ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ವೀಕ್ಷಕರ ನೇಮಕಮಾಡಿ ಇಂದು ಆದೇಶ ಹೊರಡಿಸಲಾಗಿದೆ.
ನಿನ್ನೆ ತಡರಾತ್ರಿವರೆಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ ಸಿ ವೇಣುಗೋಪಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇಂದು ಕಾಂಗ್ರೆಸ್ ಪಕ್ಷ ಈ ಕುರಿತು ಅಧಿಕೃತ ಪಟ್ಟಿ ಪ್ರಕಟಿಸಿದೆ.
ಜಿಲ್ಲಾವಾರು ವೀಕ್ಷಕರ ವಿವರ ಇಂತಿದೆ.
- ಚಿಕ್ಕೋಡಿ- ವೀರ್ ಕುಮಾರ್ ಪಾಟೀಲ್
- ಬೆಳಗಾವಿ- ಅಶೋಕ್ ಪಟ್ಟಣ್
- ಬಾಗಲಕೋಟೆ- ಎಸ್.ಆರ್.ಪಾಟೀಲ್
- ವಿಜಯಪುರ- ಎಂ.ಬಿ.ಪಾಟೀಲ್
- ಕಲಬುರಗಿ- ಡಾ.ಶರಣಪ್ರಕಾಶ್ ಪಾಟೀಲ್
- ರಾಯಚೂರು- ಎನ್.ಎಸ್.ಭೋಸರಾಜು
- ಬೀದರ್- ರಹೀಂಖಾನ್
- ಕೊಪ್ಪಳ- ಬಸನಗೌಡ ಬಾದರ್ಲಿ
- ಬಳ್ಳಾರಿ- ಸೂರ್ಯ ನಾರಾಯಣ ರೆಡ್ಡಿ
- ಹಾವೇರಿ- ಬಸವರಾಜ ಶಿವಣ್ಣನವರ್
- ಉತ್ತರಕನ್ನಡ- ಆರ್.ವಿ.ದೇಶಪಾಂಡೆ
- ಶಿವಮೊಗ್ಗ- ಕಿಮ್ಮನೆ ರತ್ನಾಕರ್
- ಉಡುಪಿ,ಚಿಕ್ಕಮಗಳೂರು- ಜಯಮಾಲಾ
- ಹಾಸನ- ಗಂಡಸಿ ಶಿವರಾಂ
- ದಕ್ಷಿಣ ಕನ್ನಡ- ರಮಾನಾಥ್ ರೈ
- ಚಿತ್ರದುರ್ಗ- ಟಿ.ರಘುಮೂರ್ತಿ
- ತುಮಕೂರು- ಜಿ.ಪರಮೇಶ್ವರ್
- ಮಂಡ್ಯ- ಎನ್.ಸಂಪಂಗಿ
- ಬೆಂಗಳೂರು ಗ್ರಾಮಾಂತರ- ಜಿ.ಸಿ.ಚಂದ್ರಶೇಖರ್
- ಬೆಂಗಳೂರು ಉತ್ತರ- ರಾಮಮೂರ್ತಿ
- ಬೆಂಗಳೂರು ಕೇಂದ್ರ- ಕೆ.ಜೆ.ಜಾರ್ಜ್
- ಬೆಂಗಳೂರು ದಕ್ಷಿಣ- ಎಂ.ಸಿ.ವೇಣುಗೋಪಾಲ್
- ಚಿಕ್ಕಬಳ್ಳಾಪುರ- ಶಿವಶಂಕರ ರೆಡ್ಡಿ
- ಕೋಲಾರ - ವಿ.ಆರ್.ಸುದರ್ಶನ್
ಮೈಸೂರು, ಚಾಮರಾಜನಗರ, ದಾವಣಗೆರೆ ಹಾಗೂ ಧಾರವಾಡ ವೀಕ್ಷಕರ ನೇಮಕ ಮಾತ್ರ ಬಾಕಿ ಉಳಿಸಿಕೊಳ್ಳಲಾಗಿದೆ.