ETV Bharat / state

ಆಂಬ್ಯುಲೆನ್ಸ್​​​ ಹಾಗೂ ಹಾಲಿನ ಕಂಟೈನರ್​ ನಡುವೆ ಡಿಕ್ಕಿ - ಬೆಂಗಳೂರಲ್ಲಿ ರಸ್ತೆ ಅಪಘಾತ

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಕಂಟೈನರ್​ ರಸ್ತೆಯಲ್ಲಿ ಪಲ್ಟಿಯಾಗಿತ್ತು.

milk-container
milk-container
author img

By

Published : Sep 19, 2021, 10:31 PM IST

ಬೆಂಗಳೂರು: ಕಂಟೈನರ್​ ಹಾಗೂ ಆಂಬ್ಯುಲೆನ್ಸ್​​ ನಡುವೆ ಡಿಕ್ಕಿ ಸಂಭವಿಸಿ ಕಂಟೈನರ್​ ಪಲ್ಟಿಯಾಗಿರುವ ಘಟನೆ ​ರೇಸ್ ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್ ಬಳಿ ನಡೆದಿದೆ.

ಆಂಬ್ಯುಲೆನ್ಸ್​​​ ಹಾಗೂ ಹಾಲಿನ ಕಂಟೈನರ್​ ನಡುವೆ ಡಿಕ್ಕಿ

ಮುಂದೆ ಬರುತ್ತಿದ್ದ ಆಂಬ್ಯುಲೆನ್ಸ್​​ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಂಟೈನರ್ ಚಾಲಕ​​​​ ಡಿವೈಡರ್​ಗೆ ಗುದ್ದಿದ್ದಾನೆ. ಪರಿಣಾಮ ವಾಹನ ಪಲ್ಟಿಯಾಗಿ ರಸ್ತೆಯಲ್ಲಿ ಬಿದ್ದಿತ್ತು. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಚಾಲಕರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಘಟನೆಯಲ್ಲಿ ಪಲ್ಟಿಯಾದ ಕಂಟೈನರ್​​ನಿಂದ ಹಾಲಿನ ಪ್ಯಾಕ್​ಗಳನ್ನು ಮತ್ತೊಂದು ವಾಹನಕ್ಕೆ ಶಿಫ್ಟ್​ ಮಾಡಲಾಗಿದ್ದು, ಹೈಗ್ರೌಂಡ್ಸ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ರಾಜ್ಯದಲ್ಲಿಂದು 783 ಹೊಸ ಕೋವಿಡ್ ಕೇಸ್ ಪತ್ತೆ: 16 ಸೋಂಕಿತರು ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.