ETV Bharat / state

ಕೊರೊನಾ ಮರೆತು ಐಎಎಸ್ ಅಧಿಕಾರಿಗಳ ಪ್ರತಿಷ್ಠೆಯ ಕಿತ್ತಾಟ ಸರಿಯಲ್ಲ: ಕಾಂಗ್ರೆಸ್ ಆಕ್ರೋಶ - Bangalore

ಇಬ್ಬರು ಐಎಎಸ್ ಅಧಿಕಾರಿಗಳು ಪ್ರತಿಷ್ಠೆಗಾಗಿ ಕಿತ್ತಾಡಿಕೊಳ್ಳುತ್ತಿರುವುದು ನಿಜಕ್ಕೂ ದುರದೃಷ್ಟಕರ ಎಂದು ಕಾಂಗ್ರೆಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

Congress leader
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ
author img

By

Published : Jun 5, 2021, 11:21 AM IST

ಬೆಂಗಳೂರು: ಕೊರೊನಾ ರಾಜ್ಯದಲ್ಲಿ ಸಾಕಷ್ಟು ಆತಂಕ ಸೃಷ್ಟಿಸಿದ್ದು, ಮೈಸೂರು ಜಿಲ್ಲೆಯೂ ಅಪಾಯದಿಂದ ಹೊರತಾಗಿಲ್ಲ. ಈ ಮಧ್ಯೆ ಇಬ್ಬರು ಐಎಎಸ್ ಅಧಿಕಾರಿಗಳು ಪ್ರತಿಷ್ಠೆಗಾಗಿ ಕಿತ್ತಾಡಿಕೊಳ್ಳುತ್ತಿರುವುದು ನಿಜಕ್ಕೂ ದುರದೃಷ್ಟಕರ ಎಂದು ಕಾಂಗ್ರೆಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಟ್ವೀಟ್ ಮಾಡಿದ್ದು, ಕೊರೊನಾ ಸಂದರ್ಭದಲ್ಲಿ ಹೆಚ್ಚು ಸೂಕ್ಷ್ಮತೆಯಿಂದ ಮತ್ತು ಜನಪರವಾಗಿ ಕೆಲಸ ಮಾಡಬೇಕಾದ ಮೈಸೂರು ಜಿಲ್ಲಾಡಳಿತ ವಿವಾದದ ಕೇಂದ್ರ ಬಿಂದುವಾಗಿ ಬದಲಾಗಿರುವುದು ನಿಜಕ್ಕೂ ದುರದೃಷ್ಟಕರ ಬೆಳವಣಿಗೆ. ಅವಧಿಗೆ ಮುನ್ನವೇ ನಿಯಮ ಬಾಹಿರ ವರ್ಗಾವಣೆಗಳ ಮೂಲಕ ಆಡಳಿತ ಯಂತ್ರವನ್ನು ದುರ್ಬಲಗೊಳಿಸಿದ ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತವೇ ಈ ಅಸ್ಥಿರತೆಗೆ ಕಾರಣ ಎಂದಿದ್ದಾರೆ.

  • ಕರೋನಾ ಸಂದರ್ಭದಲ್ಲಿ ಹೆಚ್ಚು ಸೂಕ್ಷ್ಮತೆಯಿಂದ ಮತ್ತು ಜನಪರವಾಗಿ ಕೆಲಸ ಮಾಡಬೇಕಾದ ಮೈಸೂರು ಜಿಲ್ಲಾಡಳಿತವು ವಿವಾದದ ಕೇಂದ್ರ ಬಿಂದುವಾಗಿ ಬದಲಾಗಿರುವುದು ನಿಜಕ್ಕೂ ದುರದೃಷ್ಟಕರ ಬೆಳವಣಿಗೆ

    ಅವಧಿಗೆ ಮುನ್ನವೇ ನಿಯಮ ಬಾಹಿರ ವರ್ಗಾವಣೆಗಳ ಮೂಲಕ ಆಡಳಿತ ಯಂತ್ರವನ್ನು ದುರ್ಬಲಗೊಳಿಸಿದ @BJP4Karnataka ಸರ್ಕಾರದ ದುರಾಡಳಿತವೇ ಈ ಅಸ್ಥಿರತೆಗೆ ಕಾರಣ!

    — Dr H.C.Mahadevappa (@CMahadevappa) June 4, 2021 " class="align-text-top noRightClick twitterSection" data=" ">

ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿ, ಮೈಸೂರಿನ ಇಬ್ಬರು ಐಎಸ್ ಅಧಿಕಾರಿಗಳು ಎಳೆ ಮಕ್ಕಳಂತೆ ಕಚ್ಚಾಡುತ್ತಿದ್ದಾರೆ. ಸರ್ಕಾರಕ್ಕೆ ಅಧಿಕಾರಿಗಳ ಈ ವರ್ತನೆ ಸಾರ್ವಜನಿಕವಾಗಿ ನಗೆಪಾಟಲಾಗುತ್ತಿರುವುದು ಕಾಣಿಸುತ್ತಿಲ್ಲವೆ? ಐಎಎಸ್ ಅಧಿಕಾರಿಗಳು ತಮ್ಮ ಗಂಭೀರ ನಡೆಯ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಜನರ ಮುಂದೆ ಕೋತಿ ಕುಣಿತ ಮಾಡುತ್ತಿದ್ದರೆ ಅದಕ್ಕೆ ಬೆಲೆಯಿದೆಯೆ? ಎಂದು ಪ್ರಶ್ನಿಸಿದ್ದಾರೆ.

  • ಮೈಸೂರಿನ ಇಬ್ಬರು IAS ಅಧಿಕಾರಿಗಳು ಎಳೆ ಮಕ್ಕಳಂತೆ ಕಚ್ಚಾಡುತ್ತಿದ್ದಾರೆ.
    ಸರ್ಕಾರಕ್ಕೆ ಅಧಿಕಾರಿಗಳ ಈ ವರ್ತನೆ ಸಾರ್ವಜನಿಕವಾಗಿ ನಗೆಪಾಟಲಾಗುತ್ತಿರುವುದು ಕಾಣಿಸುತ್ತಿಲ್ಲವೆ?
    IAS ಅಧಿಕಾರಿಗಳು ತಮ್ಮ ಗಂಭೀರ ನಡೆಯ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಜನರ ಮುಂದೆ ಕೋತಿ ಕುಣಿತ ಮಾಡುತ್ತಿದ್ದರೆ ಅದಕ್ಕೆ ಬೆಲೆಯಿದೆಯೆ? https://t.co/tLFUX07xES

    — Dinesh Gundu Rao/ದಿನೇಶ್ ಗುಂಡೂರಾವ್ (@dineshgrao) June 5, 2021 " class="align-text-top noRightClick twitterSection" data=" ">

ಸರ್ಕಾರದ ವಿರುದ್ಧ ವಾಗ್ದಾಳಿ:

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಬೆಲೆ ಏರಿಕೆಯಿಂದ ಬಡ ಭಾರತೀಯರ ಬದುಕೇ ನಾಶವಾಗಿದೆ. ಕಳೆದ ವರ್ಷ ನೂರರ ಅಂಚಿನಲ್ಲಿದ್ದ ಅಡುಗೆ ಎಣ್ಣೆ ದರ ಈಗ 200 ರೂ. ಆಗಿದೆ. ಅಗತ್ಯ ವಸ್ತುಗಳ ಬೆಲೆ ಕಳೆದ ವರ್ಷಕ್ಕಿಂತ ದುಪ್ಪಟ್ಟಾಗಿದೆ. ಆದರೆ ಈ ಅವಧಿಯಲ್ಲಿ ಜನರ ಆದಾಯ ಮಾತ್ರ ಪಾತಾಳ ತಲುಪಿದೆ. ವಿಪರ್ಯಾಸವೆಂದರೆ ಮೋದಿಯವರ ಶ್ರೀಮಂತ ಸ್ನೇಹಿತರ ಆದಾಯ ಮಾತ್ರ ಏರುತ್ತಲೇ ಇದೆ. ಇದೇ ಮೋದಿಯವರ ಅಚ್ಛೇ ದಿನ್ ಎಂದು ಟೀಕಿಸಿದ್ದಾರೆ.

ಓದಿ: ಡಿಸಿ ರೋಹಿಣಿ ಸಿಂಧೂರಿ‌ ಆರೋಪಕ್ಕೆ 127 ಪುಟಗಳ ದಾಖಲೆ ಸಮೇತ ಉತ್ತರ ನೀಡಿದ ಮೈಸೂರು ಪಾಲಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.