ETV Bharat / state

ಜನರ ಸುಗಮ ಜೀವನ, ಸುಲಲಿತ ಬದುಕಿಗಾಗಿ 'ಮಾರ್ವೆಲಸ್ ಮಲ್ಲೇಶ್ವರಂ' ಪ್ರಣಾಳಿಕೆ: ಕಾಂಗ್ರೆಸ್ ಅಭ್ಯರ್ಥಿ ಅನೂಪ್ ಅಯ್ಯಂಗಾರ್

author img

By

Published : May 6, 2023, 6:49 PM IST

ಚುನಾವಣೆಗೆ ಬೆರಳೆಣಿಕೆಯ ದಿನಗಳಷ್ಟೇ ಇದ್ದು, ಇದೀಗ ಮಲ್ಲೇಶ್ವರಂ ಕ್ಷೇತ್ರದ ಅಭ್ಯರ್ಥಿ ಸ್ಮಾರ್ಟ್​ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

Congress candidate Anup Iyengar released the manifesto
ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಅನೂಪ್ ಅಯ್ಯಂಗಾರ್

ಬೆಂಗಳೂರು: ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ವಯೋಮಾನದವರ ಸುಗಮ ಜೀವನ ಮತ್ತು ಸುಲಲಿತ ಬದುಕಿಗೆ ಪೂರಕವಾಗಿರುವ 'ಮಾರ್ವೆಲಸ್ ಮಲ್ಲೇಶ್ವರಂ' (ಅದ್ಭುತ ಮಲ್ಲೇಶ್ವರಂ) ಹೆಸರಿನ ಸ್ಮಾರ್ಟ್ ಪ್ರಣಾಳಿಕೆಯನ್ನು ಕಾಂಗ್ರೆಸ್ ಅಭ್ಯರ್ಥಿ ಅನೂಪ್ ಅಯ್ಯಂಗಾರ್ ಇಂದು ಬಿಡುಗಡೆ ಮಾಡಿದರು.

ಪ್ರೆಸ್​ಕ್ಲಬ್​ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಕ್ಷೇತ್ರದ ಜನರ ಅಭಿಪ್ರಾಯಗಳ ಆಧಾರದ ಮೇಲೆ ಈ ಚುನಾವಣಾ ಭರವಸೆಗಳ ಪತ್ರ ಸಿದ್ಧಪಡಿಸಿದ್ದು, ತಾವು ಚುನಾಯಿತರಾದರೆ ಮಲ್ಲೇಶ್ವರಂ ಭಾಗದ ಗತವೈಭವವನ್ನು ಮರಳಿ ತರುವ ಜೊತೆಗೆ ಎಲ್ಲಾ ವಯೋಮಾನದವರ ಬದುಕನ್ನು ಸಹನೀಯವಾಗಿಸಲು ಶ್ರಮಿಸುತ್ತೇನೆ. ಮಲ್ಲೇಶ್ವರಂ ಬ್ರ್ಯಾಂಡ್ ಉಳಿಸಲು ಸೇವಾ ಮನೋಭಾವನೆಯಿಂದ ಶ್ರಮಿಸುತ್ತೇನೆ ಎಂದರು.

ಮಲ್ಲೇಶ್ವರಂನಲ್ಲಿ ಚತುರ ಸಾರಿಗೆ ವ್ಯವಸ್ಥೆ, ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುವ ಸಹಾಯವಾಣಿ, ದೇವಸ್ಥಾನಗಳು, ಪಾರಂಪರಿಕ ತಾಣಗಳನ್ನು ಪುನರುಜ್ಜೀವನಗೊಳಿಸಲು ಒತ್ತು ನೀಡುತ್ತೇನೆ. ಕ್ಷೇತ್ರದಲ್ಲಿ ಬೆಂಗಳೂರಿನ ಶೇ 50ಕ್ಕೂ ಹೆಚ್ಚು ನವೋದ್ಯಮಗಳಿದ್ದು, ಇವುಗಳಿಗೆ ಸೂಕ್ತ ಹಣಕಾಸು ನೆರವು ಒದಗಿಸಿ, ಕ್ಷೇತ್ರದ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿಕೊಡುತ್ತೇನೆ. ಬೀಗ ಹಾಕಿರುವ ಕ್ರೀಡಾಂಗಣಗಳನ್ನು ಕ್ಷೇತ್ರದ ಜನರ ಉಪಯೋಗಕ್ಕೆ ಮುಕ್ತಗೊಳಿಸಲಾಗುವುದು ಎಂದು ಹೇಳಿದರು.

ಮಲ್ಲೇಶ್ವರಂನಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರದ ಆರೋಪಗಳಿದ್ದು, ತಾವು ಈವರೆಗೆ ನಕಾರಾತ್ಮಕ ಟೀಕೆ- ಟಿಪ್ಪಣಿಗಳನ್ನು ಮಾಡಿಲ್ಲ. ಆದರೆ 45 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ ಜನರ ಅಹವಾಲು ಆಲಿಸಿದ್ದು, ತಮಗೆ ಎಲ್ಲಾ ಕಡೆಗಳಿಂದ ಉತ್ತಮ ಸ್ಪಂದನೆ ದೊರೆತಿದೆ. ಬದಲಾವಣೆ ಬಯಸಿರುವ ಮತದಾರರು ತಮ್ಮನ್ನು ಚುನಾಯಿಸಲಿದ್ದಾರೆ ಎಂದು ಅನೂಪ್ ಅಯ್ಯಂಗಾರ್ ವಿಶ್ವಾಸ ವ್ಯಕ್ತಪಡಿಸಿದರು.

ಮಾಧ್ಯಮಗೋಷ್ಟಿಯಲ್ಲಿ ಮಾಜಿ ಮೇಯರ್ ಹುಚ್ಚಪ್ಪ, ಕಾಂಗ್ರೆಸ್ ಮುಖಂಡ ಗಿರೀಶ್ ಲಕ್ಕಣ್ಣ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಮೋದಿ ರೋಡ್ ಶೋಗೆ ಮಾಜಿ ಪ್ರಧಾನಿ ದೇವೇಗೌಡ 'ನೋ ಕಮೆಂಟ್​': ಜನತೆಗಾಗಿ ಜೆಡಿಎಸ್​ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.