ETV Bharat / state

ಖಾಕಿ ಮೇಲಿನ ಹಲ್ಲೆ, ಆಸ್ತಿಪಾಸ್ತಿ ಹಾನಿಗೆ ಕಾಂಗ್ರೆಸ್ ಕಾರಣ.. ಬಿಜೆಪಿ ಎಂಎಲ್‌ಸಿ ರವಿಕುಮಾರ್ ಆರೋಪ

author img

By

Published : Jan 1, 2020, 7:23 PM IST

ಅಲಿಘಡ ವಿವಿ ಸೇರಿ ದೇಶದ ಪ್ರಮುಖ ನಗರಗಳಲ್ಲಿ ಮತ್ತು ಮಂಗಳೂರು ಗಲಾಟೆಗೆ ಕಾಂಗ್ರೆಸ್ ನೇರ ಕಾರಣ. ಅವರು ಸುಮ್ಮನಿದ್ದರೆ ಅನಾಹುತಗಳೇ ಆಗುತ್ತಿರಲಿಲ್ಲ. ಪೊಲೀಸರ ಮೇಲೆ ಹಲ್ಲೆ ಹಾಗೂ ಆಸ್ತಿಪಾಸ್ತಿ ನಷ್ಟಕ್ಕೆ ಕಾಂಗ್ರೆಸ್ ಕಾರಣವಾಗಿದೆ. ಇದಕ್ಕೆ ಕ್ಷಮೆಯಾಚನೆ ಮಾಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್ ಆಗ್ರಹಿಸಿದ್ದಾರೆ.

ravikumar
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್

ಬೆಂಗಳೂರು: ಅಲಿಘಡ ವಿವಿ ಸೇರಿ ದೇಶದ ಪ್ರಮುಖ ನಗರಗಳಲ್ಲಿ ಮತ್ತು ಮಂಗಳೂರು ಗಲಾಟೆಗೆ ಕಾಂಗ್ರೆಸ್ ನೇರ ಕಾರಣ. ಅವರು ಸುಮ್ಮನಿದ್ದರೆ ಅನಾಹುತಗಳೇ ಆಗುತ್ತಿರಲಿಲ್ಲ. ಪೊಲೀಸರ ಮೇಲೆ ಹಲ್ಲೆ ಹಾಗೂ ಆಸ್ತಿಪಾಸ್ತಿ ನಷ್ಟಕ್ಕೆ ಕಾಂಗ್ರೆಸ್ ಕಾರಣ. ಹಾಗಾಗಿ ಇದಕ್ಕಾಗಿ ಕಾಂಗ್ರೆಸ್‌ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಆಗ್ರಹಿಸಿದ್ದಾರೆ.

ಬಿಜೆಪಿ ಎಂಎಲ್‌ಸಿ ಎನ್‌.ರವಿಕುಮಾರ್..

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೌರತ್ವ ಕಾಯ್ದೆಯನ್ನು ಬಿಜೆಪಿ ತಂದಿಲ್ಲ. ನೆಹರು ತಂದಿದ್ದು, ರಾಜೀವ್ ಗಾಂಧಿ ಮೊದಲ ಬಾರಿ ತಿದ್ದುಪಡಿ ಮಾಡಿದ್ದರು. ಒಟ್ಟು ನಾಲ್ಕು ಬಾರಿ ತಿದ್ದುಪಡಿಯಾಗಿದೆ. ಅಟಲ್ ಸರ್ಕಾರದ ವೇಳೆ ಮನಮೋಹನ್ ಸಿಂಗ್ ಬಾಂಗ್ಲಾ ಅಲ್ಪಸಂಖ್ಯಾತರಿರಗೆ ಪೌರತ್ವ ಕೊಡುವ ಬೇಡಿಕೆ ಇರಿಸಿದ್ದರು. ಈ ಕಾಯ್ದೆಯ ಸಿಂಹಪಾಲು ಕೆಲಸ ಕಾಂಗ್ರೆಸ್ ಸರ್ಕಾರವೇ ಮಾಡಿದೆ. 1985ರಲ್ಲಿ ರಾಜೀವ್ ಗಾಂಧಿ ತಂದಿದ್ದ ವಿಧೇಯಕಕ್ಕೆ ನೀವೇ ವಿರೋಧ ಮಾಡುತ್ತಿದ್ದೀರಿ, ನಿಮ್ಮ ಪತಿ ನಿರ್ಧಾರವನ್ನ ನೀವೇ ವಿರೋಧಿಸುತ್ತಿದ್ದೀರಲ್ಲವೇ ಎಂದು ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಿದರು.

ಧರ್ಮದ ಆಧಾರದ ಮೇಲೆ ಪೌರತ್ವ ಕೊಡಬೇಡಿ ಎನ್ನುವ ಕಾಂಗ್ರೆಸ್, ದೇಶ ವಿಭಜನೆ ಯಾವ ಆಧಾರದಲ್ಲಿ ಆಯಿತು ಎಂದು ಹೇಳಬೇಕು. ಕ್ರಿಶ್ಚಿಯನ್,ಪಾರ್ಸಿ,ಜೈನ್,ಬೌದ್ಧರಿಗೆ ಪೌರತ್ವ ನೀಡುತ್ತಿದ್ದೇವೆ. ನಿಯಮಾವಳಿಯಂತೆ ಮುಸ್ಲಿಂ ಸಮುದಾಯಕ್ಕೂ ಅವಕಾಶವಿದೆ. ಇದು ನೆರೆ ದೇಶದ ಅಲ್ಪಸಂಖ್ಯಾತರಿಗೆ ಮಾತ್ರ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಭಯ ಹುಟ್ಟಿಸಿದ ಕಾರಣಕ್ಕೆ ಮುಸಲ್ಮಾನರು ಬೀದಿಗಿಳಿದರು. ಕಾಂಗ್ರೆಸ್‌ನದ್ದು ಯೂಸ್ ಅಂಡ್ ಥ್ರೋ ಪಾಲಿಸಿ, ಅಲ್ಪಸಂಖ್ಯಾತರನ್ನು ಬಳಸಿ ನಂತರ ಕೈಬಿಡಲಿದೆ. ಇದು ಈಗ ಮುಸಲ್ಮಾನರಿಗೂ ಅರ್ಥವಾಗುತ್ತಿದೆ ಎಂದರು.

ಇಂದಿನಿಂದ ಜನವರಿ 20ರವರೆಗೆ ರಾಜ್ಯದಲ್ಲಿ ಅಭಿಯಾನದ ಮೂಲಕ ಜಾಗೃತಿ ಮೂಡಿಸಲಿದ್ದೇವೆ. 300 ಮಂಡಲ ಕೇಂದ್ರ, 30 ಜಿಲ್ಲೆಗಳಲ್ಲಿ ಕಾರ್ಯಾಗಾರ ನಡೆಸಿ, 5 ಕಡೆ ಬೃಹತ್ ಸಮಾವೇಶ ಮಾಡಲಿದ್ದೇವೆ. ಬಾಂಗ್ಲಾದ ಅಲ್ಪಸಂಖ್ಯಾತರು ಸಿಂಧನೂರಿನಲ್ಲಿದ್ದಾರೆ. ಅಲ್ಲಿಯೂ ಸಮಾವೇಶ ನಡೆಸಲಿದ್ದು, 50 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಮನೆ ಮನೆ ಅಭಿಯಾನಕ್ಕೆ ಜನವರಿ 5ರಂದು ಸಿಎಂ ಚಾಲನೆ ನೀಡಲಿದ್ದಾರೆ ಎಂದರು.

Intro:

ಬೆಂಗಳೂರು: ಅಲಿಘಡ ವಿವಿ ಸೇರಿ ಹಲವು ರಾಜ್ಯ, ಮಂಗಳೂರು ಗಲಾಟೆಗೆ ಕಾಂಗ್ರೆಸ್ ನಿರ್ಮಿಸಿದ ದಂಗೆಯೇ ಕಾರಣ. ,ಅವರು ಸುಮ್ಮನಿದ್ದರೆ ಅನಾಹುತಗಳೇ ಆಗುತ್ತಿರಲಿಲ್ಲ, ಪೊಲೀಸರ ಮೇಲೆ ಹಲ್ಲೆ ಹಾಗು ಆಸ್ತಿಪಾಸ್ತಿ ನಷ್ಟಕ್ಕೆ ಕಾಂಗ್ರೆಸ್ ಕಾರಣವಾಗಿದ್ದು ಇದಕ್ಕೆ ಕಾಂಗ್ರೆಸ್ ಕ್ಷಮೆ ಯಾಚನೆ ಮಾಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆಗ್ರಹಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪೌರತ್ವ ಕಾಯ್ದೆಯನ್ನು ಬಿಜೆಪಿ ತಂದಿಲ್ಲ, ನೆಹರು ತಂದಿದ್ದು, ರಾಜೀವ್ ಗಾಂಧಿ ಮೊದಲ ಬಾರಿ ತಿದ್ದುಪಡಿ ಮಾಡಿದ್ದರು, ಒಟ್ಟು ನಾಲ್ಕು ಬಾರಿ ತಿದ್ದುಪಡಿಯಾಗಿದೆ, ಅಟಲ್ ಸರ್ಕಾರದ ವೇಳೆ ಮನಮೋಹನ್ ಸಿಂಗ್ ಬಾಂಗ್ಲಾ ಅಲ್ಪಸಂಖ್ಯಾತರಿರಗೆ ಪೌರತ್ವ ಕೊಡುವ ಬೇಡಿಕೆ ಇರಿಸಿದ್ದರು.ಈ ಕಾಯ್ದೆಯ ಸಿಂಹಪಾಲು ಕೆಲಸ ಕಾಂಗ್ರೆಸ್ ಸರ್ಕಾರವೇ ಮಾಡಿದೆ,1985 ರಲ್ಲಿ ರಾಜೀವ್ ಗಾಂಧಿ ತಂದಿದ್ದ ವಿಧೇಯಕಕ್ಕೆ ನೀವೇ ವಿರೋಧ ಮಾಡುತ್ತಿದ್ದೀರಿ, ನಿಮ್ಮ ಪತಿ ನಿರ್ಧಾರ ನೀವೇ ವಿರೋಧಿಸುತ್ತಿದ್ದೀರಲ್ಲವೇ ಎಂದು ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಿದರು.

ದಲೈಲಾಮ, ಸೋನಿಯಾ, ಅದ್ನಾನ್ ಸ್ವಾಮಿಗೆ ಪೌರತ್ವ ಸಿಕ್ಕಿದೆ ಆದರೂ ಇವರ ಧೋರಣೆ ನೋಡಿದರೆ ಬಾಗಿಲು ಹಾಕಿಕೊಂಡು ನಗಬೇಕು ಎನ್ನುವಂತಾಗಿದೆ, ಯಾರು ಬೇಕಾದರೂ ಪೌರತ್ವಕ್ಕೆ ಅರ್ಜಿ ಸಲ್ಲಿಸಿ ಪಡೆಯಬಹುದು‌ ಎಂದರು.

ಧರ್ಮದ ಆಧಾರದ ಮೇಲೆ ಪೌರತ್ವ ಕೊಡಬೇಡಿ ಎನ್ನುವ ಕಾಂಗ್ರೆಸ್ ದೇಶ ವಿಭಜನೆ ಯಾವ ಆಧಾರದಲ್ಲಿ ಆಯಿತು ಎಂದು ಹೇಳಬೇಕು,ಕ್ರಿಶ್ಚಿಯನ್, ಪಾರ್ಸಿ,ಜೈನ್,ಬೌದ್ಧರಿಗೆ ಪೌರತ್ವ ನೀಡುತ್ತಿದ್ದೇವೆ, ನಿಯಮಾವಳಿಯಂತೆ ಮುಸ್ಲಿಂ ಸಮುದಾಯಕ್ಕೂ ಅವಕಾಶವಿದೆ ಇದು ನೆರೆ ದೇಶದ ಅಲ್ಪಸಂಖ್ಯಾತರಿಗೆ ಮಾತ್ರ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಭಯ ಹುಟ್ಟಿಸಿದ ಕಾರಣಕ್ಕೆ ಮುಸಲ್ಮಾನರು ಬೀದಿಗಿಳಿದಿರು, ಕಾಂಗ್ರೆಸ್ ನದ್ದು ಯೂಸ್ ಅಂಡ್ ಥ್ರೋ ಪಾಲಿಸಿ, ಅಲ್ಪಸಂಖ್ಯಾತರನ್ನು ಬಳಸಿಕೊಂಡು ನಂತರ ಕೈ ಬಿಡಲಿದೆ.ಇದು ಈಗ ಮುಸಲ್ಮಾನರಿಗೂ ಅರ್ಥವಾಗುತ್ತಿದೆ ಎಂದರು.

ಇಂದಿನಿಂದ ಜನವರಿ 20 ರವರೆಗೆ ರಾಜ್ಯದಲ್ಲಿ ಅಭಿಯಾನದ ಮೂಲಕ ಜಾಗೃತಿ ಮೂಡಿಸಲಿದ್ದೇವೆ, 300 ಮಂಡಲ ಕೇಂದ್ರ, 30 ಜಿಲ್ಲೆಗಳಲ್ಲಿ ಕಾರ್ಯಾಗಾರ ನಡೆಸಲಿದ್ದಿ,5 ಕಡೆ ಬೃಹತ್ ಸಮಾವೇಶ ಮಾಡಲಿದ್ದೇವೆ.ಬಾಂಗ್ಲಾದ ಅಲ್ಪಸಂಖ್ಯಾತರು ಸಿಂಧನೂರಿನಲ್ಲಿದ್ದಾರೆ ಅಲ್ಲಿಯೂ ಸಮಾವೇಶ ನಡೆಸಲಿದ್ದು 50 ಸಾವಿರ ಜನ ಸೇರುವ ನಿರೀಕ್ಷೆ ಇದೆ.ಮನೆ ಮನೆ ಅಭಿಯಾನಕ್ಕೆ ಜನವರಿ 5 ರಂದು ಸಿಎಂ ಚಾಲನೆ ನೀಡಲಿದ್ದಾರೆ ಎಂದರು.

ಇದು ಮಾನವೀಯತೆಯ ಕಾಯ್ದೆ, ಕಾಂಗ್ರೆಸ್ ಅತ್ಯಂತ ಅಮಾನವೀಯವಾಗಿ ಕಾಯ್ದೆಯನ್ನು ವಿರೋಧಿಸುತ್ತಿದೆ,ಕಾಂಗ್ರೆಸ್ ಮಾನವೀಯತ ವಿರೋಧಿ, ಸಂವಿಧಾನ ವಿರೋಧಿ, ಅಂಬೇಡ್ಕರ್ ವಿಚಾರಗಳ ವಿರೋಧಿಯಾಗಿದೆ ಎಂದು ಟೀಕಿಸಿದರು.
Body:.Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.