ETV Bharat / state

ಶಾಸಕ ಸಿದ್ದು ಸವದಿ ವಿರುದ್ಧ ಮಹಿಳಾ ಆಯೋಗ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ದೂರು

author img

By

Published : Dec 1, 2020, 9:00 PM IST

ಶಾಸಕ ಸಿದ್ದು ಸವದಿ ಪುರಸಭೆಯ ಸದಸ್ಯೆ ಮಹಿಳೆ ಎಂದು ಗೊತ್ತಿದ್ದರೂ ಸಹ ಅಮಾನುಷವಾಗಿ ನೂಕಿ ತಳ್ಳಿ ಕೆಳಗೆ ಬೀಳುವಂತೆ ಮಾಡಿ ಗರ್ಭಪಾತ ಆಗಲು ಕಾರಣರಾಗಿದ್ದಾರೆ. ಹಾಗಾಗಿ ಅವರ ಮತ್ತು ಅವರ ಬೆಂಬಲಿಗರ ಕಾನೂನು ಬಾಹಿರ ಚಟುವಟಿಕೆ ಸಂಬಂಧ ಗೂಂಡಾ ಕಾಯ್ದೆಯಡಿ ದಸ್ತಗಿರಿ ಮಾಡಿ ಮಹಿಳೆಗೆ ನ್ಯಾಯ ಒದಗಿಸಬೇಕು ಎಂದು ದೂರು ಸಲ್ಲಿಸಲಾಗಿದೆ.

complaints have been filed against MLA Siddu Savadi
ಕೆಪಿಸಿಸಿ ಮಹಿಳಾ ಘಟಕದಿಂದ ಮನವಿ ಪತ್ರ ಸಲ್ಲಿಕೆ

ಬೆಂಗಳೂರು: ನ. 9ರಂದು ಬಾಗಲಕೋಟೆಯ ಮಹಾಲಿಂಗಪುರದ ಪುರಸಭೆ ಚುನಾವಣೆಯ ದಿನದಂದು ಬಿಜೆಪಿ ಶಾಸಕ ಸಿದ್ದು ಸವದಿ ಪುರಸಭಾ ಸದಸ್ಯೆ ಚಾಂದಿನಿ ನಾಯಕ್ ಮೇಲೆ ನಡೆಸಿದ ದೌರ್ಜನ್ಯದಿಂದ ಆಕೆಗೆ ಗರ್ಭಪಾತವಾಗಿದೆ. ಈ ಕೂಡಲೇ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಮಹಿಳಾ ಕಾಂಗ್ರೆಸ್ ಇಂದು ಮಹಿಳಾ ಆಯೋಗ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದೆ.

ಇದನ್ನೂ ಓದಿ: ಸಿದ್ದು ಸವದಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ: ಪುಷ್ಪ ಅಮರನಾಥ್

ತೇರದಾಳ ಶಾಸಕ ಸಿದ್ದು ಸವದಿ ಅಕ್ರಮವಾಗಿ ಮಾತ್ರವಲ್ಲ, ಸಾರ್ವಜನಿಕರ ಎದುರೇ ತಡೆದು ಪುರಸಭಾ ಅಂಗಳದಿಂದ ತಳ್ಳಿ ಮೆಟ್ಟಿಲುಗಳಿಂದ ಕೆಳಗೆ ಬೀಳುವಂತೆ ಮಾಡಿ ಮೂರು ತಿಂಗಳು ತುಂಬಿದ್ದ ಚಾಂದಿನಿಗೆ ಗರ್ಭಪಾತ ಆಗಲು ಕಾರಣರಾಗಿದ್ದಾರೆ. ಶಾಸಕರು ಮತ್ತು ಅವರ ಬೆಂಬಲಿಗರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮತ್ತು ಐದು ಕೋಟಿ ಪರಿಹಾರಧನವನ್ನು ಕಟ್ಟಿಕೊಡಲು ಮನವಿ ಮಾಡಿ ಈ ಪತ್ರ ಸಲ್ಲಿಕೆ ಮಾಡಲಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಚುನಾವಣೆಯಲ್ಲಿ ಮತದಾನ ಮಾಡಲು ಹೋದಾಗ ಅಕ್ರಮವಾಗಿ ಶಾಸಕರು ಮತ್ತು ಬೆಂಬಲಿಗರು ತಡೆಹಿಡಿದಿದ್ದಾರೆ. ಪುರಸಭೆಯ ಸದಸ್ಯೆ ಮಹಿಳೆ ಎಂದು ಗೊತ್ತಿದ್ದರೂ ಸಹ ಅಮಾನುಷವಾಗಿ ನೂಕಿ ತಳ್ಳಿ ಕೆಳಗೆ ಬೀಳುವಂತೆ ಮಾಡಿ ಗರ್ಭಪಾತ ಆಗಲು ಕಾರಣರಾಗಿದ್ದಾರೆ. ಮಹಿಳಾ ಸದಸ್ಯೆ ಮೇಲೆ ಈ ಗೂಂಡಾ ವರ್ತನೆಯನ್ನು ಖಂಡಿಸುತ್ತೇವೆ. ಸಾರ್ವಜನಿಕವಾಗಿ ಪತಿ ನಾಗೇಶ್ ಜೊತೆಯಲ್ಲಿದ್ದರೂ ಸಹ ಶಾಸಕ ಮತ್ತು ಅವರ ಬೆಂಬಲಿಗರ ಕಾನೂನು ಬಾಹಿರ ಚಟುವಟಿಕೆ ಸಂಬಂಧ ಗೂಂಡಾ ಕಾಯ್ದೆಯಡಿ ದಸ್ತಗಿರಿ ಮಾಡಿ ಮಹಿಳೆಗೆ ನ್ಯಾಯ ಒದಗಿಸಬೇಕು. ಹಾಡಹಗಲೇ ಮಹಿಳಾ ಸದಸ್ಯರ ಗತಿಯೇ ಹೀಗಾದರೆ ಇನ್ನು ಶ್ರೀಸಾಮಾನ್ಯರ ಗತಿಯೇನು ಎಂದು ಮನವಿ ನೀಡಿದ ಪತ್ರದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: ಮಹಾಲಿಂಗಪುರ ಪುರಸಭೆ ಚುನಾವಣೆ ವೇಳೆ ಗಲಾಟೆ: ಸದಸ್ಯೆಯನ್ನು ತಳ್ಳಿದ ಶಾಸಕ ಸವದಿ!

ಮೇಲಿನ ಎಲ್ಲಾ ಸತ್ಯಸಂಗತಿ ಆಧರಿಸಿ ನೊಂದ ಪುರಸಭಾ ಸದಸ್ಯ ಚಾಂದಿನಿ ನಾಯಕ್ ಅವರ ಮಾನನಷ್ಟಕ್ಕೆ ಕಾರಣರಾದ ಶಾಸಕ ಮತ್ತು ಅವರ ಬೆಂಬಲಿಗರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಪ್ರಾರ್ಥಿಸಿಕೊಳ್ಳುತ್ತೇವೆ ಎಂದು ದೂರು ಸಲ್ಲಿಕೆ ಮಾಡಿರುವ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹಾಗೂ ಮಹಿಳಾ ಆಯೋಗದ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ. ಇದೇ ಸಂದರ್ಭ ಇವರೊಂದಿಗೆ ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಕೂಡ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.