ETV Bharat / state

ಸಿಎಂ ಭಾಷಣ ವಿರೋಧಿಸಿ ಸಭಾತ್ಯಾಗ ಮಾಡಿದ ಕಾಂಗ್ರೆಸ್ ಸದಸ್ಯರು

ಜನರ ಬಗ್ಗೆ ಯಾವುದೇ ಕಾಳಜಿ ಈ ಸರ್ಕಾರಕ್ಕೆ ಇಲ್ಲ ಎಂದು ಸಿಎಂ ಭಾಷವಣನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.

author img

By

Published : Feb 20, 2023, 5:05 PM IST

congress-members-protested-against-the-cms-speech
ಸಿಎಂ ಭಾಷಣ ವಿರೋಧಿಸಿ ಸಭಾತ್ಯಾಗ ಮಾಡಿದ ಕಾಂಗ್ರೆಸ್ ಸದಸ್ಯರು

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ವಿವರಣೆ ಪಡೆಯಲು ಕಾಂಗ್ರೆಸ್ ಮುಂದಾದಾಗ, ಸ್ಪೀಕರ್ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿ ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ಹಾಗೂ ಕಾಂಗ್ರೆಸ್​ ಸದಸ್ಯರು ಸಭಾಧ್ಯಕ್ಷರ ನಿಲುವು ಖಂಡಿಸಿ ಸಭಾತ್ಯಾಗ ಮಾಡಿದರು. ಇದೇ ವೇಳೆ ಸಿಎಂ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ಉಪನಾಯಕ ಯು.ಟಿ. ಖಾದರ್, ನಿಮ್ಮ ಭಾಷಣ ಕೇವಲ ಸದನಕ್ಕೆ ಅಷ್ಟೇ ಸೀಮಿತವಾಗದಿರಲಿ. ಬಡವರಿಗೆ ರೇಷನ್ ಕಾರ್ಡ್ ನೀಡಲು ಇನ್ನೂ ಆಗಿಲ್ಲ. ಹೊರಗಡೆ ಜನರು ಏನು ಮಾತನಾಡುತ್ತಿದ್ದಾರೆ ಎಂಬುದನ್ನು ತಿಳಿಯಿರಿ. ನಿಮ್ಮ ಪಕ್ಷದ ಶಾಸಕರಿಗೆ ಜನರ ಆಕ್ರೋಶ ಗೊತ್ತಾಗುತ್ತಿದೆ. ಮೀನುಗಾರರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದರು.

ಕಡಲು ಕೊರೆತ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಕೆರಿಯರ್ ಗೈಡೈನ್ಸ್ ತರಬೇತಿ ಕೇಂದ್ರಗಳ ಮೇಲೆ ದಾಳಿಯಾಗಿದೆ. ಸಮಾಜ ವಿರೋಧಿ ಶಕ್ತಿಗಳು ಈ ರೀತಿ ವರ್ತನೆ ಮಾಡ್ತಿವೆ. ಸರ್ಕಾರ ಇಂತಹ ಯಾವುದೇ ಕೆಲಸಕ್ಕೂ ಅವಕಾಶ ಕೊಡಬಾರದು. ಸರ್ಕಾರ ಯಾವುದೇ ರೀತಿಯಲ್ಲೂ ಸೂಕ್ತ ಕ್ರಮ ಕೈಗೊಂಡಿಲ್ಲ. ಜನರ ಬಗ್ಗೆ ಯಾವುದೇ ಕಾಳಜಿ ಈ ಸರ್ಕಾರಕ್ಕೆ ಇಲ್ಲ ಎಂದು ಸಿಎಂ ಭಾಷವಣನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.

ರಾಜ್ಯದ ಜನ ಇವರಿಗೆ ಕಿವಿ ಮೇಲೆ ಹೂವು ಇಡುತ್ತಾರೆ: ಇದಕ್ಕೂ ಮುನ್ನ ಮಾತನಾಡಿದ ಸಿಎಂ, 10 ಲಕ್ಷ ರೇಷನ್ ಕಾರ್ಡ್​ಗಳನ್ನು ಕೊಡಲು ವ್ಯವಸ್ಥೆ ಮಾಡಲಾಗಿದೆ. ಕಡಲು ಕೊರೆತ ಕಾಮಗಾರಿ ಶೀಘ್ರ ಆರಂಭಿಸಲಾಗುವುದು. ಅಡಿಕೆ ರೋಗ ತಡೆಯಲು ಸಂಶೋಧನೆ ಮಾಡಲು 25 ಲಕ್ಷ ರೂ. ನೀಡಲಾಗಿದೆ. ಕಾನೂನು ಸುವ್ಯವಸ್ಥೆ ಕುರಿತು ಖಾದರ್ ಬಹಳ ಸಲ ಹೇಳ್ತಾರೆ. ಮೊನ್ನೆ ಕಾಂಗ್ರೆಸ್​ನವರು ಕಿವಿ ಮೇಲೆ ಹೂವು ಇಟ್ಕೊಂಡು ಬಂದಿದ್ದರು. ಅವರು ತಿರುಗಾಡಿ ಬಂದ ಮೇಲೆ ಗೊತ್ತಾಗಿದೆ. ರಾಜ್ಯದ ಜನ ಇವರಿಗೆ ಕಿವಿ ಮೇಲೆ ಹೂವು ಇಡುತ್ತಾರೆ ಅಂತ, ಕಾಂಗ್ರೆಸ್​ನವರು ಸುಳ್ಳಿನ ಸುಳಿಯಲ್ಲಿ ಸಿಲುಕಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ನಮ್ಮನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ. ನಾನು ಅವರಿಗೆ ಸವಾಲು ಹಾಕುತ್ತೇನೆ, ನೀವು ದೂರು ಕೊಡಿ. ಎಲ್ಲಾ ದೂರಿನ ಕುರಿತು ತನಿಖೆಗಾಗಿ ಲೋಕಾಯುಕ್ತಕ್ಕೆ ಶಿಫಾರಸ್ಸು ಮಾಡ್ತೇವೆ ಎಂದು ಹೇಳಿದರು.

ಬೈಂದೂರಿನಲ್ಲಿ ಕರ್ನಾಟಕದ ಮೊದಲ ಮರೀನಾ: ಕೃಷಿ, ಶಿಕ್ಷಣ, ಸಮಾಜ ಕಲ್ಯಾಣ (ಪರಿಶಿಷ್ಟರ ಕಲ್ಯಾಣ), ಆರೋಗ್ಯ ಹಾಗೂ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ನಗರಗಳ ಮೂಲ ಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸಲು ಸ್ಪಷ್ಟ-ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕರಾವಳಿ ನಿಯಂತ್ರಣ ವಲಯ ಕಾಯ್ದೆಯ (ಸಿಆರ್​​ಝಡ್​) ನಿರ್ಬಂಧಗಳನ್ನು ಕೇಂದ್ರ ಸರ್ಕಾರ ಸಡಿಲಿಸಿದ ಪರಿಣಾಮ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಮರೀನಾ (ಮೀನು ಪ್ರವಾಸೋದ್ಯಮ) ಯೋಜನೆ ಜಾರಿಗೆ ತರಲಾಗಿದೆ. ಉಡುಪಿ ಜಿಲ್ಲೆ ಬೈಂದೂರಿನಲ್ಲಿ ಕರ್ನಾಟಕದ ಮೊದಲ ‘ಮರೀನಾ’ ತಲೆ ಎತ್ತಲಿದೆ ಎಂದು ಸಿಎಂ ತಿಳಿಸಿದರು. ನಂತರ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಸದನದಲ್ಲಿ ಅಂಗೀಕಾರಗೊಂಡಿತು.

ಇದನ್ನೂ ಓದಿ: ಸೈಬರ್ ವಂಚನೆ ತಡೆಗೆ ಕಟ್ಟುನಿಟ್ಟಿನ ಕ್ರಮ: ಗೃಹ ಸಚಿವ ಆರಗ ಜ್ಞಾನೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.