ETV Bharat / state

ಎಎಸ್​ಐ ವಿರುದ್ಧ ಲಂಚಾವತಾರದ ಬಗ್ಗೆ ಆರೋಪಿಸಿದ್ದ ಉದ್ಯಮಿ ಭರತ್ ಶೆಟ್ಟಿ ವಿರುದ್ಧವೇ ದೂರು..!

author img

By

Published : Jun 12, 2021, 9:42 PM IST

ಶ್ರೀನಿವಾಸ್ ಮೂರ್ತಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಭರತ್ ಶೆಟ್ಟಿ ತನ್ನದೆಂದು ಬೋರ್ಡ್ ಹಾಕಿಕೊಂಡಿದ್ದನಂತೆ. ಅಲ್ಲದೇ, ಶ್ರೀನಿವಾಸ್​ ಮೂರ್ತಿಗೆ ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಎಲ್ಲ ದಾಖಲಾತಿಗಳು ಇದ್ದರೂ ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸಲು ಹೋಗಿ ಈಗ ಭರತ್‌ಶೆಟ್ಟಿ ಸಿಕ್ಕಿ ಬಿದಿದ್ದಾನೆ ಎನ್ನಲಾಗಿದೆ.

businessman Bharat Shetty
ಉದ್ಯಮಿ ಭರತ್ ಶೆಟ್ಟಿ

ಬೆಂಗಳೂರು: ಎಎಸ್​​ಐ ಲಂಚಾವತಾರದ ಬಗ್ಗೆ ಗುರುತರ ಆರೋಪ ಮಾಡಿದ್ದ ಭರತ್ ಶೆಟ್ಟಿ ವಿರುದ್ಧವೇ ದೂರು ದಾಖಲಾಗಿದ್ದು, ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂ ಕಬಳಿಕೆ ಮಾಡಲು ಯತ್ನಿಸಿದ ಆರೋಪದಡಿ ದೂರು ದಾಖಲಾಗಿದೆ.

ಶ್ರೀನಿವಾಸ್ ಮೂರ್ತಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಭರತ್ ಶೆಟ್ಟಿ ತನ್ನದೆಂದು ಬೋರ್ಡ್ ಹಾಕಿಕೊಂಡಿದ್ದನಂತೆ. ಅಲ್ಲದೇ, ಶ್ರೀನಿವಾಸ್​ ಮೂರ್ತಿಗೆ ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಎಲ್ಲ ದಾಖಲಾತಿಗಳು ಇದ್ದರೂ ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸಲು ಹೋಗಿ ಈಗ ಭರತ್‌ಶೆಟ್ಟಿ ಸಿಕ್ಕಿ ಬಿದಿದ್ದಾನೆ ಎನ್ನಲಾಗಿದೆ.

ಘಟನೆ ವಿವರ:

ಶ್ರೀನಿವಾಸ್ ಮೂರ್ತಿ ನಗರದ ಹೊರವಲಯದ ಚಿಕ್ಕಬೊಮ್ಮಸಂದ್ರ ಗ್ರಾಮದ ಸರ್ವೆ ನಂಬರ್ 16/1 ರಲ್ಲಿ 0.10 ಗುಂಟೆ ಜಮೀನನ್ನು ಪಿರ್ಯಾದುದಾರರ ಹೆಸರಿಗೆ ದಿನಾಂಕ: 20/08/1991 ರಂದು ಸೇಲ್ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೆ. ಜೊತೆಗೆ ದಿನಾಂಕ 10/12/1991 ರಂದು ಜಿಪಿಎ ಮತ್ತು ಪ್ರಮಾಣ ಪತ್ರ ಸಹ ಆಗಿದೆ. ಹೀಗಿರುವಾಗ ಶ್ರೀನಿವಾಸ್ ಮೂರ್ತಿ ಜಮೀನನ್ನು ಕಬಳಿಸಲು ಯಲಹಂಕ ಉಪನಗರದ ವಾಸಿಯಾದ ಭರತ್ ಶೆಟ್ಟಿ ಸಂಚು ರೂಪಿಸಿದ್ದನಂತೆ.

2013 ರಲ್ಲಿಮೃತಪಟ್ಟಿದ್ದ ಮುನಿತಾಯಮ್ಮರನ್ನು ಬದುಕಿದ್ದಾರೆಂದು ತೋರಿಸಿ, ದಿನಾಂಕ 27/04/2021 ರಂದು ನಕಲಿ ಮುನಿತಾಯಮ್ಮ ಒಬ್ಬರನ್ನು ಬ್ಯಾಟರಾಯನಪುರ ಸಬ್ ರಿಜಿಸ್ಟ್ರಾರ್ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಭರತ್ ಶೆಟ್ಟಿ, ತನ್ನ ಹೆಸರಿಗೆ ಸೇಲ್ ಅಗ್ರಿಮೆಂಟ್ ಮಾಡಿಕೊಂಡು ಜಮೀನು ತನ್ನದೆಂದು ಬೋರ್ಡ್ ಹಾಕಿದ್ದಾನೆ ಎಂದು ದೂರಲಾಗಿದೆ.

ವಿಚಾರ ತಿಳಿದು ಪಿರ್ಯದುದಾರರು ದಿನಾಂಕ 31/05/2021 ರಂದು ಮಧ್ಯಾಹ್ನ 2 ಗಂಟೆಗೆ ಜಮೀನಿನ ಬಳಿ ಬಂದು ಬೋರ್ಡನ್ನು ತೆಗೆಸಿ ಹಾಕಿದ್ದರಿಂದ, ಭರತ್ ಶೆಟ್ಟಿ ಜಮೀನು ತನ್ನದೆಂದು ತಕರಾರು ತೆಗೆದಿದ್ದಾರೆ. ಅಲ್ಲದೇ ಶ್ರೀನಿವಾಸ್ ಮೂರ್ತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಇನ್ನೊಂದು ಬಾರಿ ಈ ಜಮೀನಿನ ಕಡೆ ಬಂದರೆ ನಿನ್ನನ್ನು ಮುಗಿಸುತ್ತೇನೆಂದು ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾರೆ.

ಇದನ್ನೂ ಓದಿ:ಉದ್ಯಮಿಗೆ ಲಂಚ ಬೇಡಿಕೆಯಿಟ್ಟ ಎಎಸ್​ಐ ವಿರುದ್ಧ ಎಸಿಬಿಗೆ ದೂರು

ಈ ಕುರಿತಂತೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಭರತ್ ಶೆಟ್ಟಿ ವಿರುದ್ಧ ಐಪಿಸಿ ಸೆಕ್ಷನ್ 1860 (506, 34, 504, 419, 420) ರ ಅಡಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.