ಬೆಂಗಳೂರು: ಸಿಡಿ ಮಾಡಿರುವುದು ಬಿಜೆಪಿಯವರೇ ಎಂದು ಕೈ ಶಾಸಕ ಅಜಯ್ ಸಿಂಗ್ ಸಚಿವ ಎಸ್.ಟಿ. ಸೋಮಶೇಖರ್ಗೆ ತಿರುಗೇಟು ನೀಡಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿಡಿ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂಬ ಎಸ್.ಟಿ. ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಸೋಮಶೇಖರ್ ಈ ಸ್ಥಾನಕ್ಕೆ ಬಂದು, ಸಚಿವರಾಗಿದ್ರೆ ಅದಕ್ಕೆ ಕಾಂಗ್ರೆಸ್ ಕಾರಣ. ಕಾಂಗ್ರೆಸ್ನಲ್ಲಿ 20 ವರ್ಷದಿಂದ ಇದ್ದು, ಬೆರೆತು ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಸಿಡಿ ಮಾಡಿದೆ ಅನ್ನೋ ಆರೋಪ ಸಂಪೂರ್ಣ ಸುಳ್ಳು. ಬಿಜೆಪಿಯವರೇ ಅವರ ಸಚಿವರ ಸಿಡಿ ಮಾಡಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಪಕ್ಷದಲ್ಲಿ ಅಸಮಾಧಾನ ಇದ್ದು, ಯಾವಾಗ ಬೇಕಾದ್ರೂ ಸ್ಫೋಟವಾಗಲಿದೆ. ಎರಡು ಮೂರು ತಿಂಗಳಲ್ಲಿ ಅದು ಸ್ಫೋಟವಾಗಲಿದೆ. ಪರಸ್ಪರ ಒಬ್ಬೊಬ್ಬರ ಕಾಲೆಳೆಯುತ್ತಿದ್ದಾರೆ. ಇದನ್ನು ಮಾಡಿದ್ದು ಬಿಜೆಪಿ ಹೊರತು, ಬೇರೆ ಪಕ್ಷದವರಲ್ಲ. ಬೇರೆ ಪಕ್ಷದವರ ಮೇಲೆ ಆರೋಪ ಮಾಡೋದು ಸರಿಯಲ್ಲ ಎಂದು ಅವರು ಕಿಡಿಕಾರಿದರು.