ETV Bharat / state

ಬಿಬಿಎಂಪಿ ಅಕ್ರಮ: ಎನ್.ಆರ್. ರಮೇಶ್ ವಿರುದ್ಧ ತನಿಖೆಗೆ ಕೈ ನಾಯಕರ ಆಗ್ರಹ - ಎನ್ಆರ್ ರಮೇಶ್ ಬಿಬಿಎಂಪಿ ಅಕ್ರಮ

ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಮೇಯರ್ ಹಾಗೂ ಮಾಜಿ ಆಡಳಿತ ಪಕ್ಷದ ನಾಯಕರ ನೇತೃತ್ವದಲ್ಲಿ ಸುದ್ದಿಗೋಷ್ಟಿ ನಡೆಯಿತು. ಬಿಜೆಪಿ ವಕ್ತಾರ ಎನ್.ಆರ್. ರಮೇಶ್ ಬಿಬಿಎಂಪಿಯಲ್ಲಿ ಅಕ್ರಮಗಳನ್ನು ನಡೆಸಿದ್ದು, ಅವರ ವಿರುದ್ಧ ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ.

ಎನ್.ಆರ್ ರಮೇಶ್ ಬಿಬಿಎಂಪಿಯಲ್ಲಿ ನಡೆಸಿದ ಅಕ್ರಮಗಳ ವಿರುದ್ಧ ತನಿಖೆಗೆ ಕೈ ನಾಯಕರು ಆಗ್ರಹ
author img

By

Published : Oct 17, 2019, 3:57 PM IST

ಬೆಂಗಳೂರು: ಬಿಜೆಪಿ ವಕ್ತಾರ ಎನ್.ಆರ್. ರಮೇಶ್ ಬಿಬಿಎಂಪಿಯಲ್ಲಿ ನಡೆಸಿದ ಅಕ್ರಮಗಳನ್ನು ನಡೆಸಿದ್ದಾರೆಂದು ಆರೋಪಿಸಿ, ಅವರ ವಿರುದ್ಧ ತನಿಖೆ ನಡೆಯಬೇಕೆಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಮೇಯರ್ ಹಾಗೂ ಮಾಜಿ ಆಡಳಿತ ಪಕ್ಷದ ನಾಯಕರು ಸುದ್ದಿಗೋಷ್ಟಿ ನಡೆಸಿ ಈ ಆಗ್ರಹ ಮಾಡಿದರು. ಸುದ್ದಿಗೋಷ್ಟಿಯಲ್ಲಿ ಹಾಜರಿದ್ದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಮಾಜಿ ಮೇಯರ್​ಗಳಾದ ರಾಮಚಂದ್ರಪ್ಪ, ಪಿ.ಆರ್. ರಮೇಶ್, ಪದ್ಮಾವತಿ, ಮಾಜಿ ಆಡಳಿತ ಪಕ್ಷದ ನಾಯಕರಾದ ಸತ್ಯನಾರಾಯಣ್, ಶಿವರಾಜ್, ವಾಜೀದ್ ಆಗ್ರಹಿಸಿದ್ದಾರೆ.

ಈ ವೇಳೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮಾತನಾಡಿ, ಬಿಬಿಎಂಪಿಯನ್ನ ಎನ್.ಆರ್ ರಮೇಶ್ ಕಂಟ್ರೋಲ್ ಮಾಡುತ್ತಿದ್ದು, ಬಿಬಿಎಂಪಿ ಅಧಿಕಾರಿಗಳು ರಮೇಶ್​ ಅಕ್ರಮಗಳ ಬಗ್ಗೆ ದೂರು ಕೊಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಎನ್. ಆರ್. ರಮೇಶ್ ಪತ್ರ ಬರೆದಿದ್ದಾರೆ. ವೈಟ್ ಟ್ಯಾಪಿಂಗ್ 4ಜಿ ವಿನಾಯತಿ ಕೊಡಿ ಎಂದು ಹೇಳುತ್ತಾರೆ. ಆದರೆ, ಅವರು 16 ಕೋಟಿಯ ಕಾಮಗಾರಿಗಳಿಗೆ ಟೆಂಡರ್ ಯಾಕೆ ಕೊಟ್ಟಿಲ್ಲ? ಅವರೇನು ಸೂಪರ್ ಮಿನಿಸ್ಟರ್ ಆಗಿದ್ದಾರಾ? ಈವರೆಗೂ ಸಿಎಂ ಕಚೇರಿಗೆ ಎಷ್ಟು ಕಿಕ್ ಬ್ಯಾಕ್ ಹೋಗಿದೆ? ಎಂದು ಪ್ರಶ್ನೆಗಳನ್ನು ಎತ್ತಿದ್ದಾರೆ.

ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ:

ಆಡಳಿತ ಯಂತ್ರ ಇಂದು ಹಳಿ ತಪ್ಪಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಉಪಕುಲಪತಿ ಕೊಲೆ ನಡೆಯುತ್ತೆ. ಜೈಲಿನೊಳಗೇ ಪತ್ರಕರ್ತರ ಸಾವಾಗಿದೆ. ಬಾಗಲಕೋಟೆಯಲ್ಲಿ ಡಬಲ್ ಮರ್ಡರ್ ನಡೆದಿದೆ. ಒಟ್ಟಾರೆ, ಲೆಕ್ಕವಿಲ್ಲದಷ್ಟು ಅಪರಾಧಗಳು ವಿಜೃಂಭಿಸುತ್ತಿವೆ. ಇದಕ್ಕೆಲ್ಲ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣವೆಂದು ಸರ್ಕಾರದ ವಿರುದ್ಧ ಮಾಜಿ ಸಂಸದ ಉಗ್ರಪ್ಪ ವಾಗ್ದಾಳಿ ನಡೆಸಿದರು.

Intro:newsBody:ಎನ್.ಆರ್. ರಮೇಶ್ ವಿರುದ್ಧ ಕಾಂಗ್ರೆಸ್ ನಾಯಕರ ಆಕ್ರೋಶ

ಬೆಂಗಳೂರು: ಬಿಜೆಪಿ ವಕ್ತಾರ ಎನ್ ಆರ್ ರಮೇಶ್ ಬಿಬಿಎಂಪಿಯಲ್ಲಿ ನಡೆಸಿದ ಅಕ್ರಮಗಳ ವಿರುದ್ಧ ತನಿಖೆಗೆ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಮೇಯರ್ ಹಾಗು ಮಾಜಿ ಆಡಳಿತ ಪಕ್ಷದ ನಾಯಕರು ಸುದ್ದಿಗೋಷ್ಠಿಯಲ್ಲಿ ಈ ಆಗ್ರಹ ಕೇಳಿಬಂದಿದೆ. ಮಾಜಿ ಸಂಸದ ವಿ ಎಸ್ ಉಗ್ರಪ್ಪ,
ಮಾಜಿ ಮೇಯರ್ ಗಳಾದ ರಾಮಚಂದ್ರಪ್ಪ, ಪಿ.ಆರ್.ರಮೇಶ್, ಪದ್ಮಾವತಿ, ಮಾಜಿ ಆಡಳಿತ ಪಕ್ಷದ ನಾಯಕರಾದ ಸತ್ಯನಾರಾಯಣ್, ಶಿವರಾಜ್, ವಾಜೀದ್ ಜಂಟಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಆಗ್ರಹಿಸಿದರು.
ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮಾತನಾಡಿ, ಬಿಬಿಎಂಪಿಯನ್ನ ಎನ್ ಆರ್ ರಮೇಶ್ ಕಂಟ್ರೋಲ್ ಮಾಡುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ದೂರು ಕೊಡುತ್ತಿದ್ದಾರೆ. ಎನ್ ಆರ್ ರಮೇಶ್ ಕಮಿಷನ್ ಏಜೆಂಟಾ?ಅವರೇನು ಸೂಪರ್ ಮಿನಿಸ್ಟರ್ ಆಗಿದ್ದಾರಾ? ಸರ್ಕಾರದ ಮುಖ್ಯ ಕಾರ್ಯದರ್ಶಿ ಗೆ ಎನ್ ಆರ್ ರಮೇಶ್ ಪತ್ರ ಬರೆದಿದ್ದಾರೆ. ವೈಟ್ ಟಾಪಿಂಗ್ 4ಜಿ ವಿನಾಯತಿ ಕೊಡಿ ಎಂದು ಎನ್ ಆರ್ ರಮೇಶ್ ಹೇಳುತ್ತಾರೆ. 16 ಕೋಟಿಯ ಕಾಮಗಾರಿಗಳಿಗೆ ಟೆಂಡರ್ ಯಾಕೆ ಕೊಟ್ಟಿಲ್ಲ? ಸಿಎಂ ಕಚೇರಿಗೆ ಎಷ್ಟು ಕಿಕ್ ಬ್ಯಾಕ್ ಹೋಗಿದೆ? ಎಂದು ಪ್ರಶ್ನಿಸಿದರು.
ಕಮೀಶನ್ ಏಜೆಂಟ್
ಎನ್ ಆರ್ ರಮೇಶ್ ಒಬ್ಬ ಕಮಿಷನ್ ಏಜೆಂಟ್. ಎನ್ ಆರ್ ರಮೇಶ್, ಮುಖ್ಯ ಕಾರ್ಯದರ್ಶಿ ಹಾಗು ಸಿಎಂ ಕಚೇರಿ ನಡುವೆ ನಡೆದಿರುವ ಹಗರಣ ಇದು. ಈ ರೀತಿ ಎಷ್ಟು ಹಗರಣ ನಡೆದಿದೆ ಗೊತ್ತಿಲ್ಲ. ಈ ಹಗರಣದಲ್ಲಿ ಸಿ ಎಸ್ ಕೂಡ ಭಾಗಿಯಾಗಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಹಾಲಿ ಹೈಕೋರ್ಟ್ ನ್ಯಾಯಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು. ಇಲ್ಲದಿದ್ರೆ ಸರ್ಕಾರದ ವಿರುದ್ಧ ನಾವು ಬೀದಿಗೆ ಇಳಿದು ಹೋರಾಟ ಮಾಡುತ್ತೇವೆ. ನ್ಯಾಯಯುತವಾಗಿರು ಅಧಿಕಾರಿಗಳ ಪರ ನಮ್ಮ ಪಕ್ಷ ಇರುತ್ತೆ ಎಂದರು.
ಕಾನೂನು ಮತ್ತು ಸೂವ್ಯವಸ್ಥೆ ಹದಗೆಟ್ಟಿದೆ
ಆಡಳಿತ ಯಂತ್ರ ಇಂದು ಹಳಿ ತಪ್ಪಿದೆ. ಕಾನೂನು ಮತ್ತು ಸೂವ್ಯವಸ್ಥೆ ಹದಗೆಟ್ಟಿದೆ. ಉಪಕುಲಪತಿ ಮರ್ಡರ್ ನಡೆಯುತ್ತೆ. ಜೈಲಿನೊಳಗೆ ಪತ್ರಕರ್ತರ ಸಾವಾಗಿದೆ. ಬಾಗಲಕೋಟೆಯಲ್ಲಿ ಡಬಲ್ ಮರ್ಡರ್ ನಡೆದಿದೆ. ಒಟ್ಟಾರೆ ಅಪರಾಧ ವಿಜೃಂಬಿಸುತ್ತಿದೆ. ಇದಕ್ಕೆಲ್ಲ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ ಎಂದು ಸರ್ಕಾರದ ವಿರುದ್ಧ ಮಾಜಿ ಸಂಸದ ಉಗ್ರಪ್ಪ ವಾಗ್ದಾಳಿ ನಡೆಸಿದರು.
ಮಾಜಿ ಮೇಯರ್ ಪಿ.ಆರ್. ರಮೇಶ್, ಹಿಂದೆ ಕಸದ ವಿಚಾರದಲ್ಲಿ ವಿಶ್ವಮಟ್ಟದ ಸುದ್ದಿಯಾಗಿತ್ತು. ಬಿಜೆಪಿ ಅಧಿಕಾರಾವಧಿಯಲ್ಲಿ ಸುದ್ದಿಯಾಗಿತ್ತು. ಬಿಬಿಎಂಪಿ ಕಟ್ಟಡಗಳನ್ನೂ ಒತ್ತೆ ಇಟ್ಟಿದ್ದರು. ಅವನ್ನೆಲ್ಲ ನಾವು ಬಂದ ಮೇಲೆ ಬಿಡುಗಡೆ ಮಾಡಿಸಿದ್ದೆವು. ಕಸ ವಿಲೇವಾರಿಯಲ್ಲೂ ನಾವು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದೆವು. ಅದರಂತೆ ವೈಟ್ ಟ್ಯಾಪಿಂಗ್ ಕೂಡ ಉತ್ತಮವಾಗಿತ್ತು. ಅದನ್ನೂ ಈಗ ಬಿಜೆಪಿಯವರು ಹದಗೆಡಿಸುತ್ತಿದ್ದಾರೆ. ಬಿಜೆಪಿಯ ಒಬ್ಬ ವ್ಯಕ್ತಿ ಬ್ಲಾಕ್ ಮೇಲ್ ಮಾಡ್ತಿದ್ದಾನೆ. ಅಧಿಕಾರವಿಲ್ಲದೆಯೇ ಪಾಲಿಕೆ ಮೇಲೆ ದರ್ಪ ಮಾಡ್ತಿದ್ದಾನೆ ಎಂದು ಎನ್.ಆರ್.ರಮೇಶ್ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಜಿ ಮೇಯರ್ ರಾಮಚಂದ್ರಪ್ಪ ಮಾತನಾಡಿ, ಟೆಂಡರ್ ಇಲ್ಲದೆ ಯಾವ ಕೆಲಸ ಮಾಡುವಂತಿಲ್ಲ. ಆದರೆ ಟೆಂಡರ್ ಇಲ್ಲದೆ ಕೆಲಸ ಕೊಡ್ತಾರೆ. ನೂರಾರು ಕೋಟಿ ಕಾಮಗಾರಿಯನ್ನ ಅಕ್ರಮವಾಗಿ ನೀಡ್ತಾರೆ. ವೈಟ್ ಟಾಂಪಿಂಗ್ ಗೆ ವಿರೋಧಿಸಿದ್ದರು. ಅಕ್ರಮ ನಡೆದಿದೆ ಅಂತ ವೈಟ್ ಟಾಪಿಂಗ್ ನಿಲ್ಲಿಸಿದ್ದರು. ಈಗ ಅವರೇ ಅದಕ್ಕೆ ಅವಕಾಶ ಕೊಡ್ತಿದ್ದಾರೆ. ಪಾಲಿಕೆ ಮೇಲೆ ರಮೇಶ್ ಬ್ಲಾಕ್ ಮೇಲ್ ಮಾಡ್ತಿದ್ದಾನೆ ಎಂದು ಆರೋಪ ಮಾಡಿದರು.

Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.