ಯಲಹಂಕ (ಬೆಂಗಳೂರು): ಕೊರೊನಾ ಹಿನ್ನೆಲೆ ಪದವಿ ಕಾಲೇಜುಗಳು ಸೆಪ್ಟೆಂಬರ್ ನಂತರ ಪ್ರಾರಂಭವಾಗಲಿದ್ದು, ಸದ್ಯ ನೋಂದಣಿ ಪ್ರಕ್ರಿಯೆ ನಡೆಯಲಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್ ವಿಶ್ವನಾಥ್ ಹೇಳಿದ್ದಾರೆ.
ಯುಜಿಸಿ ಸಮ್ಮತಿಯ ಮೇಲೆ ಪದವಿ ಕಾಲೇಜುಗಳು ಪ್ರಾರಂಭವಾಗಲಿದೆ, ಸದ್ಯ ಕಾಲೇಜು ಸೇರಲು ನಡೆಯುವ ನೋಂದಣಿ ಮತ್ತು ಪ್ರಾಥಮಿಕ ಪ್ರಕ್ರಿಯೆಗಳು ಆರಂಭವಾಗಲಿದೆ. ಸಾರ್ವಜನಿಕರು ಸರ್ಕಾರಿ ಕಾಲೇಜುಗಳ ಸದುಪಯೋಗ ಪಡಿಸಿಕೊಳ್ಳವಂತೆ ಮನವಿ ಮಾಡಿದರು.
ಯಲಹಂಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಜ್ಯದಲ್ಲೆ ಎರಡನೇ ದೊಡ್ಡ ಕಾಲೇಜಾಗಿದೆ. ನ್ಯಾಕ್ ಮಾನ್ಯತೆ ಪಡೆದ ಯಲಹಂಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸದುಪಯೋಗ ಪಡೆದುಕೊಳ್ಳವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದರು. ಖಾಸಗಿ ಕಾಲೇಜಿಗಿಂತ ಉತ್ತಮವಾಗಿದೆ, ಅಲ್ಲದೆ ಶೇ. 100ಕ್ಕೆ 100ರಷ್ಟು ಫಲಿತಾಂಶ ಬಂದಿದೆ ಎಂದರು.