ETV Bharat / state

ಶಿವಾಜಿನಗರದಲ್ಲಿ ಕಾಂಗ್ರೆಸ್ ಕೈಹಿಡಿದ ಮತದಾರರು: ರಿಜ್ವಾನ್ ಅರ್ಷದ್​ ಗೆಲುವಿನ ಸಂಭ್ರಮ - Rizwan Arshad won the by-election banglore

ರಾಜ್ಯದ ಗಮನ ಸೆಳೆದಿದ್ದ ಶಿವಾಜಿನಗರ ಉಪಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್​ನ ಅಭ್ಯರ್ಥಿ ರಿಜ್ವಾನ್ ಅರ್ಷದ್ ಗೆದ್ದು ಬೀಗಿದ್ದಾರೆ.

banglore
ರಿಜ್ವಾನ್ ಆರ್ಷದ್
author img

By

Published : Dec 9, 2019, 6:44 PM IST

ಬೆಂಗಳೂರು: ರಾಜ್ಯದ ಗಮನ ಸೆಳೆದಿದ್ದ ಶಿವಾಜಿನಗರ ಉಪಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್​ನ ಅಭ್ಯರ್ಥಿ ರಿಜ್ವಾನ್ ಅರ್ಷದ್ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್​ನ ಅಭ್ಯರ್ಥಿ ರಿಜ್ವಾನ್ ಅರ್ಷದ್

ಜಿದ್ದಾಜಿದ್ದಿ ಕದನದಲ್ಲಿ ಬಿಜೆಪಿ ಅಭ್ಯರ್ಥಿ ಎಂ ಶರವಣ ಅವರನ್ನು ಸೋಲಿಸಿ ಸುಮಾರು 14 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವಿನ ಮಾಲೆ ಧರಿಸಿದ್ದಾರೆ. ಏಳು ಸುತ್ತು ಮತಎಣಿಕೆ ಮುಗಿಯುತ್ತಿದ್ದಂತೆಯೇ ಮತ ಎಣಿಕೆ ಕೇಂದ್ರದ ಬಳಿ ವಿಜಯೋತ್ಸವ ಆಚರಿಸಲು ಶುರು ಮಾಡಿದ್ದ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿಯಾಗಿ ರಿಜ್ವಾನ್ ಅರ್ಷದ್ ಅವರ ಮೆರವಣಿಗೆ ಮಾಡುವ ಮೂಲಕ ವಿಜಯೋತ್ಸವ ಆಚರಿಸಿದರು.

ಕುಟುಂಬ ಸಮೇತರಾಗಿ ಮತ ಎಣಿಕೆ ಕೇಂದ್ರಕ್ಕೆ ಬಂದು ರಿಜ್ವಾನ್ ಕುಟುಂಬ ಗೆಲುವಿನ ಸಂಭ್ರಮ ಆಚರಿಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ರಿಜ್ವಾನ್ ಅರ್ಷದ್ ಶಿವಾಜಿನಗರದಲ್ಲಿ 20 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯವಾಗಿಲ್ಲ. 20 ವರ್ಷಗಳಿಂದಲೂ ಶಿವಾಜಿನಗರದ ಕೂಗು ವಿಧಾನಸೌಧದಲ್ಲಿ ಕೇಳಿಸಿಲ್ಲ. ನಾನು ಇನ್ಮುಂದೆ ಈ ಕ್ಷೇತ್ರದ ಮತದಾರರ ಮನೆ ಮಗನಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಇನ್ನು, ಶಿವಾಜಿನಗರ ಕ್ಷೇತ್ರದಿಂದ ತನಗೆ ಟಿಕೆಟ್ ಕೊಟ್ಟು ಚುನಾವಣೆಯಲ್ಲಿ ಗೆಲ್ಲಿಸಿದ್ದಕ್ಕೆ ಪಕ್ಷದ ಹಿರಿಯ ಮುಖಂಡರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ರಿಜ್ವಾನ್​ ಹೇಳಿದ್ರು.

Intro:ರಾಜ್ಯದ ಗಮನ ಸೆಳೆದಿದ್ದ ಶಿವಾಜಿನಗರ ಉಪಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ನ ಅಭ್ಯರ್ಥಿ ರಿಜ್ವಾನ್ ಆರ್ಷದ್ ಗೆದ್ದು ಬೀಗಿದ್ದಾರೆ. ಜಿದ್ದಾಜಿದ್ದಿ ಕದನದಲ್ಲಿ ಬಿಜೆಪಿ ಅಭ್ಯರ್ಥಿ ಎಂ ಶರವಣ ಅವರನ್ನು ಸುಮಾರು 14 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವಿನ ಮಾಲೆ ಧರಿಸಿದ್ದಾರೆ. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡರು ಬಿಜೆಪಿಯ ಲೆಕ್ಕಾಚಾರವನ್ನು ಮಾಡಿ, ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಮಲವನ್ನು ಅರಳಿಸಬೇಕು ಎಂಬುದು ಪೋಟಿಯಲ್ಲಿ ಪ್ರಚಾರ ಮಾಡಿದ್ದ ಕೇಸರಿ ಪಡೆಯ ನಾಯಕರಿಗೆ ರಿಜ್ವಾನ್ ಮಣ್ಣುಮುಕ್ಕಿಸಿದ್ದಾರೆ.

Body:ಏಳು ಸುತ್ತು ಮತಎಣಿಕೆ ಮುಗಿಯುತ್ತಿದ್ದಂತೆಯೇ ಮತ ಎಣಿಕೆ ಕೇಂದ್ರದ ಬಳಿ ವಿಜಯೋತ್ಸವ ಆಚರಿಸಲು ಶುರು ಮಾಡಿದ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿಯಾಗಿ ರಿಜ್ವಾನ್ ಅರ್ಷದ್ ಅವರ ಮೆರವಣಿಗೆ ಮಾಡುವ ಮೂಲಕ ವಿಜಯೋತ್ಸವ ಆಚರಿಸಿದರು. ಕುಟುಂಬಸಮೇತರಾಗಿ ಮತ ಎಣಿಕೆ ಕೇಂದ್ರಕ್ಕೆ ಬಂದು ರಿಜ್ವಾನ್ ಆರ್ಷದ್ ಕುಟುಂಬ ಗೆಲುವಿನ ಸಂಭ್ರಮವನ್ನು ಆಚರಿಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ರಿಜ್ವಾನ್ ಹರ್ಷದ್ ಬಿಜೆಪಿಯವರು ರಾಜ್ಯದಲ್ಲಿ ಅಧಿಕಾರ ಹಿಡಿಯುವ ಸಲುವಾಗಿ ಶಾಸಕರನ್ನು ಆಪರೇಷನ್ ಕಮಲ ಮಾಡುವ ಮೂಲಕ ಪಕ್ಷಕ್ಕೆ ಸೆಳೆಯುತ್ತಿದ್ದರು. ಆದರೆ ಈಗ ಶಿವಾಜಿನಗರದಲ್ಲಿ ನನ್ನನ್ನು ಗೆಲ್ಲಲು ಬಿಡಬಾರದು ಎಂದು ಕಾರ್ಪೋರೇಟರ್ ಗಳನ್ನು ಆಪರೇಷನ್ ಕಮಲ ಮಾಡುವ ಮೂಲಕ ನನ್ನನ್ನು ಸೋಲಿಸಲು ಹುನ್ನಾರ ಮಾಡಿದರು. ಆದರೆ ಕ್ಷೇತ್ರದ ಮತದಾರರು ನನಗೆ ಆಶೀರ್ವಾದ ಮಾಡಿದ್ದಾರೆ. ಶಿವಾಜಿನಗರದಲ್ಲಿ 20 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯ ವಾಗಿಲ್ಲ. 20 ವರ್ಷಗಳಿಂದಲೂ ಶಿವಾಜಿನಗರದ ಕೂಗು ವಿಧಾನಸೌಧದಲ್ಲಿ ಕೇಳಿಸಿಲ್ಲ. ನಾನು ಈಗ ಶಿವಾಜಿನಗರ ಕ್ಷೇತ್ರದ ಮತದಾರರ ಮನೆ ಮಗನಾಗಿ ಕ್ಷೇತ್ರದ ಅಭಿವೃದ್ಧಿ ಶ್ರಮಿಸುತ್ತೇನೆ. ಹಾಗೂ ಈ ಕ್ಷೇತ್ರಕ್ಕೆ ನನ್ನನ್ನು ಟಿಕೆಟ್ ಕೊಟ್ಟು ಚುನಾವಣೆಯಲ್ಲಿ ಇದಕ್ಕೆ ನಮ್ಮ ಪಕ್ಷದ ಹಿರಿಯ ಮುಖಂಡರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.

ಸತೀಶ ಎಂಬಿ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.