ಬೆಂಗಳೂರು: ಸಿಆರ್ಪಿಎಸ್ ಯೋಧ ಮತದಾನ ಮಾಡಿದನ್ನ ಫೇಸ್ಬುಕ್ಗೆ ಹಾಕಿ ಮತಯಾಚನೆ ಮಾಡಿರುವ ಪೋಸ್ಟ್ ಶೇರ್ ಮಾಡಿದ್ದ ಆರೋಪದಡಿ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಆಭ್ಯರ್ಥಿ ಸುಮಲತಾ ಅಂಬರೀಷ್ ವಿರುದ್ಧ ರಾಜ್ಯ ಚುನಾವಣಾ ಆಯೋಗದಲ್ಲಿ ದೂರು ದಾಖಲಾಗಿದೆ.
ಕಿರಣ್ ಸೇರಿದಂತೆ ಐವರು ವಕೀಲರು ಇಂದು ಆಯೋಗಕ್ಕೆ ದೂರು ನೀಡಿದ್ದಾರೆ. ಮತದಾನ ಮಾಡಿದ ಯೋಧನ ಪೊಟೋಗಳನ್ನ ಫೇಸ್ಬುಕ್ಗೆ ಹಾಕಿದ್ದ ಪೋಸ್ಟ್ನನ್ನು ಶೇರ್ ಮಾಡಿ ಸುಮಲತಾ ಮತಯಾಚಿಸಿದ್ದಾರೆ.
ಪೋಸ್ಟ್ ಮಾಡಿದ್ದ ಫೊಟೋಗಳು ಉಳಿದ ಮಂಡ್ಯ ಮತದಾರರನ್ನ ಪ್ರೇರೆಪಿಸಿವೆ. ಯಾವುದೇ ಯೋಧನನ್ನ ಬಳಸಿಕೊಂಡು ಮತಯಾಚನೆ ಮಾಡುವ ಹಾಗಿಲ್ಲ. ಇದು ಕಾನೂನಿಗೆ ಬಾಹಿರ ಅಂತ ಗೊತ್ತಿದ್ದರೂ ಸುಮಲತಾ ಅವರು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಸುಮಲತಾ ಅಂಬರೀಶ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.