ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾದ ಬಗ್ಗೆ ತನಿಖೆಗೆ ಇಳಿದಿರುವ ಬೆಂಗಳೂರು ಪೊಲೀಸರ ಬೆನ್ನಿಗೆ ನಿಂತಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಸದ್ಯ ಸಿಬ್ಬಂದಿಯ ಕೆಲಸದ ಬಗ್ಗೆ ಒಂದೇಡೆ ಭೇಷ್ ಅಂದ್ರೆ ಮತ್ತೊಂದೆಡೆ ಖಡಕ್ ಸೂಚನೆ ಕೊಟ್ಟಿದ್ದಾರೆ.
ಈಗಾಗಲೇ ಗಾಂಜಾ ಕೇಸ್ನಲ್ಲಿ ಬಂಧಿತರಾದವರನ್ನು ಮತ್ತಷ್ಟು ವಿಚಾರಣೆ ನಡೆಸಬೇಕು. ಅವರು ಎಲ್ಲೆಲ್ಲಿಂದ ಗಾಂಜಾ ತರುತ್ತಿದ್ದರು ಎನ್ನುವುದರ ಬಗ್ಗೆ ತನಿಖೆ ನಡೆಸಬೇಕು. ಬೆಂಗಳೂರಿನ ಹಲವೆಡೆ ಈಗಾಗಲೇ ಆರೋಪಿಗಳನ್ನ ಬಂಧಿಸಲಾಗಿದೆ. ಹೀಗಾಗಿ ಇದರ ಬಗ್ಗೆ ಕೂಲಂಕಷವಾಗಿ ಮಾಹಿತಿ ಕಲೆಹಾಕಬೆಕು. ಕೇವಲ ಆರೋಪಿಗಳನ್ನ ಬಂಧಿಸಿ ಗಾಂಜಾ ವಶಪಡಿಸಿಕೊಂಡು ಜೈಲಿಗೆ ಕಳಿಸುವುದಷ್ಟೇ ಅಲ್ಲ, ಅವರು ಎಲ್ಲಿಂದ ತರುತ್ತಿದ್ದಾರೆ ಅಂತ ತನಿಖೆ ನಡೆಸಬೇಕು ಎಂದಿದ್ದಾರೆ.
ಬಂಧಿತರಲ್ಲಿ ಕೆಲವರು ನೈಜೀರಿಯಾ ಪ್ರಜೆಗಳೂ ಇದ್ದಾರೆ. ಅಂತವರಿಗೆ ನೇರವಾಗಿ ಗಾಂಜಾ ಹೇಗೆ ಸಿಗ್ತಿದೆ? ಬೆಂಗಳೂರಿನಲ್ಲಿ ಎಲ್ಲೆಲ್ಲಿ ಮಾರಾಟ ಮಾಡುತ್ತಾರೆ, ಎಷ್ಟಕ್ಕೆ ಮಾರಾಟ ಮಾಡ್ತಾರೆ, ಎಂತವರನ್ನ ಟಾರ್ಗೆಟ್ ಮಾಡಿ ಗಾಂಜಾ ಮಾರಾಟ ಮಾಡುತ್ತಿದ್ದರು, ಈಗ ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್ನಲ್ಲಿ ತನಿಖೆ ನಡಿತಿದೆ. ಇದರಲ್ಲಿ ಕೆಲ ನೈಜೀರಿಯಾ ಡ್ರಗ್ಸ್ ಪೆಡ್ಲರ್ಗಳ ಬಂಧನವಾಗಿದೆ. ಅಂತವರ ಜೊತೆ ನಟಿ ಹಾಗೂ ಆಪ್ತರಿಗೆ ಲಿಂಕ್ ಹೇಗೆ? ಇನ್ನು ಯಾರದಾದರೂ ಲಿಂಕ್ ಇದೆಯಾ ಎಂಬುದರ ಬಗ್ಗೆ ತನಿಖೆ ನಡೆಸಿ. ಆಳಕ್ಕೆ ಇಳಿದಾಗ ಇನ್ನಷ್ಟು ದೊಡ್ಡ ಜಾಲ ಸಿಗಬಹುದು. ಈ ಮೂಲಕ ತನಿಖೆಗೆ ಬಹಳಷ್ಟು ಸಹಾಯವಾಗಬಹುದೆಂದು ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಆಯುಕ್ತರು ಸೂಚನೆ ನೀಡಿದ್ದಾರೆ.