ಬೆಂಗಳೂರು : ಹಾಲು ಹಾಗೂ ಮೊಸರು ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಯುವ ನಾಯಕತ್ವದಲ್ಲಿ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಪ್ರತಿಭಟನೆ ನಡೆಸಿದರು.
ಬಿಜೆಪಿ ಸರ್ಕಾರ ಹಾಲು ಹಾಗೂ ಮೊಸರಿನ ದರವನ್ನು ಏರಿಕೆ ಮಾಡುವುದಿಲ್ಲ ಎಂದು ಹೇಳಿ,ಇದೀಗ ಮತ್ತೆ ಪ್ರತಿ ಲೀಟರಿಗೆ ಎರಡು ರೂ ದರ ಏರಿಕೆ ಮಾಡುವುದರ ಮೂಲಕ ಜನರ ಸಾಮಾನ್ಯ ಮೇಲೆ ಹೊರೆಯನ್ನು ಹೊರಿಸಿದೆ. ಬೆಲೆ ಏರಿಕೆ ಮಾಡಿ ಇದರಿಂದ ಬರುವ ಲಾಭವನ್ನು ರೈತರಿಗೆ ನೀಡುತ್ತೇವೆ ಎಂದು ಕೆಎಂಎಫ್ ಅಧ್ಯಕ್ಷರು ತಿಳಿಸಿದ್ದಾರೆ.
ಹಾಗಾದರೆ ಬಂದ ಲಾಭವನ್ನು ರೈತರಿಗೆ ನೀಡಲಿ ಅದನ್ನು ಹೊರತುಪಡಿಸಿ ಜನಸಾಮಾನ್ಯರಿಂದ ವಸೂಲಿ ಮಾಡಿ ರೈತರಿಗೆ ನೀಡುವುದು ಎಷ್ಟು ಸಮಂಜಸ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಎಸ್ ಮನೋಹರ್ ಮಾತನಾಡಿ, ಬೆಲೆ ಏರಿಕೆ ಮಾಡುವುದರ ಮೂಲಕ ಹಾಲು ಮೊಸರಿನ ದರ ಏರಿಕೆಗೆ ಮಾಡಿ ಜನಸಾಮಾನ್ಯರ ಮೇಲೆ ಹೊರೆ ಹೊರಿಸಿರುವುದನ್ನು ಖಂಡಿಸಿದರು. ಮೊಸರು ಹಾಗೂ ಹಾಲು ಕುದಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು ಎಂದು ಹೇಳಿದರು.
ಬೆಂಗಳೂರು ನಗರ ಪ್ರಚಾರ ಸಮಿತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಕೆ ಟಿ ನವೀನ್, ಚೇತನ್, ಚಿಕ್ಕಣ್ಣ, ಅನಿಲ್ ಕುಮಾರ್, ಮಹಿಳಾ ಕಾಂಗ್ರೆಸ್ ಮುಖಂಡರಾದ ಆಶಾ ರಾಜ್, ವಿಮಲಾ ವೆಂಕಟೇಶ್, ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದರು.
ಇದನ್ನೂ ಓದಿ : ಚಿಕ್ಕೋಡಿಯಲ್ಲಿ ಶಾಲಾ ಶಿಕ್ಷಕ ವಜಾ.. ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆಗೆ ಕುಳಿತ ವಿದ್ಯಾರ್ಥಿಗಳು