವವರೆಗೂ ಮುಂದುವರಿಸುತ್ತೇವೆ ಎಂದು ತಿಳಿಸಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ನಾವು ಸದನದ ಒಳಗೆ ಹಾಗೂ ಹೊರಗೆ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಹೋರಾಟ ನಡೆಸುತ್ತಿದ್ದೇವೆ. ವಿಧಾನ ಮಂಡಲ ಉಭಯ ಸದನಗಳ ಅಧಿವೇಶನ ಆರಂಭವಾದ ದಿನದಿಂದಲೂ ನಮ್ಮ ಹೋರಾಟ ನಡೆಯುತ್ತಲೇ ಇದೆ. ಬೆಲೆ ಏರಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಇಳಿಕೆ ಮಾಡದಿದ್ದರೆ ಇನ್ನೂ ತೀವ್ರವಾದ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಟಾಂಗಾ ಜಾಥಾ
ಕಾಂಗ್ರೆಸ್ ಟಾಂಗಾ ಜಾಥಾ

ಸೈಕಲ್​ ಆಯ್ತು, ಚಕ್ಕಡಿಯನ್ನೂ ಏರಿದರು.. ಈಗ ಟಾಂಗ್​ ಏರಿ ಟಾಂಗ್​ ಕೊಟ್ಟ ಕಾಂಗ್ರೆಸ್​ ನಾಯಕರು

ವಿಧಾನಮಂಡಲ ಉಬಯ ಸದನಗಳ ಅಧಿವೇಶನ ಆರಂಭವಾದ ದಿನ ಎತ್ತಿನ ಗಾಡಿ ಮೇಲೆ ಆಗಮಿಸಿ ಪ್ರತಿಭಟಿಸಿದ ಕಾಂಗ್ರೆಸ್ ನಾಯಕರು, ಒಂದು ವಾರದ ಬಳಿಕ ಸೈಕಲ್ ಜಾಥಾ ನಡೆಸಿ ಮತ್ತೊಂದು ಪ್ರತಿಭಟನೆ ಮಾಡಿದ್ದರು.

ಅಧಿವೇಶನದ ಆರಂಭದ ದಿನ ತಮ್ಮ- ತಮ್ಮ ನಿವಾಸಿಗಳಿಂದ ಎತ್ತಿನಗಾಡಿ ಮೂಲಕ ಆಗಮಿಸಿ ಪ್ರತಿಭಟಿಸಿದ್ದ ನಾಯಕರು ಎರಡನೇ ಪ್ರತಿಭಟನೆಯನ್ನು ಕೆಪಿಸಿಸಿ ಕಚೇರಿಯಿಂದ ನಡೆಸಿದ್ದರು. ಇದೀಗ ವಿಧಾನಮಂಡಲ ಮಳೆಗಾಲದ ಅಧಿವೇಶನದ ಕಡೆಯ ದಿನವಾದ ಇಂದು ಮತ್ತೊಮ್ಮೆ ಕೆಪಿಸಿಸಿ ಕಚೇರಿಯಿಂದ ಟಾಂಗಾ ಜಾಥಾ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್, ರಾಮಲಿಂಗಾರೆಡ್ಡಿ, ಮಾಜಿ ಸಚಿವರಾದ ಕೆ.ಜೆ. ಜಾರ್ಜ್, ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ ಮತ್ತಿತರರು ಭಾಗವಹಿಸಿದ್ದರು. ಜಾಥಾ ಮಾರ್ಗದುದ್ದಕ್ಕೂ ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಹಾಕಲಾಯಿತು.

ಉಸ್ತುವಾರಿ ವಹಿಸಿಕೊಂಡ ಮಾಜಿ ಮೇಯರ್ :

ಕೆಪಿಸಿಸಿಯಿಂದ ಹೊರಾಟ ಟಾಂಗಾ ಜಾಥಾಗೆ ಮಾಜಿ ಮೇಯರ್ ಸಂಪತ್ ರಾಜ್ ನೇತೃತ್ವ ವಹಿಸಿದ್ದರು. ಸಂಪತ್ ರಾಜ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಘಟನೆಯ ಪ್ರಮುಖ ಆರೋಪಿಯಾಗಿದ್ದಾರೆ. ಕೆಪಿಸಿಸಿ ಕಚೇರಿಗೆ ಆಗಮಿಸಿದ ಸಂಪತ್ ರಾಜ್ ಟಾಂಗ್ ಜಾಥಾದ ಉಸ್ತುವಾರಿ ವಹಿಸಿಕೊಂಡಿದ್ದರು.

ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಿವಾಸದ ಧ್ವಂಸ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಆಗ್ರಹ ಮಾಡಿದ್ದರು. ಆದರೆ, ಪಕ್ಷ ಇದುವರೆಗೂ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ.

Last Updated : Sep 24, 2021, 1:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.