ETV Bharat / state

ನನ್ನನ್ನು ಪಕ್ಷಕ್ಕೆ ಅತ್ಯಂತ ಆತ್ಮೀಯವಾಗಿ ಸ್ವಾಗತಿಸಿದ್ದರು.. ಆಸ್ಕರ್ ಫರ್ನಾಂಡಿಸ್​ ಗುಣಗಾನ ಮಾಡಿದ ಸಿದ್ದರಾಮಯ್ಯ..

author img

By

Published : Sep 13, 2021, 8:57 PM IST

Updated : Sep 13, 2021, 11:12 PM IST

ನಾನು ಯಾವಾಗ ಕೇಳಿದ್ರೂ ಭೇಟಿಗೆ ಅವಕಾಶ ನೀಡುತ್ತಾ ಇದ್ದರು. ನಾನು ಕಾಂಗ್ರೆಸ್ ಸೇರಬೇಕೆಂದು ತೀರ್ಮಾನ ಮಾಡಿದ್ದಾಗ ಮಲ್ಲಿಕಾರ್ಜುನ ಖರ್ಗೆಯವರು ಅಧ್ಯಕ್ಷರಾಗಿದ್ದರು. ಖರ್ಗೆಯವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ, ನಂತರ ನಾನು ಮೊದಲು ಭೇಟಿ ಮಾಡಿದ್ದು, ಆಸ್ಕರ್ ಫರ್ನಾಂಡಿಸ್ ಅವರನ್ನು. ಆಗ ಅತ್ಯಂತ ಆತ್ಮೀಯವಾಗಿ, ಪ್ರೀತಿಯಿಂದ ಪಕ್ಷಕ್ಕೆ ಸ್ವಾಗತಿಸಿದ್ದರು. ಆ ಘಟನೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ನೆನಪಿಸಿಕೊಂಡರು ಸಿದ್ದರಾಮಯ್ಯ..

congress-conduct-condolence-programme-for-oscar-fernandes-death
ಕೆಪಿಸಿಸಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ

ಬೆಂಗಳೂರು : ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ಅವರಿಗೆ ಕಾಂಗ್ರೆಸ್ ನಾಯಕರು ಶ್ರದ್ಧಾಂಜಲಿ ಸಲ್ಲಿಸಿದಾರೆ.

congress-conduct-condolence-programme-for-oscar-fernandes-death
ಆಸ್ಕರ್ ಫರ್ನಾಂಡಿಸ್ ನಿಧನಾರ್ಥ ಕೆಪಿಸಿಸಿ ಕಚೇರಿಯಲ್ಲಿ ಶ್ರದ್ಧಾಂಜಲಿ

ನಗರದ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ ಹಾಗೂ ಮತ್ತಿತರರು ಭಾಗವಹಿಸಿದ್ದರು. ನಾಯಕರೆಲ್ಲ, ಆಸ್ಕರ್ ಫರ್ನಾಂಡಿಸ್ ಅವರ ಭಾವಚಿತ್ರಕ್ಕೆ ಪುಷ್ಪ, ನುಡಿ ನಮನ ಸಲ್ಲಿಸಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಆಸ್ಕರ್ ಫರ್ನಾಂಡಿಸ್ ಕಾಂಗ್ರೆಸ್​ನ ಒಬ್ಬ ನಿಷ್ಠಾವಂತ ಕಾರ್ಯಕರ್ತರಂತಿದ್ದರು. ಹಾಗಾಗಿ, ಅವರು ಪಕ್ಷದ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರಿಗೆ ಮಾದರಿಯಾಗಿದ್ದರು.

ಸೋನಿಯಾ ಗಾಂಧಿ, ರಾಜೀವ್ ಗಾಂಧಿ ಹಾಗೂ ರಾಹುಲ್ ಗಾಂಧಿಯವರಿಗೆ ಆಪ್ತರಾಗಿದ್ದರು. ವಿಶ್ವಾಸಕ್ಕೆ ಅರ್ಹರಾದ ವ್ಯಕ್ತಿಯಾಗಿದ್ದ ಕಾರಣಕ್ಕೆ ದೀರ್ಘ ಕಾಲ ರಾಜಕಾರಣದಲ್ಲಿ ಲೋಕಸಭಾ ಸದಸ್ಯರಾಗಿ, ರಾಜ್ಯಸಭಾ ಸದಸ್ಯರಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು ಎಂದರು.

ಕೆಪಿಸಿಸಿ ಕಚೇರಿಯಲ್ಲಿ ಶ್ರದ್ಧಾಂಜಲಿ

40 ವರ್ಷ ದೀರ್ಘಕಾಲ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಕೇಂದ್ರ ಸರ್ಕಾರದ ಮಂತ್ರಿಯಾಗಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ಕೇಂದ್ರದ ಚುನಾವಣಾ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

ಪಕ್ಷದಲ್ಲಿ ಯುವಕರನ್ನು ಗುರುತಿಸಿ, ನಾಯಕರಾಗಿ ಬೆಳೆಸುವ ಶಕ್ತಿ ಹಾಗೂ ಕಾಳಜಿ ಇದ್ದಂತವರು. ಅಧಿಕಾರದ ದರ್ಪವಿಲ್ಲದ ಸರಳ ಸಜ್ಜನಿಕೆಯ ನಾಯಕರಾಗಿದ್ದರು. ಕಾರ್ಯಕರ್ತರಿಂದ ಹಿಡಿದು ದೊಡ್ಡ ಮುಖಂಡರವರೆಗೆ ಪ್ರತಿಯೊಬ್ಬರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದರು ಎಂದರು.

ನಾನು ಯಾವಾಗ ಕೇಳಿದ್ರೂ ಭೇಟಿಗೆ ಅವಕಾಶ ನೀಡುತ್ತಾ ಇದ್ದರು. ನಾನು ಕಾಂಗ್ರೆಸ್ ಸೇರಬೇಕೆಂದು ತೀರ್ಮಾನ ಮಾಡಿದ್ದಾಗ ಮಲ್ಲಿಕಾರ್ಜುನ ಖರ್ಗೆಯವರು ಅಧ್ಯಕ್ಷರಾಗಿದ್ದರು. ಖರ್ಗೆಯವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ, ನಂತರ ನಾನು ಮೊದಲು ಭೇಟಿ ಮಾಡಿದ್ದು, ಆಸ್ಕರ್ ಫರ್ನಾಂಡಿಸ್ ಅವರನ್ನು. ಆಗ ಅತ್ಯಂತ ಆತ್ಮೀಯವಾಗಿ, ಪ್ರೀತಿಯಿಂದ ಪಕ್ಷಕ್ಕೆ ಸ್ವಾಗತಿಸಿದ್ದರು. ಆ ಘಟನೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ನೆನಪಿಸಿಕೊಂಡರು.

ಮಾನವೀಯ ಗುಣಗಳನ್ನು ಅಳವಡಿಸಿಕೊಂಡ ನಾಯಕರು ಬಹಳ ವಿರಳ. ಅವರು ಮಂತ್ರಿಯಾಗಿದ್ದಾಗ ನಮ್ಮ ರಾಜ್ಯಕ್ಕೆ ಏನು ಕೇಳಿದ್ರೂ ಆಗಲ್ಲ ಎಂದು ಹೇಳುತ್ತಿರಲಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಆಸ್ಕರ್ ಫರ್ನಾಂಡಿಸ್ ಅವರು ಭೂ ಸಾರಿಗೆ ಸಚಿವರಾಗಿದ್ದರು. ಒಮ್ಮೆ ಮಹದೇವಪ್ಪ ಅವರ ಜೊತೆ ಅವರ ಕಚೇರಿಗೆ ಹೋಗಿದ್ದೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಭೂ ಸಾರಿಗೆ ಅಧಿಕಾರಿಗಳೆಲ್ಲ ಸೇರಿದ್ದರು. ಒಂದೇ ಸಭೆಯಲ್ಲಿ ರಾಜ್ಯ ಹೆದ್ದಾರಿಯಾಗಿದ್ದ ಮೈಸೂರು-ಬೆಂಗಳೂರು ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಿ, ಹತ್ತು ಪಥಗಳ ರಸ್ತೆ ನಿರ್ಮಾಣಕ್ಕೆ ಅನುಮೋದನೆ ಕೊಡಿಸಿದ್ರು. ಈಗ ಯಾರೋ ಸಂಸದ ಇದನ್ನು ತಾನು ಮಾಡಿಸಿದ್ದು ಅಂತಾ ಪ್ರಚಾರ ಪಡ್ಕೋತಿದಾರೆ. ವಾಸ್ತವದಲ್ಲಿ ಇದು ಆಸ್ಕರ್ ಫರ್ನಾಂಡಿಸ್ ಅವರ ಕೊಡುಗೆ ಎಂದು ತಿಳಿಸಿದರು.

ಈ ರೀತಿ ರಾಜ್ಯದ ಬಗ್ಗೆ ಅಪಾರವಾದ ಪ್ರೀತಿ, ಕಾಳಜಿ ಇದ್ದಂತಹ ನಾಯಕ ಎಂದು ಇಂದು ನೆನಪಿಸಿಕೊಳ್ಳಬೇಕಾಗುತ್ತದೆ. ಅವರ ಸಾವು ನಿಜಕ್ಕೂ ಅನಿರೀಕ್ಷಿತ. ಸದಾ ಯೋಗಾಸನಾ, ಕುಚಿಪುಡಿ ನೃತ್ಯ ಮಾಡುತ್ತಾ, ಶುದ್ಧ ಸಸ್ಯಹಾರಿಯಾಗಿದ್ದರು. ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದ ವ್ಯಕ್ತಿಯಾಗಿದ್ದೂ ಕೂಡ 80ನೇ ವಯಸ್ಸಿಗೆ ನಮ್ಮನ್ನೆಲ್ಲ ಅಗಲಿರುವುದು ದುಃಖಕರ. ಸಜ್ಜನರು ದೀರ್ಘಕಾಲ ಬದುಕಲ್ಲ ಎಂಬ ಗಾಧೆ ಮಾತಿದೆ. ಹಾಗಾಗಿಯೇ, ಇವರು ಕೂಡ ಬಹಳ ಬೇಗ ಇಹಲೋಕ ತ್ಯಜಿಸಿದ್ದಾರೆ.

ಅವರು ಇನ್ನಷ್ಟು ಕಾಲ ನಮ್ಮೊಂದಿಗೆ ಇರಬೇಕಿತ್ತು. ಅವರ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತು ದೇಶಕ್ಕೆ ಬಹುದೊಡ್ಡ ನಷ್ಟವಾಗಿದೆ. ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಅಂತಹ ಅಪರೂಪದ ವ್ಯಕ್ತಿಯಾಗಿದ್ದರು. ರಾಜಕಾರಣಿಗಳಿಗೆ ತಾಳ್ಮೆ ಕಡಿಮೆ.

ಆದರೆ, ಆಸ್ಕರ್ ಫರ್ನಾಂಡಿಸ್ ಅವರಿಗೆ ಹಿಮಾಲಯದಷ್ಟು ತಾಳ್ಮೆಯಿತ್ತು. ಇಂತಹ ವ್ಯಕ್ತಿ ಇಂದು ನಮ್ಮನ್ನೆಲ್ಲ ಅಗಲಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗದವರಿಗೆ, ಬಂಧು-ಬಳಗದವರಿಗೆ, ಅಭಿಮಾನಿಗಳಿಗೆ ಸಾವಿನ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ ಎಂದು ವಿವರಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಇಂದು ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬಹಳ ದುಃಖದ ದಿನ. ನಮ್ಮ ಹಿರಿಯ ನಾಯಕರಾದ, ಹಾಲಿ ರಾಜ್ಯಸಭಾ ಸದಸ್ಯರಾದ ಆಸ್ಕರ್ ಫರ್ನಾಂಡಿಸ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸುತ್ತಿದ್ದೇವೆ. ಉಡುಪಿ ಪಾಲಿಕೆ ಸದಸ್ಯರಾಗಿ ರಾಜಕಾರಣ ಪ್ರಾರಂಭಿಸಿ ಸತತ ನಾಲ್ಕು ಬಾರಿ ಸಂಸತ್ ಸದಸ್ಯರಾಗಿ, ಕೇಂದ್ರದ ಮಂತ್ರಿಯಾಗಿ, ನಂತರ ರಾಜ್ಯಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಅವರು ಸಸ್ಯಹಾರಿಗಳು. ನಿತ್ಯ ಕನಿಷ್ಠ ಒಂದೂವರೆ ಗಂಟೆ ಯೋಗ ಮಾಡುತ್ತಿದ್ದರು. ಆರೋಗ್ಯದ ಮೇಲೆ ಅಷ್ಟು ಕಾಳಜಿ ಹೊಂದಿದ್ದ ಇಂತಹ ನಾಯಕರನ್ನು ದೇವರು ಇಷ್ಟು ಬೇಗ ಯಾಕೆ ಕರೆಸಿಕೊಂಡರು ಎಂಬ ಪ್ರಶ್ನೆ ಮೂಡುತ್ತದೆ ಎಂದರು.

ಅವರು ಮಂತ್ರಿಯಾಗಿರಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗಿದ್ದಾಗಲೂ ಬೆಳಗ್ಗಿನ ಜಾವ 3 ರವರೆಗೂ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿ, ಧೈರ್ಯ ತುಂಬುತ್ತಿದ್ದರು. ಕಾಂಗ್ರೆಸ್ ಕಾರ್ಯಕರ್ತರೇ ಅವರ ಆಸ್ತಿಯಾಗಿದ್ದರು. ತಾನು ಉನ್ನತ ಹುದ್ದೆಯಲ್ಲಿದ್ದೇನೆ ಎಂದು ಅವರು ಯಾವತ್ತೂ ತೋರಿಸಿಕೊಂಡಿರಲಿಲ್ಲ. ಅವರು ಪಕ್ಷವನ್ನು ಕಷ್ಟಕಾಲದಲ್ಲಿ ಕಟ್ಟಿದ್ದಾರೆ.

ರಾಷ್ಟ್ರದ ಉದ್ದಗಲಕ್ಕೂ ಯುವಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ, ನೂರಾರು ನಾಯಕರನ್ನು ಬೆಳೆಸಿದ್ದಾರೆ. ಅವರು ಯಾರೇ ಬಂದರೂ ತಾಳ್ಮೆಯಿಂದಲೇ ಮಾತನಾಡಿ, ಅವರಿಗೆ ಮನವರಿಕೆ ಮಾಡಿಕೊಡುತ್ತಿದ್ದರು. ಅವರು ನಡೆದು ಬಂದ ಹಾದಿ ಬಗ್ಗೆ ಮಾತಾಡಲು ಗಂಟೆಗಟ್ಟಲೇ ಸಮಯ ಬೇಕು.

ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಧೃವನಾರಾಯಣ್, ಸಲೀಂ ಅಹಮದ್, ಮಾಜಿ ಸಚಿವರಾದ ಎಚ್.ಕೆ. ಪಾಟೀಲ್, ಅಲ್ಲಂ ವೀರಭದ್ರಪ್ಪ, ತುಕರಾಂ, ಪಿ.ಟಿ ಪರಮೇಶ್ವರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: 3 ದಿನಗಳಲ್ಲಿ 1,87,678 ಗಣೇಶ ವಿಸರ್ಜನೆ : 5 ದಿನದ ನಂತರವೂ ಮೂರ್ತಿ ವಿಸರ್ಜನೆಗೆ ಪಾಲಿಕೆ ಅವಕಾಶ?

Last Updated : Sep 13, 2021, 11:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.