ETV Bharat / state

RRನಗರ ಉಪಕದನ: ಕೈ ನಾಯಕರ ಜಂಟಿ ರೋಡ್​ ಶೋ ಭರ್ಜರಿ.. ಕಗ್ಗತ್ತಲಲ್ಲೂ ಮತಬೇಟೆ - ಸಿದ್ದರಾಮಯ್ಯ ಪ್ರಚಾರ

ಆರ್​​​ಆರ್ ನಗರದಲ್ಲಿ ಉಭಯ ನಾಯಕರ ರೋಡ್​ ಶೋ ಭರ್ಜರಿಯಾಗಿತ್ತು. ಬೆಳಗ್ಗೆಯಿಂದ ನಗರದ ಹಲವು ವಾರ್ಡ್​​ಗಳಲ್ಲಿ ಕಾಂಗ್ರೆಸ್ ರೋಡ್ ಶೋ ನಡೆಸಿದ್ದು, ಮುನಿರತ್ನ ಹಾಗೂ ಬಿಜೆಪಿ ನಾಯಕರ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದರು..

Siddaramaiah campaign
ಸಿದ್ದರಾಮಯ್ಯ ಪ್ರಚಾರ
author img

By

Published : Oct 30, 2020, 10:51 PM IST

ಬೆಂಗಳೂರು: ಬೆಳಗ್ಗೆಯಿಂದ ಆರಂಭವಾದ ಕಾಂಗ್ರೆಸ್ ರೋಡ್ ಶೋ ರಾತ್ರಿಯವರೆಗೂ ಮುಂದುವರೆದಿತ್ತು. ಬೆಳಗ್ಗೆ ಜಾಲಹಳ್ಳಿ ವಾರ್ಡ್​​ನಿಂದ ಆರಂಭಗೊಡ ಪ್ರಚಾರ ಕಾರ್ಯ ಹೆಚ್​​ಎಂಟಿ ವಾರ್ಡ್, ಎಸ್​​ಆರ್​​ಎಸ್ ಕಾಂಗ್ರೆಸ್ ಕಚೇರಿ ಹತ್ತಿರ ಬಹಿರಂಗ ಸಭೆ, ಗೊರಗುಂಟೆಪಾಳ್ಯ ಜೈ ಭುವನೇಶ್ವರಿ ನಗರ ಲಗ್ಗೆರೆ ಕೊಟ್ಟಿಗೆಪಾಳ್ಯ, ಜ್ಞಾನಭಾರತಿ ವಾರ್ಡ್​ ಬಳಿಕ ಆರ್​ಆರ್ ನಗರದಲ್ಲಿ ಕೊನೆಗೊಂಡಿತು.
ರೋಡ್ ಶೋನಲ್ಲಿ ಅಭ್ಯರ್ಥಿ ಕುಸುಮ ಪರ ಮಾಜಿ ಸಿಎಂ ಸಿದ್ದರಾಮಯ್ಯ ಮತಯಾಚಿಸಿದ್ದು, ಇವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಾಥ್ ನೀಡಿದ್ದಾರೆ. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿ ಎಂಬ ಕಾರಣಕ್ಕೆ ಕ್ಷೇತ್ರದ ಜನತೆ ಮುನಿರತ್ನ ಅವರನ್ನು ಎರಡು ಬಾರಿ ಆಯ್ಕೆ ಮಾಡಿದರೇ ಹೊರತು ಅವರು ದೊಡ್ಡ ನಾಯಕರು‌ ಎಂದಲ್ಲ ಎಂದರು.

ತನ್ನ ವಿರೋಧಿಗಳನ್ನು ಹೆದರಿಸಿ, ಬೆದರಿಸಿ ತಾನು ಶಾಸಕನಾಗಬಹುದು ಅಂತ ಮುನಿರತ್ನ ಭಾವಿಸಿದ್ದರೆ ಅವರಂಥ ಮೂರ್ಖ ಬೇರೊಬ್ಬರಿಲ್ಲ. ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿರಬೇಕು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ ಎಂಬ ಕಾರಣಕ್ಕೆ ಅವರ ಪರ ಕೆಲಸ ಮಾಡಿದರೆ ಭವಿಷ್ಯದಲ್ಲಿ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತೆ ಎಂದರು.

ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷವನ್ನು ನನ್ನ ತಾಯಿ ಅಂತ ಹೇಳ್ತಿದ್ದ ಮುನಿರತ್ನ ಅದೇ ತಾಯಿಗೆ ದ್ರೋಹ ಬಗೆದು ಬಿಜೆಪಿ ಸೇರಿದ್ರು. ನಾವು ಯಾಕಪ್ಪಾ ಪಕ್ಷನ ತಾಯಿ ಅಂತ ಕರೀತಿದ್ದಿ, ಈಗ ಅದೇ ತಾಯಿಗೆ ಮೋಸ ಮಾಡಿದ್ಯಲ ಅಂದ್ರೆ ಕಾಂಗ್ರೆಸ್ ನಾಯಕರು ನನ್ನ ತಾಯಿಗೆ ಅವಮಾನ ಮಾಡ್ತಿದಾರೆಂದು ಗೊಳೋ ಅಂತ ಮೊಸಳೆ ಕಣ್ಣೀರು ಸುರಿಸ್ತಾರೆ ಎಂದು ವಾಗ್ದಾಳಿ ನಡೆಸಿದರು.

ಮುನಿರತ್ನ ಅವರದ್ದು ಬ್ಲಾಕ್ ಮೇಲ್ ರಾಜಕೀಯ. ಈಗ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತದಲ್ಲಿ ಲಂಚಾವತಾರ ವಿಜೃಂಭಿಸುತ್ತಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಗೆ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಮತದಾರರ ಬಳಿ‌ ಮನವಿ ಮಾಡಿದರು.

ಬಳಿಕ ಅಭ್ಯರ್ಥಿ ಕುಸುಮ ಮಾತನಾಡಿ, ಮಹಿಳೆಯರು ತಮಗಿಂತ ತಮ್ಮ ಮನೆಯಲ್ಲಿರುವ ಗಂಡ, ಮಕ್ಕಳು, ತಂದೆ, ತಾಯಿ, ಸಹೋದರ, ಸಹೋದರಿಯರ ಬಗ್ಗೆ ಯೋಚಿಸುವುದೇ ಹೆಚ್ಚು. ಅವರಿಗೆ ಅಷ್ಟು ದೊಡ್ಡ ಮನಸ್ಸಿರುತ್ತದೆ. ಆದರೆ ಮಹಿಳೆಯರಿಗೆ ರಾಜಕೀಯದಲ್ಲಿ ಅವಕಾಶ ಸಿಗುವುದೇ ಕಡಿಮೆ. ಆ ಅವಕಾಶವನ್ನು ಕಾಂಗ್ರೆಸ್ ನನಗೆ ನೀಡಿದೆ. ನಿಮ್ಮ ಸೇವೆಗಾಗಿ ಅದನ್ನು ಮುಡಿಪಾಗಿಡುತ್ತೇನೆ ಎಂದರು.

ನಾನು ಅವರಿಗೆ ಒಂದು ಪ್ರಶ್ನೆ ಕೇಳಲು ಇಚ್ಚಿಸುತ್ತೇನೆ. ಹೆಣ್ಣು ಮಗಳಾಗಿ ನಾನು ರಾಜಕೀಯಕ್ಕೆ ಬರೋದು ತಪ್ಪಾ? ಜನರ ಸೇವೆ ಮಾಡೋದು ತಪ್ಪಾ? ಇಲ್ಲಿರುವ ಯುವಕರು, ಮಹಿಳೆಯರು ಒಟ್ಟಾಗಿ ನಿಲ್ಲಬೇಕು. ಒಂದು ಹೆಣ್ಣಿಗೆ ಅವಕಾಶ ಸಿಕ್ಕಾಗ ಆಕೆಯೂ ದೇಶ ಕಟ್ಟುವ ಕೆಲಸವನ್ನು ಸಮರ್ಥವಾಗಿ ಮಾಡುತ್ತಾಳೆ ಎಂಬುದನ್ನು ತೋರಿಸಲು ಅವಕಾಶ ಮಾಡಿಕೊಡಿ. ನಿಮ್ಮ ಮನೆ ಮಗಳಾದ ನನಗೆ ನವೆಂಬರ್ 3ರಂದು ನಡೆಯಲಿರುವ ಚುನಾವಣೆಯಲ್ಲಿ ಕ್ರಮ ಸಂಖ್ಯೆ 1 ಹಸ್ತದ ಗುರುತಿಗೆ ಮತಹಾಕಿ ಆಶೀರ್ವದಿಸಿ ಎಂದರು.

ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ‌ ಸಚಿವ ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಶಾಸಕ ಬೈರತಿ ಸುರೇಶ್, ಡಾ. ಅಜಯಸಿಂಗ್, ವಿಜಯಸಿಂಗ್ ಮತ್ತಿರರು ಹಾಜರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.