ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕನ ಆಯ್ಕೆ ಸಂಬಂಧ ನಗರದ ಖಾಸಗಿ ಹೊಟೇಲ್ನಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರು ಅಭಿಪ್ರಾಯ ಸಂಗ್ರಹ ನಡೆಯುತ್ತಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂಧನ್ ಮಿಸ್ತ್ರಿ ನೇತೃತ್ವದಲ್ಲಿ ಖಾಸಗಿ ಹೊಟೇಲ್ನಲ್ಲಿ 60 ಹಿರಿಯ ಕಾಂಗ್ರಸ್ ಮುಖಂಡರ ಅಭಿಪ್ರಾಯವನ್ನು ಸಂಗ್ರಹಿಸಲಾಗುತ್ತಿದೆ. ಅಭಿಪ್ರಾಯ ಸಂಗ್ರಹಿಸುವ 60 ಹಿರಿಯ ಕಾಂಗ್ರೆಸ್ ಮುಖಂಡರ ಪಟ್ಟಿ ಮಾಡಲಾಗಿದ್ದು, ಇವರ ಜತೆ ಒನ್ ಟು ಒನ್ ಅಭಿಪ್ರಾಯವನ್ನು ಮಿಸ್ತ್ರಿ ಸಂಗ್ರಹಿಸುತ್ತಿದ್ದಾರೆ.
ಆ ಪಟ್ಟಿಯಲ್ಲಿ ಮೂಲ ಕಾಂಗ್ರೆಸಿಗರ ಸಂಖ್ಯೆ ಹಾಗು ಸಿದ್ದರಾಮಯ್ಯ ಬೆಂಬಲಿಗರ ಸಂಖ್ಯೆ ಬಹುತೇಕ ಸಮ ಬಲದಲ್ಲಿ ಇದೆ. ಅಭಿಪ್ರಾಯ ಸಂಗ್ರಹದ ವೇಳೆ ಯಾರ ಪರ ಒಲವು ಹೆಚ್ಚಾಗಿರುತ್ತದೆ ಅನ್ನೋದು ಕುತೂಹಲ ಕೆರಳಿಸಿದೆ. ಪಟ್ಟಿಯಲ್ಲಿ ಮೂಲ ಕಾಂಗ್ರೆಸ್ಸಿಗರ ಬಲವೂ ಹೆಚ್ಚಿದೆ.
ಸಿದ್ದು ಪರ ಸಹಿ ಸಂಗ್ರಹ
ಸಿದ್ದು ಬೆಂಬಲಿಗ ಶಾಸಕರಿಂದ ಪತ್ರ ರಾಜಕೀಯ ನಡೆಯುತ್ತಿದೆ. ಮಿಸ್ತ್ರಿ ಸಭೆ ನಡೆಸುತ್ತಿರೋ ಹೊಟೇಲ್ನಲ್ಲೇ ಸಿದ್ದರಾಮಯ್ಯ ಬೆಂಬಲಿಗರಿಂದ ಪ್ರತ್ಯೇಕ ಸಭೆ ನಡೆದಿದೆ. ಎಲ್ಲಾ ಸಿದ್ದರಾಮಯ್ಯ ಬೆಂಬಲಿಗ ಶಾಸಕರನ್ನು ಕರೆದು ಸಿದ್ದರಾಮಯ್ಯ ಪರ ಸಹಿ ಸಂಗ್ರಹ ಮಾಡಲಾಗುತ್ತಿದೆ.
ಶಾಸಕರಾದ ಕೃಷ್ಣಭೈರೇಗೌಡ, ಜಮೀರ್ ಅಹಮದ್, ಭೈರತಿ ಸುರೇಶ್, ರಿಜ್ವಾನ್ರಿಂದ ಸಹಿ ಸಂಗ್ರಹ ಮಾಡಲಾಗಿದೆ. ಸಹಿ ಸಂಗ್ರಹಿಸಿ ಮಧುಸೂಧನ್ ಮಿಸ್ತ್ರಿಗೆ ಮನವಿ ಸಲ್ಲಿಸಲಿದ್ದಾರೆ. ಇತ್ತ ಸಿದ್ದರಾಮಯ್ಯ ಪರ ಸಹಿ ಸಂಗ್ರಹಕ್ಕೆ ಮೂಲ ಕಾಂಗ್ರೆಸ್ಸಿಗರಿಂದ ವಿರೋಧ ವ್ಯಕ್ತವಾಗಿದೆ.