ಬೆಂಗಳೂರು : ಕಾಂಗ್ರೆಸ್ನ ಮುಖ್ಯ ಸಚೇತಕ ಅಜಯ್ ಸಿಂಗ್ ಕೊರೊನಾ ಮೇಲಿನ ಚರ್ಚೆ ವೇಳೆ ಸೋಂಕಿತ ಸರ್ಕಾರ ಎಂಬ ಬರಹ ಇರುವ ಮಾಸ್ಕ್ ಧರಿಸಿ ಗಮನ ಸೆಳೆದರು. ಚರ್ಚೆ ವೇಳೆ, ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಕೊರೊನಾ ಸಂಬಂಧ ಸರ್ಕಾರದ ವೈಫಲ್ಯಗಳನ್ನು ಪ್ರಸ್ತಾಪಿಸಿದರು.
ಈ ವೇಳೆ ಸೋಂಕಿತ ಸರ್ಕಾರ ಎಂಬ ಸ್ಲೋಗನ್ ಉಳ್ಳ ಮಾಸ್ಕ್ ಧರಿಸಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ವಿರುದ್ಧ ಪ್ರತಿಭಟನಾ ರೀತಿಯಲ್ಲಿ ಸೋಂಕಿತ ಸರ್ಕಾರ ಎಂಬ ಘೋಷಣೆಯ ಕಪ್ಪು ಮಾಸ್ಕ್ ಧರಿಸಿ, ಕೋವಿಡ್- 19 ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು. ಮೊದಲಿಗೆ ಸರ್ಜಿಕಲ್ ಮಾಸ್ಕ್ ಧರಿಸಿದ್ದ ಅಜಯ್ ಸಿಂಗ್, ಮಾತಿನ ಮಧ್ಯೆ ಪ್ರತಿಭಟನಾರ್ಥವಾಗಿ ಸೋಂಕಿತ ಸರ್ಕಾರ ಎಂಬ ಬರಹದ ಕಪ್ಪು ಬಣ್ಣದ ಮಾಸ್ಕ್ ಧರಿಸಿದರು. ಆ ಮೂಲಕ ಸರ್ಕಾರಕ್ಕೆ ಸದನದಲ್ಲಿ ಪ್ರತಿಭಟನೆಯ ಬಿಸಿ ಮುಟ್ಟಿಸಲು ಮುಂದಾದರು.