ಬೆಂಗಳೂರು: ನಗರದ ಬಸವನಗುಡಿಯ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಾಗೂ ವಸಿಷ್ಠ ಸಹಕಾರ ಸಂಘದ ಅಕ್ರಮದ ತನಿಖೆಯ ಪ್ರಗತಿ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದರು. ವಿಧಾನ ಪರಿಷತ್ ಸದಸ್ಯ ಯುಬಿ ವೆಂಕಟೇಶ್, ಕೆಪಿಸಿಸಿ ವೈದ್ಯರ ಘಟಕದ ಅಧ್ಯಕ್ಷ ಡಾ ಶಂಕರ್ ಗುಹಾ ಅವರು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸುವಂತೆ ಒತ್ತಾಯಿಸಿದರು.
ಈ ಕುರಿತು ಡಾ ಶಂಕರ್ ಗುಹಾ ಮಾತನಾಡಿ, ನರಸಿಂಹ ಅಂತ ಒಬ್ಬರು ಇದ್ದಾರೆ. ಬ್ಯಾಂಕಿನಿಂದ 8 ರಿಂದ 10 ಕೋಟಿ ಹೋಗಿದೆ. ಆದರೆ ಇವರಿಗೆ ಹೋಗಿರುವುದು 50 ಕೋಟಿ. ಇನ್ನೊಬ್ಬರು ಸುರೇಶ್ ಅಂತ ಅವರ ಹಣ 108 ಕೋಟಿ. ಆದರೆ ಅವರಿಗೆ ಹೋಗಿರುವುದು 10 ಕೋಟಿ. ಹೆಬ್ಬುಲಿ ಸಿನಿಮಾ ಡೈರೆಕ್ಟರ್ 300 ಕೋಟಿ ಲೋನ್ ಪಡೆದಿದ್ದಾರೆ. ಮಾಜಿ ಎಂಎಲ್ಸಿ ಅಶ್ವಥ್ ನಾರಾಯಣ್ 12 ಕೋಟಿ ಲೋನ್ ಪಡೆದಿದ್ದಾರೆ. ಇವರೆಲ್ಲರ ಹೆಸರು ಸಿಬಿಐಗೆ ಹೋಗಿದೆ. ತೇಜಸ್ವಿ ಸೂರ್ಯ ಮಾತ್ರ ಇದರ ಬಗ್ಗೆ ಮಾತನಾಡಿದ್ದಾರೆ. ರವಿ ಸುಬ್ರಮಣ್ಯ ಕೂಡ ಮಾತನಾಡಿದ್ದಾರೆ. ಉಳಿದ ಯಾವ ನಾಯಕರು ಮಾತನಾಡಿಲ್ಲವೇಕೆ? ಸ್ವತಃ ಸಿಎಂ ಅವರೇ ಮಾತನಾಡಿಲ್ಲವೇಕೆ? ಎಂದು ಪ್ರಶ್ನಿಸಿದರು.
2 ವರ್ಷವಾದರೂ ಒಂದು ಪೈಸೆ ಬಂದಿಲ್ಲ : ವಸಿಷ್ಠ ಸಂಸ್ಥೆ, ಸ್ಥಳೀಯ ಶಾಸಕರಿಗೆ ಸಂಬಂಧವಿದೆ. ಶಾಸಕರೇ ಸಭೆಯಲ್ಲಿ ಹೇಳ್ತಾರೆ, ಹಣ ಎಲ್ಲೂ ಹೋಗಲ್ಲ ಬರುತ್ತೆ ಅಂತಾರೆ. ಅವರು ಹೇಳಿ 2 ವರ್ಷ ವಾದರೂ ಒಂದು ಪೈಸೆ ಬಂದಿಲ್ಲ. ಯಾರಿಗೆ ಕೊಟ್ರು, ಹೇಗೆ ಕೊಟ್ರು ಗೊತ್ತಿಲ್ಲ. ಯಾವ ಮಾನದಂಡದ ಮೇಲೆ ಕೊಟ್ರು. ಅದಕ್ಕೆ ದಾಖಲೆಗಳು ಬೇಕಲ್ಲ ಎಂದು ಕೇಳಿದರು. ರಾಘವೇಂದ್ರ ಜೊತೆ ಮತ್ತೊಂದು ಸಂಸ್ಥೆ ಸೇರಿದೆ. ಅದರಲ್ಲೂ ದೊಡ್ಡ ಹಗರಣ ನಡೆದಿದೆ. ಇದರ ಬಗ್ಗೆಯೂ ತೇಜಸ್ವಿ ಸೂರ್ಯ, ರವಿಸುಬ್ರಮಣ್ಯ ಮಾತನಾಡಿಲ್ಲ ಎಂದರು.
ಕಣ್ವ ಸಂಘದಿಂದ 2000 ಕೋಟಿ ಫ್ರಾಡ್ ಆಗಿದೆ. ಅದರ ಬಗ್ಗೆ ಇಲ್ಲಿಯವರೆಗೆ ಕ್ರಮ ತೇಗೆದುಕೊಂಡಿಲ್ಲ. ಕ್ಲೈಮ್ ಫಾರಂ ಕೊಡ್ತಿದ್ದಂತೆ ದುಡ್ಡು ವಾಪಸ್ ಬರಲ್ಲ. ಕ್ಲೈಮ್ ಕಮಿಟಿ ಕೊಟ್ಟಾಗ ಮಾತ್ರ ಅದು ಬರುತ್ತದೆ. ಇವತ್ತು ಹಣ ಹೂಡಿದವರ ಕಥೆ ಏನು? ವಸಿಷ್ಠ, ಗುರುರಾಘವೇಂದ್ರ ಬ್ಯಾಂಕ್ ಫ್ರಾಡ್ ಬಗ್ಗೆ ಶಾಸಕರೇ ತೆಗೆದುಕೊಳ್ಳಬೇಕು. ಫ್ರಾಡ್ ಆಗಿರುವ ಹಣವನ್ನ ಇನ್ವೆಸ್ಟ್ ಮಾಡಿದವರಿಗೆ ಕೊಡಬೇಕು ಎಂದು ಆಗ್ರಹಿಸಿದರು.
ಸಂಸದ ತೇಜಸ್ವಿ ಸೂರ್ಯ ಫ್ಲೈಟ್ ಡೋರ್ ಓಪನ್ ವಿಚಾರ : ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೇಳಿಬಂದಿರುವ ಫ್ಲೈಟ್ ಡೋರ್ ಓಪನ್ ವಿಚಾರ ಕುರಿತು ಮಾತನಾಡಿ, ಇದು ಮೂರು ಜನರ ನಾಲ್ಕು ಕಥೆಗಳು. ಯಾವ ಅಮಲಿನಲ್ಲಿ ಡೋರ್ ತೆಗೆದರೂ ಗೊತ್ತಿಲ್ಲ. ತೇಜಸ್ವಿ ಸೂರ್ಯ ಡೋರ್ ತೆಗೆದರಂತೆ. ನಂತರ ಎಲ್ಲ ಪ್ರಯಾಣಿಕರ ಬಳಿ ಹೋಗಿ ಕ್ಷಮೆ ಕೇಳಿದರಂತೆ. ಅಣ್ಣಾ ಮಲೈ ಡೋರ್ ಓಪನ್ ಆಗಿತ್ತಂತೆ. ಅದನ್ನ ಮುಚ್ಚೋಕೆ ಹೋದರಂತೆ. ಪಾಪ ಪ್ರಯಾಣಿಕರನ್ನು ರಕ್ಷಣೆ ಮಾಡಿದರಂತೆ. ಅವರ ಕೂದಲು, ಸ್ಯಾಂಪಲ್ ಪಡೆದು ತನಿಖೆ ಮಾಡಲಿ. ಆಗ ಯಾವ ಅಮಲು ಅಂತ ಗೊತ್ತಾಗುತ್ತದೆ. ಅವರಿಗೆ ಅದಕ್ಕೆ ಭಯವೇಕೆ? ನಮಗೇನೋ ಅವರ ಅಮಲಿನ ಬಗ್ಗೆ ಶಂಕೆಯಿದೆ. ಹಾಗಾಗಿ ತನಿಖೆ ಮಾಡಲಿ, ಗೊತ್ತಾಗುತ್ತೆ ಏನು ಅಂತ ಎಂದು ಶಂಕರ್ ಗುಹಾ ಗಂಭೀರ ಆರೋಪ ಮಾಡಿದರು.
2012 ರಿಂದಲೂ ಪ್ರಾಡ್ ಆಗಿದೆ : ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಮಾತನಾಡಿ, 2012 ರಿಂದಲೂ ಪ್ರಾಡ್ ಆಗಿದೆ ಅಂತಾರೆ. ಆರ್ಬಿಐ ಕಲ್ಪ್ರಿಟ್ ಅಂತ ಅನ್ನಿಸುತ್ತಿದೆ. ಸರ್ಕಾರ ಇಲ್ಲಿ ಯಾರನ್ನ ರಕ್ಷಣೆ ಮಾಡ್ತಿದೆ? ಕಾನೂನಾತ್ಮಕವಾಗಿ ಏನೇನೂ ಕ್ರಮವಿಲ್ಲ. ಇಲ್ಲಿ ಹಣ ಪಡೆದವರೆಲ್ಲ ದೊಡ್ಡವರೇ ಇದ್ದಾರೆ. ಸಿಬಿಐ ತನಿಖೆಯಾಗಲಿ. ನಾವು ಆ ದೊಡ್ಡವರ ಹೆಸರನ್ನು ಕೊಡುತ್ತೇವೆ ಎಂದು ಹೇಳಿದರು.
ಗುರು ರಾಘವೇಂದ್ರ ಬ್ಯಾಂಕ್ ವಂಚನೆ ಆರೋಪ ವಿಚಾರ ಮಾತನಾಡಿ, ಪಾಪ ಜನ ತಮ್ಮ ಹಣವನ್ನು ಇಟ್ಟಿದ್ದರು. ಬಡಬಗ್ಗರು ಈ ಬ್ಯಾಂಕ್ ನಲ್ಲಿ ಹಣ ಇಟ್ಟಿದ್ದರು. 2017 ರಲ್ಲಿ ಇವರ ಅಮೌಂಟ್ ಶೂನ್ಯ. ಬ್ಯಾಂಕ್ ನಲ್ಲಿ ಇಟ್ಟಿರುವ ಹಣವೇ ಇರಲಿಲ್ಲ. ಆರ್ಬಿಐ 2014 ರಿಂದ ಅಡಿಟ್ ಮಾಡಬೇಕು ಎಂದಿತ್ತು. ಇದರ ಬಗ್ಗೆ ನಾವು ಧ್ವನಿ ಎತ್ತಿದ್ದೆವು. ಜನರಿಗೆ ನ್ಯಾಯ ದೊರಕಿಸಿಕೊಡ್ತೇವೆ ಅಂದರು. ಮೇಲ್ಮನೆಯಲ್ಲೂ ನಾವು ಧ್ವನಿ ಎತ್ತಿದ್ದೆವು. ಆಗ ಸಭಾಪತಿಗಳು ಸಭೆ ಮಾಡೋಣ ಎಂದಿದ್ದರು. ಅದರಂತೆ ಮೊನ್ನೆ ನಾವು ಮೀಟಿಂಗ್ ಮಾಡಿದ್ದೆವು. ಐಟಿ, ಇಡಿ, ಪೊಲೀಸ್ ಎಲ್ಲರೂ ಸಭೆಯಲ್ಲಿದ್ದರು ಎಂದರು.
ಆರ್ಬಿಐ ನವರು ಇವತ್ತು ಕಳ್ಳರೇ?: ಆಗ 1294 ಕೋಟಿ ಲಾಸ್ ಬಗ್ಗೆ ನಾವು ಕೇಳಿದ್ದೆವು. 1000 ಕೋಟಿ ಆಸ್ತಿ ಜಪ್ತಿ ಮಾಡಿದ್ದೇವೆ ಅಂದರು. ನಾವು ಜಪ್ತಿ ಮಾಡಿರೋದು ಜನರಿಗೆ ಕೊಡಿ ಅಂತ ಹೇಳಿದ್ದೆವು. ಆದರೆ ಯಾವುದೇ ಉತ್ತರ ಸರಿಯಾಗಿ ಬರಲಿಲ್ಲ. ಸರ್ಕಾರಕ್ಕೆ ಪ್ರತಿಭಾರಿ ಒತ್ತಾಯ ಮಾಡುತ್ತಲೇ ಇದ್ದೇವೆ. ಫ್ರಾಡ್ ಬಗ್ಗೆ ಕ್ರಮ ಜರುಗಿಸಿ ಎಂದು ಹೇಳಿದ್ದೇವೆ. ಆರ್ಬಿಐ ನವರು ಬಂದು ಹೋದರು. ಇವತ್ತು ಬ್ಯಾಂಕ್ ನಡೆಸುತ್ತಿರುವುದು ಕಳ್ಳರೇ? ಆರ್ಬಿಐ ನವರು ಇವತ್ತು ಕಳ್ಳರೇ? ಆರ್ ಬಿಐ ರೂಲ್ಸ್ ನಂತೆ ಬ್ಯಾಂಕ್ ನಡೆದಿದೆ. ಇಲ್ಲಿ ಆರ್ಬಿಐನವರೇ ಕಳ್ಳರಿದ್ದಂತೆ ಕಾಣ್ತಿದೆ ಎಂದು ಯು ಬಿ ವೆಂಕಟೇಶ್ ಹರಿಹಾಯ್ದರು.
1000 ಕೋಟಿ ಹಣ ಸೀಜ್ ಮಾಡಿದ್ದು ಎಲ್ಲಿ ಹೋಯ್ತು?: ಇಲ್ಲಿಯವರೆಗೆ 108 ಜನ ಸತ್ತಿದ್ದಾರೆ. ಬ್ಯಾಂಕ್ನಲ್ಲಿ ಹಣವಿಟ್ಟು ಮೋಸ ಹೋಗಿದ್ದಾರೆ. 1000 ಕೋಟಿ ಹಣ ಸೀಜ್ ಮಾಡಿದ್ದು ಎಲ್ಲಿ ಹೋಯ್ತು? ಪೊಲೀಸರು ಡೌರಿ ಕೇಸ್ ಕೊಡಿ. ಮನೆಮಂದಿಯನ್ನೆಲ್ಲ ಕರೆದೊಯ್ತಾರೆ. ಈ ಬ್ಯಾಂಕ್ ಹಗರಣದಲ್ಲಿ ಯಾಕೆ ಏನೂ ಮಾಡುತ್ತಿಲ್ಲ. ಈಗ ವಿಧಿ ಇಲ್ಲದೆ ಸಿಬಿಐಗೆ ಕೊಡ್ತೇವೆ ಅಂತಾರೆ. ನಿನ್ನೆ ಕ್ಯಾಬಿನೆಟ್ ಸಭೆ ಆಗಿದೆ, ವಿಷಯ ಚರ್ಚೆಗೆ ಬಂದಿಲ್ಲ. ಮುಂದಿನ ಸಂಪುಟ ಸಭೆಯಲ್ಲಾದರು ಬರುತ್ತೇನೋ ನೊಡೋಣ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ:ಹೈಟೆನ್ಷನ್ ಲೈನ್ ಕೆಳಗೆ ವಾಸಿಸುವ ಮನೆ ಮಾಲೀಕರಿಗೆ ಶುರುವಾಯ್ತು ಆತಂಕ..