ETV Bharat / state

ವೇಲು ನಾಯ್ಕರ್ ಬಂಧನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್​ ಆಗ್ರಹ - ಬೆಂಗಳೂರು ಸುದ್ದಿ 2020

ರಾಜರಾಜೇಶ್ವರಿ ನಗರ ಉಪ ಚುನಾವಣೆ ಪ್ರಚಾರದ ವೇಳೆ, ಕಾಂಗ್ರೆಸ್ ನಾಯಕರ ಮೇಲೆ ಹಲ್ಲೆ ನಡೆಸಿರುವ ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಬಂಧನಕ್ಕೆ ಆಗ್ರಹಿಸಿ ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಕಾಂಗ್ರೆಸ್ ಕಾರ್ಯಕರ್ತ ಪ್ರತಿಭಟನೆ
ಕಾಂಗ್ರೆಸ್ ಕಾರ್ಯಕರ್ತ ಪ್ರತಿಭಟನೆ
author img

By

Published : Oct 21, 2020, 2:50 PM IST

ಬೆಂಗಳೂರು: ರಾಜರಾಜೇಶ್ವರಿ ನಗರ ಉಪ ಚುನಾವಣೆ ಪ್ರಚಾರದ ವೇಳೆ, ಕಾಂಗ್ರೆಸ್ ನಾಯಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಅವರನ್ನು ಬಂಧಿಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆಗ್ರಹಿಸಿದ್ದಾರೆ.

ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನಾನಿರತ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಮಾತನಾಡಿದ ಅವರು, ವೇಲು ನಾಯ್ಕರ್ ಹಾಗೂ ಬೆಂಬಲಿಗರು ಹಲ್ಲೆ ನಡೆಸಿರುವ ಹಿನ್ನೆಲೆಯಲ್ಲಿ ದೂರು ಕೊಡುತ್ತೇವೆ. ವೇಲು ನಾಯ್ಕರ್ ಹಾಗೂ ಬೆಂಬಲಿಗರ ಬಂಧನ ಆಗಲೇಬೇಕು. ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇಲ್ಲಿ ಅಕ್ರಮವಾಗಿ ಚುನಾವಣೆ ನಡೆಯುತ್ತಿದೆ. ಅಕ್ರಮದ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಚುನಾವಣಾ ಆಯೋಗ ಕ್ರಮಕ್ಕೆ ಮುಂದಾಗಿದೆ. ತನಿಖೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ. ಈ ನಡುವೆ ಇಲ್ಲಿ ಹಲ್ಲೆ ನಡೆದಿದೆ. ಇದರ ವಿರುದ್ಧವೂ ದೂರು ನೀಡ್ತಿದ್ದೇವೆ. ಪೊಲೀಸರು ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಕಾಂಗ್ರೆಸ್ ಇಂತಹ ಗೂಂಡಾ ಸಂಸ್ಕೃತಿಗೆ ಮಣಿಯಲ್ಲ. ನಾವು ಹೋರಾಟವನ್ನ ಹೆಚ್ಚು ಮಾಡಬೇಕಾಗುತ್ತದೆ ಎಂದರು.

ಡಿಸಿಎಂ ಅಶ್ವತ್ಥ ನಾರಾಯಣ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ ಮೀರ್ ಸಾಧಿಕ್ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ನಿಜವಾದ ಮೀರ್ ಸಾಧಿಕ್ ಅಂದ್ರೆ ಅಶ್ವತ್ಥ ನಾರಾಯಣ್ ಅವರ ಮನಸಲ್ಲಿ‌ ಇರೋದನ್ನ ಹೇಳಿದ್ದಾರೆ. ಡಿಕೆಶಿ ನಿಜವಾಗಿಯೂ ಸಮ್ಮಿಶ್ರ ಸರ್ಕಾರವನ್ನು ಉಳಿಸುವ ಪ್ರಯತ್ನ ಮಾಡಿದರು. ಅದಕ್ಕಾಗಿ ಮುಂಬೈಗೂ‌‌ ಕೂಡ ಹೋಗಿದ್ರು. ಶಾಸಕರನ್ನು ಒಟ್ಟುಗೂಡಿಸಿ ಆಪರೇಷನ್ ಮಾಡಿದ್ದು ಅಶ್ವತ್ಥ ನಾರಾಯಣ್​. ಅವರು ಕೂಡ ಬಾಂಬೆ ಹೊಟೇಲ್​ನಲ್ಲಿ ‌ಕೂತಿದ್ದರು. ಅದೆಲ್ಲಾ ನೋಡಿದರೆ ‌ಮೀರ್ ಸಾಧಿಕ್ ಯಾರು ಅಂತ ಗೊತ್ತಾಗುತ್ತೆ ಎಂದರು.

ಮಾಜಿ ಸಂಸದ ಧೃವ ನಾರಾಯಣ್ ಮಾತನಾಡಿ, ಬೆಳಗ್ಗೆ ಲಕ್ಷ್ಮಿದೇವಿನಗರದಲ್ಲಿ ಪ್ರಚಾರ ಮಾಡ್ತಿದ್ವಿ. ಮನೆಗಳಿಗೆ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದೆವು. ಈ ವೇಳೆ ಬಂದ ವೇಲು ನಾಯ್ಕರ್ ಹಾಗೆ ಮಾಡಬೇಡಿ ಅಂದ್ರು. ಇದನ್ನ ಮೊಬೈಲ್​ನಲ್ಲಿ ನಮ್ಮ ಕಾರ್ಯಕರ್ತ ಚಿತ್ರೀಕರಿಸುತ್ತಿದ್ರು. ಆ ಕಾರ್ಯಕರ್ತನನ್ನ ವೇಲು ನಾಯ್ಕರ್ ಹೊಡೆದಿದ್ದಾರೆ. ಅಲ್ಲದೇ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ನಮ್ಮ ಕಣ್ಣೆದುರೇ ಅವರು ಹಲ್ಲೆ ಮಾಡಿದ್ದಾರೆ. ಹೀಗಾದರೆ ಪಾರದರ್ಶಕ ಚುನಾವಣೆ ಹೇಗೆ ನಡೆಯೋಕೆ ಸಾಧ್ಯ? ಅಧಿಕಾರಿಗಳು ಅವರ ಪರವೇ ವರ್ತಿಸುತ್ತಿದ್ದಾರೆ. ಇಲ್ಲಿಯೂ ದೂರು ನೀಡ್ತಿದ್ದೇವೆ. ಚುನಾವಣಾ ಆಯೋಗಕ್ಕೂ ದೂರು ನೀಡ್ತೇವೆ ಎಂದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಪಾಲ್ಗೊಂಡು ಮಾತನಾಡಿ, ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಹಲ್ಲೆ ನಡೆಸಿದ್ದಾರೆ. ನಮ್ಮ ಮಾಜಿ ಸಂಸದರು, ಸದಸ್ಯರ ಮುಂದೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಧಮ್ಕಿ ಕೂಡಾ ಹಾಕಿದ್ದಾರೆ. ಮತದಾರರ ಗುರುತಿನ ಚೀಟಿ ತಪಾಸಣೆ ಮಾಡಿದ್ರೆ ಮಾಡಬೇಡಿ ಅಂದಿದ್ದಾರೆ. ನಮ್ಮ ಮುಂದೆಯೇ ಈ ರೀತಿ ಮಾಡಿದ್ರೆ ಹೇಗೆ? ಮುನಿರತ್ನ ಸಪೋರ್ಟ್​ನಿಂದಲೇ ಮಾಡಿದ್ದಾರೆ. ನಾವು ಎಸಿಪಿ ಗಮನಕ್ಕೆ ತಂದರೆ ಬೇಜವಾಬ್ದಾರಿ ಹೇಳಿಕೆ ಕೊಡ್ತಾರೆ. ಅದೇನು ದೊಡ್ಡದೇನ್ ಬನ್ರಿ ಅಂತ ನಮಗೆ ಕರೀತಾರೆ. ಇಂತಹ ಎಸಿಪಿ ಇದ್ದರೆ ನ್ಯಾಯ ಸಿಗುವುದು ಹೇಗೆ? ವೇಲು ನಾಯ್ಕರ್ ಅವರನ್ನ ಬಂಧಿಸಬೇಕು. ಇಲ್ಲವಾದರೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.

ಇದೀಗ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ಸಂಸದ ಡಿ.ಕೆ.ಸುರೇಶ್ ಆಗಮಿಸಿದ್ದು, ಪೊಲೀಸ್​​​​​ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.