ETV Bharat / state

ಉದ್ಯಮಿಗೆ ಲಂಚ ಬೇಡಿಕೆಯಿಟ್ಟ ಎಎಸ್​ಐ ವಿರುದ್ಧ ಎಸಿಬಿಗೆ ದೂರು

author img

By

Published : Jun 12, 2021, 5:40 PM IST

ಉದ್ಯಮಿ ಭರತ್ ಮೇಲೆ ವಂಚನೆ, ಹಲ್ಲೆ ಕೇಸ್​ ದಾಖಲಾಗಿತ್ತು. ಅದು ಸುಳ್ಳೊ ಸತ್ಯವೋ ಎನ್ನುವುದು ತನಿಖೆಯಾಗಬೇಕಿದೆ. ಆದರೆ ಆ ಕೇಸ್​ನ್ನು ಬಿ ರಿಪೋರ್ಟ್ ಮಾಡಿಸಿ ಕೊಡುತ್ತೇನೆ. 10 ಲಕ್ಷ ರೂ. ಫೀಸ್ ಆಗುತ್ತದೆ ಎಂದಿದ್ದರಂತೆ.

Complaint to ACB against ASI for bribing
ಉದ್ಯಮಿಗೆ ಲಂಚ ಬೇಡಿಕೆಯಿಟ್ಟ ಎಎಸ್​ಐ ವಿರುದ್ಧ ಎಸಿಬಿಗೆ ದೂರು

ಬೆಂಗಳೂರು: ಉದ್ಯಮಿಗೆ ಲಂಚದ ಬೇಡಿಕೆ ಇಟ್ಟ ಎಎಸ್ಐ ವಿರುದ್ಧ ಎಸಿಬಿ ಮತ್ತು ಪೊಲೀಸ್ ಕಮಿಷನರ್​ಗೆ ದೂರು ಸಲ್ಲಿಸಲಾಗಿದೆ.

ಎಎಸ್​ಐ ದಯಾನಂದ್ ಎಂಬಾತ ಲಂಚಕ್ಕೆ ಬೇಡಿಕೆಯಿಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೇಸ್​ ಮುಚ್ಚಿ ಹಾಕಲು 10 ಲಕ್ಷ ಲಂಚ ಕೇಳಿದ್ದ ಈಶಾನ್ಯ ವಿಭಾಗದ ಡಿಸಿಪಿ ಆಪ್ತ ಎಂದು ಹೇಳಿಕೊಂಡ ಎಎಸ್​ಐ ದಯಾನಂದ್ ಸ್ವಾಮಿ 5 ಲಕ್ಷ ರೂ. ಲಂಚ ಪಡೆಯುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಲ್ಲೇಶ್ವರಂ ಮೂಲದ ಭರತ್ ಶೆಟ್ಟಿ ಎನ್ನುವ ಉದ್ಯಮಿಯೊಬ್ಬರು ಕೊಡಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆಯ ಬಗ್ಗೆ ವಿಡಿಯೋ ಸಮೇತ ದೂರು ನೀಡಿದ್ದಾರೆ.

ರೋಲ್ ಕಾಲ್ ಎನ್ನುವುದು ಡಿಪಾರ್ಟ್ಮೆಂಟ್ ನಲ್ಲಿ ಅಧಿಕೃತವಾಗಿ ಸಂಭೋಧಿಸುವ ಶಬ್ದ. ಆದರೆ ಈ ಎಎಸ್​ಐ ಅದನ್ನ ಬೇರೆ ರೀತಿಯಲ್ಲಿ ಸಿಕ್ಕ ಸಿಕ್ಕವರ ಬಳಿ‌ ರೋಲ್ ಕಾಲ್ ಶುರು ಹಚ್ಚಿಕೊಂಡಿದ್ದ. ಉದ್ಯಮಿ ಭರತ್ ಮೇಲೆ ವಂಚನೆ , ಹಲ್ಲೆ ಕೇಸ್​ ದಾಖಲಾಗಿತ್ತು. ಅದು ಸುಳ್ಳೊ ಸತ್ಯವೋ ಎನ್ನುವುದು ತನಿಖೆಯಾಗಬೇಕಿದೆ.

ಆದರೆ ಆ ಕೇಸ್​ನ್ನು ಬಿ ರಿಪೋರ್ಟ್ ಮಾಡಿಸಿ ಕೊಡುತ್ತೇನೆ. 10 ಲಕ್ಷ ರೂ. ಫೀಸ್ ಆಗುತ್ತದೆ ಎಂದಿದ್ದರಂತೆ. 10 ಲಕ್ಷ ರೂ. ಬೇಡಿಕೆ ಈಡೇರಿಸದಿದ್ದಲ್ಲಿ ರೌಡಿ ಶೀಟರ್ ಎಂದು ಕೇಸ್​ ಹಾಕುವುದಾಗಿ ಬೆದರಿಕೆ ಹಾಕಲಾಗಿದೆಯಂತೆ. ಇದಲ್ಲದೇ ಮತ್ತೆ 50 ಲಕ್ಷ ರೂ. ಲಂಚವನ್ನು ಕೇಳಿದ್ದಾರೆ. ಅಷ್ಟಲ್ಲದೆ ಕುಳ್ಳ ಮಂಜ‌, ಕುಳ್ಳ ನಾಗ ಎಂಬ ರೌಡಿ ಸಹೋದರರಿಂದ ಭರತ್ ಮೇಲೆ ಮತ್ತೆ ಕೇಸ್​ ಹಾಕಿಸಿದ್ದಾರಂತೆ. ಈ ಬೆಳವಣಿಗೆಯಿಂದ ಬೆದರಿದ ಭರತ್, ತನ್ನ ಸ್ನೇಹಿತರ ಮುಖಾಂತರ 5‌ ಲಕ್ಷ ಅಡ್ವಾನ್ಸ್ ನೀಡಿದ್ದಾರೆ.

ಈ ಕುರಿತು ಎಸಿಬಿ ಮತ್ತು ಪೊಲೀಸ್ ಕಮಿಷನರ್​ಗೆ ಉದ್ಯಮಿ‌ ಭರತ್ ಶೆಟ್ಟಿ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಎಎಸ್​ಐ ‌ದಯಾನಂದ್ ಎಸ್ಕೇಪ್ ಆಗಿದ್ದಾರೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.