ETV Bharat / state

ಪರಿಷತ್ ಕಲಾಪ: ಉಮೇಶ್ ಕತ್ತಿ, ಶಿವಮೊಗ್ಗ ಸುಬ್ಬಣ್ಣ ಸೇರಿ ಅಗಲಿದ ಗಣ್ಯರಿಗೆ ಸಂತಾಪ - ಅಗಲಿದ ಗಣ್ಯರಿಗೆ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಸಂತಾಪ

ಮಳೆಗಾಲ ಅಧಿವೇಶನದ ಮೊದಲ ದಿನವಾದ ಇಂದು ವಿಧಾನ ಪರಿಷತ್​ನಲ್ಲಿ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಸಂತಾಪ ಸೂಚನಾ ನಿರ್ಣಯ ಮಂಡಿಸಿದರು.

Condolence to seven dignitaries in   Council Session
ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನ ಏಳು ಗಣ್ಯರಿಗೆ ಸಂತಾಪ
author img

By

Published : Sep 12, 2022, 2:28 PM IST

ಬೆಂಗಳೂರು: ಉಮೇಶ್ ಕತ್ತಿ, ಮಾಜಿ ಸಚಿವ ಎಂ.ರಘುಪತಿ, ಮಾಜಿ ಎಂಎಲ್​ಸಿ ಎಂ.ಡಿ.ರಮೇಶ್ ರಾಜು, ಗಾಯಕ ಶಿವಮೊಗ್ಗ ಸುಬ್ಬಣ್ಣ, ಸಾಹಿತಿ ಪ್ರೊ.ಕೋಡಿ ಕುಶಾಲಪ್ಪ ಗೌಡ, ವೈದ್ಯ ಡಾ.ಗುರುರಾಜ್ ಹೆಬ್ಬಾರ್, ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ನಿಧನಕ್ಕೆ ವಿಧಾನ ಪರಿಷತ್​​ನಲ್ಲಿಂದು ಸಂತಾಪ ಸೂಚಿಸಲಾಯಿತು.

ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಸಂತಾಪ ಸೂಚನಾ ನಿರ್ಣಯ ಮಂಡಿಸಿದರು. ನಿರ್ಣಯ ಬೆಂಬಲಿಸಿ ಮಾತನಾಡಿದ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, "ಮಾಜಿ ಸಚಿವ ಕತ್ತಿ ಎಲ್ಲ ಪಕ್ಷದವರನ್ನು ಒಂದೇ ರೀತಿ ಕಾಣುತ್ತಿದ್ದರು. 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಒಮ್ಮೆ ಮಾತ್ರ ಸೋತಿದ್ದರು. ನಾಲ್ಕು ಬಾರಿ ಸಚಿವರಾಗಿದ್ದರು. ಅವರ ಒಟ್ಟು ಸಾರ್ವಜನಿಕ ಜೀವನದ ನಡವಳಿಕೆಗಳು ನಮಗೆಲ್ಲ ನೆನಪಿನಲ್ಲಿ ಉಳಿಯುವ ಘಟನೆಯಾಗಿದೆ" ಎಂದರು.

ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ: ಜಾನಪದ ಹಾಡು ಎಂದರೆ ನೆನಪಾಗುವುದೇ ಗಾಯಕ 'ಶಿವಮೊಗ್ಗ ಸುಬ್ಬಣ್ಣ'. ಕೋಡಗನ ಕೋಳಿ ನುಂಗಿತ್ತಾ ಸೇರಿದಂತೆ ಹಲವು ಗೀತೆ ಹಾಡಿದ್ದರು. ಕಾಡು ಕುದುರೆ ಓಡಿ ಬಂದಿತ್ತಾ ಹಾಡಿಗೆ 'ರಜತಕಮಲ ಪ್ರಶಸ್ತಿ' ಪಡೆದಿದ್ದರು. ಅವರ ನಿಧನ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ ಎಂದು ಅವರು ಸ್ಮರಿಸಿದರು.

ಸಚಿವ‌ ಕೋಟ ಶ್ರೀನಿವಾಸ ಪೂಜಾರಿ

ದ್ವೇಷ, ಅಸೂಯೆ ತೋರಿರಲಿಲ್ಲ: ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತನಾಡಿದ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಕತ್ತಿ ಅವರನ್ನು ಬಹಳ ಹತ್ತಿರದಿಂದ ಬಲ್ಲೆ. ಬೆಳಗಾವಿಯಲ್ಲಿ ಪಕ್ಷಾತೀತವಾಗಿ ಇರುತ್ತಿದ್ದರು. ಎಲ್ಲ ಜಾತಿ, ಧರ್ಮ, ಪಕ್ಷದ ಜನರಿಗೂ ಸಹಾಯ, ನೆರವು ನೀಡುತ್ತಿದ್ದರು. ಉತ್ತರ ಕರ್ನಾಟಕದ ಜನರಿಗೆ ಏನಾದರೂ ಮಾಡಬೇಕು ಎಂದು ಸಾಕಷ್ಟು ಸಹಕಾರಿ ಬ್ಯಾಂಕ್ ಸ್ಥಾಪಿಸಿ ಉದ್ಯೋಗಾವಕಾಶ ಕಲ್ಪಿಸಿದ್ದರು. ಟೀಕೆ ಬಂದಾಗಿ ಸ್ವೀಕಾರ ಮಾಡುತ್ತಿದ್ದರು. ದ್ವೇಷ, ಅಸೂಯೆಯನ್ನು ಕತ್ತಿ ಎಂದೂ ರಾಜಕಾರಣದಲ್ಲಿ ತೋರಿರಲಿಲ್ಲ. ನಮ್ಮ ಪಕ್ಷದವರೇ ಕತ್ತಿ ಅವರ ಪಕ್ಷಾತೀತ ನೆರವು, ಸಹಾಯದ ವಿಷಯವನ್ನು ಹೇಳುತ್ತಿದ್ದರು ಎಂದು ಉಮೇಶ್ ಕತ್ತಿ ಸೇವೆಯನ್ನು, ಕೊಡುಗೆಯನ್ನು ಕೊಂಡಾಡಿದರು.

ಕತ್ತಿ ಅವರೊಂದಿಗಿನ ಒಡನಾಟ ಸ್ಮರಿಸಿದ ಸವದಿ: ಸಭಾಪತಿಗಳ ಅನುಮತಿ ಮೇರೆಗೆ ಮಾತನಾಡಿದ ಸವದಿ, ಕಾರು ಅಪಘಾತವಾಗಿತ್ತು. ನಾನು ಡಿಸ್ಚಾರ್ಜ್ ಆಗಿ ಮನೆಗೆ ಬಂದಾಗ ನನಗೆ ಕತ್ತಿ ಮನೆಯಿಂದ ಕರೆ ಬಂತು. ಸಾಹುಕಾರರಿಗೆ ಹೃದಯಾಘಾತವಾಗಿದೆ ಎನ್ನುವ ಮಾಹಿತಿ ಬಂತು. ನಾನು ಹೋಗಿ ನೋಡುವಷ್ಟರಲ್ಲೇ ನಿಧನರಾಗಿದ್ದರು. ಅಂದು ಊಟಕ್ಕೆ ಸಿದ್ದಪಡಿಸಿ ಎಂದು ತಿಳಿಸಿ ಬಾತ್ ರೂಂಗೆ ಹೋಗಿದ್ದರು. ಆಗಲೇ ಅವರಿಗೆ ಗಂಭೀರವಾದ ಹೃದಯಾಘಾತವಾಗಿತ್ತು. ಅವರನ್ನು ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯದಲ್ಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎಂದು ನಿಧನ ದಿನದ ಘಟನಾವಳಿ ನೆನೆದರು.

ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಮಾತನಾಡಿ,ಕತ್ತಿ ವಿವಾದಿತ ಹೇಳಿಕೆಗಳು ಸಾಕಷ್ಟು ಚರ್ಚೆ ಆಗಿದ್ದವು. ಉತ್ತರ ಕರ್ನಾಟಕದ ಕಡೆಗಣೆಗೆ ಆಕ್ರೋಶಗೊಂಡು ಕತ್ತಿ ಪ್ರತ್ಯೇಕ ರಾಜ್ಯದ ಹೇಳಿಕೆ ನೀಡಿದ್ದರೆ ಹೊರತು ರಾಜ್ಯ ಇಬ್ಬಾಗ ಮಾಡುವ ಉದ್ದೇಶ ಅವರಲ್ಲಿ ಇರಲಿಲ್ಲ. ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ತಂದಿಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿ ಆಗಲ್ಲ ಹಾಗಾಗಿ ಅಂತಹ ಹೇಳಿಕೆ ನೀಡಿದ್ದೆ. ನಾನೂ ಕನ್ನಡಿಗ ಅಖಂಡ ಕರ್ನಾಟಕ ಬಯಸುತ್ತೇನೆ ಎಂದಿದ್ದರು ಎಂದು ಸ್ಮರಿಸಿದರು.

ಬಿಜೆಪಿ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಸತ್ತರೂ ಬದುಕಿದಂತೆ, ಬದುಕಿದರೂ ಸತ್ತಂತೆ ಇರುವ ಎರಡು ವರ್ಗ ಇದೆ. ಇದರಲ್ಲಿ ಮೊದಲ ಸಾಲಿಗೆ ಸೇರಲಿದ್ದಾರೆ. ಅದಕ್ಕೆ ಇಂದು ಕತ್ತಿ ಪರ ಪಕ್ಷಾತೀತವಾಗಿ ಎಲ್ಲರೂ ಸ್ಮರಿಸಿ ಮಾತನಾಡುತ್ತಿರುವುದು ನಿದರ್ಶನ. ನಾವೆಲ್ಲ ಈ ಹಿಂದೆಯೂ ಒಂದೇ ಪಕ್ಷದಲ್ಲಿ ಇದ್ದರೂ, ಅವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹೇಳಿಕೆಗೆ ನಾವು ವಿರೋಧ ವ್ಯಕ್ತಪಡಿಸುತ್ತಿದ್ದೆವು. ಅವರು ಗಂಭೀರ ಮತ್ತು ಹಾಸ್ಯ ಎರಡೂ ಅರ್ಥ ಬರುವಂತೆ ಹೇಳಿಕೆ ನೀಡುತ್ತಿದ್ದರು ಎಂದರು.

ಸಚಿವ ಗೋವಿಂದ ಕಾರಜೋಳ ಮಾತನಾಡಿ, ಉಮೇಶ್​ ರಾಜಕೀಯ, ಔದ್ಯೋಗಿಕ, ಸಹಕಾರಿ ಕ್ಷೇತ್ರದಲ್ಲಿ ಹೆಜ್ಜೆ ಗುರುತು ಬಿಟ್ಟುಹೋಗಿದ್ದಾರೆ. ಅವರು ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎಂದು ಯಾರೂ ಎಣಿಸಿರಲಿಲ್ಲ. ಕತ್ತಿ ಹಿರಿಯರಿಗೆ, ಕಿರಿಯರಿಗೆ ಎಲ್ಲರೂ ಗೆಳೆಯರಾಗಿದ್ದರು. ನಾನು 220 ಮತಗಳಲ್ಲಿ ಸೋತಾಗ ಕತ್ತಿ ದೂರವಾಣಿ ಕರೆ ಮಾಡಿ ಐದು ವರ್ಷದಲ್ಲಿ ಒಂದೈದುನೂರು ಜನರ ಜೊತೆ ಕೂಡಿ ಸಾರಾಯಿ ಕುಡಿಯೋಕಾಗಲಿಲ್ವಾ?, ಹಾಗೆ ಮಾಡಿದ್ದರೆ 220 ಮತ ಬರ್ತಾ ಇತ್ತಲ್ವಾ ಎಂದು ಹಾಸ್ಯ ಮಾಡಿದ್ದರು. ಕ್ಷೇತ್ರದ ಕೆರೆ ದುರಸ್ತಿಗೆ ಸರ್ಕಾರದಿಂದ ಹಣ ಬಿಡುಗಡೆ ತಡವಾದರೆ ನಾನೆ ಕೊಟ್ಟಿರ್ತೀನಿ ಕೆಲಸ ಶುರು ಮಾಡಿಸು ಎಂದು ನನಗೆ ಹೇಳಿದ್ದರು. ಹಿಡಿದ ಕೆಲಸ ಬಿಡದ ವ್ಯಕ್ತಿ ಅವರು ಎಂದು ಅವರಿಂದಿಗಿನ ಒಡನಾಟ ಸ್ಮರಿಸಿದರು.

ಇದನ್ನೂ ಓದಿ: ಹುಕ್ಕಾಬಾರ್, ಡ್ಯಾನ್ಸ್ ಬಾರ್​ಗಳ ಮೇಲೆ ಕ್ರಮ: ಸರ್ಕಾರದ ಅಸಹಾಯಕತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.