ETV Bharat / state

ಶೆಟ್ಟರ್ ಸೆಳೆಯಲು ಕಾಂಗ್ರೆಸ್ ಯತ್ನ.. ಲಿಂಗಾಯತ ಸಮುದಾಯಕ್ಕೆ ಗಾಳ - ವಿಧಾನ ಸಭೆ ಚುನಾವಣೆ 2023

ರಾಷ್ಟ್ರೀಯ ಹಾಗೂ ರಾಜ್ಯ ಬಿಜೆಪಿ ನಾಯಕರು ಶೆಟ್ಟರ್ ಮನವೊಲಿಸುವಲ್ಲಿ ವಿಫಲವಾಗಿದ್ದಾರೆ. ಅವರು ಇಂದು ಶಿರಸಿಗೆ ತೆರಳಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇತ್ತ ಮಾಜಿ ಸಿಎಂ ಶೆಟ್ಟರ್ ಅವರನ್ನು ಸೆಳೆಯಲು ಕಾಂಗ್ರೆಸ್ ಯತ್ನಿಸುತ್ತಿದೆ.

Congress invites jagadish Shettar to party
ಶೆಟ್ಟರ್ ಸೆಳೆಯಲು ಕಾಂಗ್ರೆಸ್ ಯತ್ನ
author img

By

Published : Apr 16, 2023, 2:31 PM IST

ಬೆಂಗಳೂರು: ಮಾಜಿ ಸಿಎಂ ಹಾಗೂ ಬಿಜೆಪಿ ಹಿರಿಯ ನಾಯಕ ಜಗದೀಶ್​ ಶೆಟ್ಟರ್ ಕಾಂಗ್ರೆಸ್​ನತ್ತ ಮುಖ ಮಾಡಿದ್ದಾರೆ ಎಂಬ ಮಾಹಿತಿ ನೀಡುವ ಕಾರ್ಯ ಅತ್ಯಂತ ವ್ಯವಸ್ಥಿತವಾಗಿ ನಡೆದಿದ್ದು, ಇಂದೇ ರಾಹುಲ್​ ಗಾಂಧಿ ಸಮ್ಮುಖದಲ್ಲಿ ಕೈ ಹಿಡಿಯಲಿದ್ದಾರೆ ಎಂಬ ಮಾಹಿತಿ ಕಾಂಗ್ರೆಸ್ ಮೂಲಗಳಿಂದ ಕೇಳಿ ಬರುತ್ತಿದೆ.

ಬಿಜೆಪಿಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಟಿಕೆಟ್ ಸಿಗುವುದಿಲ್ಲ ಎನ್ನುವುದು ದೃಢವಾಗುತ್ತಿದ್ದಂತೆ ಮುನಿಸಿಕೊಂಡ ಶೆಟ್ಟರ್ ಮನವೊಲಿಸುವ ಕಾರ್ಯವನ್ನು ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಹಾಗೂ ಸಿಎಂ ಬಸವರಾಜ​ ಬೊಮ್ಮಾಯಿ ಮಾಡಿದ್ದರು. ಸಾಕಷ್ಟು ಆಮಿಷ ಮುಂದಿಟ್ಟಿದ್ದರು. ಕೇಂದ್ರ ಸಚಿವ ಸ್ಥಾನ, ರಾಜ್ಯಪಾಲ ಹುದ್ದೆ ನೀಡುವ ಭರವಸೆ ಸಹ ಕೊಟ್ಟಿದ್ದರು. ಆದರೆ ಯಾವುದಕ್ಕೂ ಬಗ್ಗದ ಶೆಟ್ಟರ್ ವಿಧಾನಸಭೆ ಸ್ಪರ್ಧೆಗೆ ಅವಕಾಶ ನೀಡಿ, ಇಲ್ಲವಾದರೆ ಪಕ್ಷ ಬಿಡುತ್ತೇನೆ ಎಂದು ಸ್ಪಷ್ಟಪಡಿಸಿದ್ದರು. ಅಂತಿಮವಾಗಿ ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಹ ಸಲ್ಲಿಸಿದ್ದಾರೆ. ರಾಷ್ಟ್ರೀಯ ಹಾಗೂ ರಾಜ್ಯ ಬಿಜೆಪಿ ನಾಯಕರು ಶೆಟ್ಟರ್ ಮನವೊಲಿಸುವಲ್ಲಿ ವಿಫಲವಾಗಿದ್ದಾರೆ. ಅವರು ಇಂದು ಶಿರಸಿಗೆ ತೆರಳಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಸಲ್ಲಿದ್ದಾರೆ.

ಇದನ್ನೂ ಓದಿ: ಬಿಜೆಪಿ ತೊರೆದ ಸೋಲಿಲ್ಲದ ಸರದಾರ: ಜಗದೀಶ್ ಶೆಟ್ಟರ್ ನಡೆದು ಬಂದ ಹಾದಿಯ ಹಿನ್ನೋಟ..

ಕಾಂಗ್ರೆಸ್ ಶತಪ್ರಯತ್ನ: ಬಿಜೆಪಿ ತ್ಯಜಿಸಿ ಪಕ್ಷೇತರರಾಗಿ ಈ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವ ಚಿಂತನೆ ನಡೆಸಿರುವ ಜಗದೀಶ್​ ಶೆಟ್ಟರ್​ ಅವರನ್ನು ತಮ್ಮತ್ತ ಸೆಳೆಯಲು ಕಾಂಗ್ರೆಸ್ ಶತಪ್ರಯತ್ನ ನಡೆಸಿದೆ. ಒಂದೊಮ್ಮೆ ಪ್ರಬಲ ಲಿಂಗಾಯತ ನಾಯಕ ಕೈ ವಶವಾದರೆ ಉತ್ತರ ಕರ್ನಾಟಕ ಭಾಗದ ಲಿಂಗಾಯತ ಸಮುದಾಯದ ಮತ ತಮ್ಮತ್ತ ಬರಬಹುದು ಎಂಬ ನಿರೀಕ್ಷೆ ಕೈ ನಾಯಕರದ್ದಾಗಿದೆ.

ಈಗಾಗಲೇ ಬೆಳಗಾವಿಯ ಪ್ರಮುಖ ಲಿಂಗಾಯಿತ ನಾಯಕ ಲಕ್ಷ್ಮಣ ಸವದಿಯನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್, ಬಿಜೆಪಿಯಲ್ಲಿ ಬಿ.ಎಸ್ ಯಡಿಯೂರಪ್ಪರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಹೇಳುವ ಮೂಲಕ ಸಮುದಾಯದ ಮತದಾರರನ್ನು ರೊಚ್ಚಿಗೇಳಿಸುವ ಕಾರ್ಯ ಮಾಡುತ್ತಿದೆ. ಬಿಜೆಪಿ ಬಿಡುವ ಭಾವನಾತ್ಮಕ ಸಂದರ್ಭದಲ್ಲಿರುವ ಜಗದೀಶ್​ ಶೆಟ್ಟರ್​ರನ್ನು ಯೋಚಿಸುವ ಮುನ್ನವೇ ತಮ್ಮತ್ತ ಸೆಳೆದುಕೊಳ್ಳುವ ಯತ್ನಕ್ಕೆ ಕಾಂಗ್ರೆಸ್ ಮುಂದಾಗಿದೆ. ಇದಕ್ಕೆ ಪೂರಕವಾಗಿ ಹೇಳಿಕೆಯನ್ನು ಸಹ ನೀಡುತ್ತಿದೆ.

ಜಗದೀಶ್​ ಶೆಟ್ಟರ್ ಅತೃಪ್ತಿ, ಅಸಮಾಧಾನವನ್ನು ತಮ್ಮ ಲಾಭವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನ ಆರಂಭಿಸಿದೆ. ಯಾವುದೇ ಕಾರಣವಿಲ್ಲದೇ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಸರು ಪ್ರಕಟಿಸಿಲ್ಲ. ಜಗದೀಶ್ ಶೆಟ್ಟರ್​ಗೆ ಬಿಜೆಪಿ ಟಿಕೆಟ್ ನೀಡಲ್ಲ, ಅವರನ್ನು ನಮ್ಮತ್ತ ಸೆಳೆಯಬಹುದು ಎಂಬ ನಿರೀಕ್ಷೆ ಕಾಂಗ್ರೆಸ್ ನಾಯಕರದ್ದಾಗಿದೆ. ಇದೀಗ ಶೆಟ್ಟರ್ ಇಂದೇ ಕೈ ಹಿಡಿಯುತ್ತಾರೆ ಎಂಬ ಮಾಹಿತಿಯನ್ನು ವ್ಯವಸ್ಥಿತವಾಗಿ ರವಾನೆ ಮಾಡುವ ಕಾರ್ಯವಾಗುತ್ತಿದೆ.

ಸೆಳೆಯುವ ತಂತ್ರ: ಕಾಂಗ್ರೆಸ್ ನಾಯಕರು ಸಾಕಷ್ಟು ಸಿದ್ಧತೆ ಮಾಡಿಕೊಂಡೇ ಜಗದೀಶ್​ ಶೆಟ್ಟರ್​ ಅವರನ್ನು ತಮ್ಮ ಪಕ್ಷಕ್ಕೆ ಸ್ವಾಗತಿಸುವ ಯತ್ನ ಆರಂಭಿಸಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, 'ಟಿಕೆಟ್ ನಿರಾಕರಣೆಗೆ ಮುನಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್‌ಗೆ ಬಂದರೆ ಸ್ವಾಗತಿಸುತ್ತೇವೆ. ಬಿಜೆಪಿ ಪಕ್ಷ ಹಿರಿಯ ನಾಯಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಸದಾ ಪಕ್ಷದ ಸಿದ್ಧಾಂತ ಎನ್ನುತ್ತಿದ್ದ ಕೆ.ಎಸ್‌. ಈಶ್ವರಪ್ಪ, ಈಗ ಎಲ್ಲಿ ಹೋದರು'? ಎಂದು ಪ್ರಶ್ನಿಸಿದ್ದರು.

ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿ ಎನ್ನುವ ಮೂಲಕ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಶೆಟ್ಟರ್ ಒಂದು ಟಿಕೆಟ್‌ಗಾಗಿ ಮನೆಯ ಬಾಗಿಲು ಬಾಗಿಲು ಓಡಾಡುತ್ತಿದ್ದಾರೆ. ಲಕ್ಷ್ಮಣ್​ ಸವದಿ ಟಿಕೆಟ್ ಸಿಗದೆ ಕಣ್ಣೀರು ಹಾಕಿ ಕೊನೆಗೂ ಕಾಂಗ್ರೆಸ್ ಸೇರ್ಪೆಡೆಯಾಗಿದ್ದಾರೆ. ಹಿರಿಯರನ್ನು ಬಿಜೆಪಿ ಯಾವ ರೀತಿ ನೋಡಿಕೊಳ್ಳುತ್ತಿದೆ ಎಂದು ಜನ ಗಮನಿಸುತ್ತಿದೆ. ಲಕ್ಷ್ಮಣ ಸವದಿ ಕಾಂಗ್ರೆಸ್‌ಗೆ ಬಂದಿದ್ದಾರೆ. ಇದೇ ರೀತಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡಾ ಕಾಂಗ್ರೆಸ್ ಪಕ್ಷಕ್ಕೆ ಬರಲಿ. ಅವರ ಜತೆಗೆ ಇನ್ನೂ ಬಹಳಷ್ಟು ಜನರು ಕಾಂಗ್ರೆಸ್‌ಗೆ ಬರುತ್ತಾರೆ ಕಾದು ನೋಡಿ ಎಂದಿದ್ದರು.

ಕಾಂಗ್ರೆಸ್​ಗೆ ಬಂದ್ರೆ ಟಿಕೆಟ್ ಫಿಕ್ಸ್: ಜಗದೀಶ್ ಶೆಟ್ಟರ್ ನಮ್ಮ ಬೀಗರು. ನಾನು ಇನ್ನು ಅವರ ಜತೆಗೆ ಮಾತಾಡಿಲ್ಲ. ಅವರು ಕಾಂಗ್ರೆಸ್ ಬರಬಹುದು ಎಂದು ದಾವಣಗೆರೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ಗೆ ಜಗದೀಶ್ ಶೆಟ್ಟರ್ ಬಂದ್ರೆ ಟಿಕೆಟ್ ಫಿಕ್ಸ್: ಶಾಮನೂರು ಶಿವಶಂಕರಪ್ಪ

7ನೇ ಗೆಲುವಿಗೆ ಮುನ್ನುಡಿ: ಹುಬ್ಬಳ್ಳಿ- ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಆರು ಬಾರಿ ಗೆದ್ದಿರುವ ಜಗದೀಶ್ ಶೆಟ್ಟರ್ 7ನೇ ಬಾರಿ ಕೂಡ ಪಕ್ಷದ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದರು. ಆದರೆ ಬೇರೆಯವರಿಗೆ ಅವಕಾಶ ಕೊಡುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ‌. ಟಿಕೆಟ್‌ ಕೊಡಲಿ, ಕೊಡದಿರಲಿ ಸ್ಪರ್ಧೆ ಖಚಿತ ಎಂದಿರುವ ಶೆಟ್ಟರ್ ಪಟ್ಟು ಸಡಿಲಿಸಿಲ್ಲ. ಇದರಿಂದಲೇ ಇದರ ಸದ್ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಆದರೆ ಇಂದೇ ಶೆಟ್ಟರ್ ಕೈ ಹಿಡಿಯುವುದು ಅನುಮಾನ ಅಂತಾ ಆಪ್ತ ಮೂಲಗಳು ತಿಳಿಸಿವೆ. ಸುದೀರ್ಘ ಅವಧಿ ಬಿಜೆಪಿಯಲ್ಲಿದ್ದು, ಸಿಎಂ ಸಹ ಆಗಿರುವ ಶೆಟ್ಟರ್ ಪಕ್ಷೇತರರಾಗಿ ಕಣಕ್ಕಿಳಿದು ತಮ್ಮ ಶಕ್ತಿ ಪ್ರದರ್ಶನ ಮಾಡಬಹುದು ಎಂದು ಹೇಳಲಾಗುತ್ತಿದೆ.

ಬರೋದು ಬಿಡೋದು ಅವರಿಗೆ ಬಿಟ್ಟದ್ದು: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾಹಿತಿ ಇಲ್ಲ. ಆದರೆ ಬಿಜೆಪಿಯಲ್ಲಿ ಹಿರಿಯರನ್ನು ಕಡೆಗಣಿಸುವ ಸಂಸ್ಕೃತಿ ಇದೆ. ಯಡಿಯೂರಪ್ಪನವರಿಗೇ ಕಣ್ಣೀರು ಹಾಕಿಸಿದರು. ಮುಂದಿನ ದಿನಗಳಲ್ಲಿ ಶೆಟ್ಟರ್ ಎಲ್ಲವನ್ನೂ ಬಹಿರಂಗಪಡಿಸ್ತಾರೆ. ಬರೋದು ಬಿಡೋದು ಶೆಟ್ಟರ್ ಅವರಿಗೆ ಸೇರಿದ್ದು ಎಂದು ಹೇಳಿದರು.

ಇದನ್ನೂ ಓದಿ: ಇಂತಹ ಹಲವಾರು ಪ್ರಸಂಗಗಳನ್ನು ಪಕ್ಷ ಎದುರಿಸಿದೆ, ಡ್ಯಾಮೇಜ್​ ಕಂಟ್ರೋಲ್​ ಬಗ್ಗೆ ಚರ್ಚೆ ನಡೀತಿದೆ.. ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.