ETV Bharat / state

ಕಾಂಗ್ರೆಸ್​​ ಮುಖಂಡ ದಯಾನಂದಮೂರ್ತಿ ಜೆಡಿಎಸ್​ಗೆ​ ಸೇರ್ಪಡೆ

ಮಹಾಲಕ್ಷಿ ಲೇಔಟ್ ಕಾಂಗ್ರೆಸ್ ಮುಖಂಡ ದಯಾನಂದಮೂರ್ತಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಜೆಡಿಎಸ್​ ತೊರೆದು ಕಾಂಗ್ರೆಸ್ ಸೇರಿದ್ದ ಅವರು ಮತ್ತೆ ಜೆಡಿಎಸ್​ ಕಡೆ ಮುಖ ಮಾಡಿದ್ದು, ದಯಾನಂದಮೂರ್ತಿಯನ್ನು ಜೆಡಿಎಸ್​ಗೆ ಕರೆತರುವ ಮೂಲಕ ಅನರ್ಹ ಶಾಸಕ ಗೋಪಾಲಯ್ಯಗೆ ದೇವೇಗೌಡ್ರು ಸೆಡ್ಡು ಹೊಡೆದ್ರಾ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕಾಂಗ್ರೆಸ್ ಮುಖಂಡ ದಯಾನಂದಮೂರ್ತಿ ಜೆಡಿಎಸ್​ಗೆ
author img

By

Published : Aug 29, 2019, 7:32 PM IST

ಬೆಂಗಳೂರು: ಮಹಾಲಕ್ಷಿ ಲೇಔಟ್ ಕಾಂಗ್ರೆಸ್ ಮುಖಂಡ ದಯಾನಂದಮೂರ್ತಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಇಂದು ಜೆಡಿಎಸ್​​ಗೆ ಸೇರ್ಪಡೆಯಾಗಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ದಯಾನಂದಮೂರ್ತಿ ಹಾಗೂ ಬೆಂಬಲಿಗರಿಗೆ ಪಕ್ಷದ ಸದಸ್ಯತ್ವ ಪತ್ರ ನೀಡಿ ದೇವೇಗೌಡರು ಬರಮಾಡಿಕೊಂಡರು. ಈ ಮೂಲಕ ಮಹಾಲಕ್ಷ್ಮಿ ಲೇಔಟ್ ಅನರ್ಹ ಗೋಪಾಲಯ್ಯಗೆ ಪರ್ಯಾಯ ನಾಯಕನನ್ನು ದೇವೇಗೌಡರು ಕರೆತಂದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಜೆಡಿಎಸ್ ಸೇರ್ಪಡೆ ಬಳಿಕ ದಯಾನಂದಮೂರ್ತಿ ಮಾತನಾಡಿ, ಈ ಹಿಂದೆ ಜೆಡಿಎಸ್​​​ನಲ್ಲೇ ಇದ್ದೆ. ಕೆಲ ಕಾರಣಾಂತರಗಳಿಂದ ಮನೆ ಬಿಡಬೇಕಾಯಿತು. ಈಗ ಮತ್ತೆ ನಮ್ಮ ಮನೆಗೆ ವಾಪಸಾಗಿದ್ದೇನೆ. ನಾನು ತಪ್ಪು ಮಾಡಿದ್ದರೆ ನನನ್ನು ಕ್ಷಮಿಸಬೇಕು ಎಂದು ದೇವೇಗೌಡರಿಗೆ ಕ್ಷಮೆ ಕೋರಿದರು.

ಕಾಂಗ್ರೆಸ್ ಮುಖಂಡ ದಯಾನಂದಮೂರ್ತಿ ಜೆಡಿಎಸ್​ಗೆ

ಜೆಡಿಎಸ್ ವರಿಷ್ಠ ದೇವೇಗೌಡ ಮಾತನಾಡಿ, ಪಕ್ಷ ಬಿಟ್ಟು ಹೋದ ಎಂಟು ಜನರ ಪೈಕಿ ಇವರೂ ಒಬ್ಬರು. ಈ ಮೊದಲು ಪಕ್ಷ ಬಿಟ್ಟು ಹೋದವರನ್ನು ಕರೆದುಕೊಂಡು ಬಂದು ಟಿಕೆಟ್ ನೀಡಿ ತಪ್ಪು ಮಾಡಿದ್ದೇನೆ. ನೀನು ಏಕೆ ಸಾರಿ ಕೇಳುತ್ತೀಯಾ ಎಂದು ದಯಾನಂದಮೂರ್ತಿಗೆ ನಗುತ್ತಲೇ ಹೇಳಿದರು. ಉಪ ಚುನಾವಣೆ ಬರುತ್ತದೆಯೋ, ಇಲ್ಲವೋ. ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್​ನಲ್ಲಿ ಏನಾಗುತ್ತದೋ ಗೊತ್ತಿಲ್ಲ. ಅದರ ಬಗ್ಗೆ ಮಾತನಾಡುವುದಿಲ್ಲ. ನಾವು ಪಕ್ಷ ಸಂಘಟನೆ ಮಾಡುವುದರ ಜೊತೆಗೆ ಪಕ್ಷ ಬಲಪಡಿಸೋಣ ಎಂದು ಹೇಳಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಂದು ಕೆಆರ್​ಎಸ್​ಗೆ ಬಾಗಿನ ಅರ್ಪಿಸುವ ಸಂದರ್ಭ ನಮ್ಮ ಪಕ್ಷದ ಶಾಸಕರಾದ ಪುಟ್ಟರಾಜು, ತಮ್ಮಣ್ಣ ಸೇರಿದಂತೆ ಎಲ್ಲರೂ ಹೋಗಿದ್ದಾರೆ. ಹಾಗೆಂದ ಮಾತ್ರಕ್ಕೆ ಪಕ್ಷ ಬಿಟ್ಟು ಹೋಗುತ್ತಾರೆ ಅನ್ನುವ ಭಾವನೆ ಯಾರಿಗೂ ಬೇಡ. ಮಹಾಲಕ್ಷ್ಮಿ ಲೇಔಟ್​ನಲ್ಲಿ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಅಂತಿಮ ನಿರ್ಧಾರ ಮಾಡಲಾಗುವುದು ಎಂದು ಹೇಳಿದರು.

ಬಿಬಿಎಂಪಿ ಉಪ ಮೇಯರ್ ಭದ್ರೇಗೌಡ, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಪ್ರಕಾಶ್ ಸೇರಿದಂತೆ ಹಲವು ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Intro:ಬೆಂಗಳೂರು : ಮಹಾಲಕ್ಷ್ಮಿಲೇ ಔಟ್ನ ಕಾಂಗ್ರೆಸ್ ಮುಖಂಡ ದಯಾನಂದಮೂರ್ತಿ ಸೇರಿದಂತೆ ಹಲವು ಯುವ ನಾಯಕರು ಇಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಗೆ ಸೇರ್ಪಡೆಯಾಗಿದ್ದಾರೆ. Body:ಅನರ್ಹ ಶಾಸಕ ಗೋಪಾಲಯ್ಯನವರಿಗೆ ಪರ್ಯಾಯವಾಗಿ ಮಹಾಲಕ್ಷ್ಮಿಲೇಔಟ್ ಗೆ ಜೆಡಿಎಸ್ ನಾಯಕನನ್ನು ದೇವೇಗೌಡರು ಕರೆತಂದರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ದಯಾನಂದಮೂರ್ತಿ ಸೇರಿದಂತೆ ಅವರ ಹಲವು ಬೆಂಬಲಿಗರು ಪಕ್ಷದ ಸದಸ್ಯತ್ವ ಪತ್ರ ನೀಡಿ ದೇವೇಗೌಡರು ಬರಮಾಡಿಕೊಂಡರು.
ಈ ವೇಳೆ ದಯಾನಂದಮೂರ್ತಿ ಮಾತನಾಡಿ, ಈ ಹಿಂದೆ ಜೆಡಿಎಸ್ ನಲ್ಲೇ ಇದ್ದೆ. ಕೆಲ ಕಾರಣಾಂತರಗಳಿಂದ ಮನೆ ಬಿಡಬೇಕಾಯಿತು. ಈಗ ಮತ್ತೆ ನಮ್ಮ ಮನೆಗೆ ವಾಪಸಾಗಿದ್ದೇನೆ. ನಾನು ತಪ್ಪು ಮಾಡಿದ್ದರೆ ನನನ್ನು ಕ್ಷಮಿಸಬೇಕೆಂದು ದೇವೇಗೌಡರಿಗೆ ಕ್ಷಮೆಕೋರಿದರು.
ಮಹಾಲಕ್ಷ್ಮಿಲೇಔಟ್ ನಲ್ಲಿ ಪಕ್ಷ ಸಂಘಟನೆ ಮಾಡಿ ದೇವೇಗೌಡರ ಕೈ ಬಲಪಡಿಸಬೇಕಿದೆ ಎಂದು ಹೇಳಿದರು.
ನಂತರ ದೇವೇಗೌಡರು ಮಾತನಾಡಿ, ಪಕ್ಷ ಬಿಟ್ಟು ಹೋದವರ ಎಂಟು ಜನರ ಪೈಕಿ ಅವರೂ ಒಬ್ಬರು. ಆ ವ್ಯಕ್ತಿಯನ್ನು ಮತ್ತೆ ಕರೆದುಕೊಂಡು ಬಂದು ತಪ್ಪು ಮಾಡಿದೆ. ನೀನು ಏಕೆ ಸಾರಿ ಕೇಳುತ್ತೀರಾ ಎಂದು ನಗುತ್ತಲೇ ಹೇಳಿದರು.
ಉಪ ಚುನಾವಣೆ ಬರುತ್ತದೆಯೋ, ಇಲ್ಲವೋ, ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿ ಏನಾಗುತ್ತದೋ, ಏನಾಗಲ್ಲವೋ ಗೊತ್ತಿಲ್ಲ. ಸಾರ್ವಜನಿಕ ಚುನಾವಣೆಯೇ ಬರುತ್ತೋ, ಬರಲ್ವೋ ಅದರ ಬಗ್ಗೆ ಮಾತನಾಡುವುದಿಲ್ಲ. ಆದರೆ, ನಾವು ಪಕ್ಷ ಸಂಘಟನೆ ಮಾಡುವುದರ ಜೊತೆಗೆ ಪಕ್ಷ ಬಲಪಡಿಸೋಣವೆಂದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಇಂದು ಕೆಆರ್ಎಸ್ಗೆ ಬಾಗಿನ ಅರ್ಪಿಸುವ ಸಂದರ್ಭದಲ್ಲಿ ನಮ್ಮ ಪಕ್ಷದ ಶಾಸಕರಾದ ಪುಟ್ಟರಾಜು, ತಮ್ಮಣ್ಣ ಸೇರಿದಂತೆ ಎಲ್ಲರೂ ಹೋಗಿದ್ದಾರೆ. ಹಾಗೆಂದ ಮಾತ್ರಕ್ಕೆ ಪಕ್ಷ ಬಿಟ್ಟು ಹೋಗುತ್ತಾರೆ ಅನ್ನುವ ಭಾವನೆ ಯಾರಿಗೂ ಬೇಡ ಎಂದರು.
ಇನ್ನೂ ಮಹಾಲಕ್ಷ್ಮಿ ಲೇಔಟ್ ನಲ್ಲಿ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಅಂತಿಮ ನಿರ್ಧಾರ ಮಾಡಲಾಗುವುದು ಎಂದು ಹೇಳಿದರು.
ಉಪಮೇಯರ್ ಭದ್ರೇಗೌಡ, ಜೆಡಿಎಸ್ ನ ಬೆಂಗಳೂರು ನಗರ ಘಟಕದ ಅಧ್ಯಕ್ಷ ಪ್ರಕಾಶ್ ಸೇರಿದಂತೆ ಹಲವು ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.