ETV Bharat / state

ಪ್ರಿಯತಮೆಗಾಗಿ ಮಾರಾಮಾರಿ: ಕಾಲೇಜಿನಲ್ಲಿ‌ರಬೇಕಾದ ಇಬ್ಬರು ವಿದ್ಯಾರ್ಥಿಗಳು ಕಂಬಿ ಹಿಂದೆ..! - ಯುವಕನಿಗೆ ಚಾಕು ಇರಿದ ಕಾಲೇಜು ವಿದ್ಯಾರ್ಥಿ

ಹುಡುಗಿ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಚಾಕು ಇರಿದ ಪ್ರಕರಣದಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಜೈಲು ಸೇರಿದ್ದಾರೆ.

college students arrested over fights for girlfriend
ಹುಡುಗಿ ವಿಚಾರಕ್ಕೆ ಚಾಕು ಇರಿತ
author img

By

Published : Oct 21, 2021, 10:36 PM IST

ಬೆಂಗಳೂರು: ಅವರೆಲ್ಲರೂ ಕಾಲೇಜ್ ವಿದ್ಯಾರ್ಥಿಗಳು.. ಕಾಲೇಜ್ ಕ್ಲಾಸ್ ಅಂತ ಬ್ಯುಸಿಯಾರ್ಗಿಬೇಕಿದ್ದ ವಯಸ್ಸು.. ಆದರೆ ಪ್ರೀತಿ- ಪ್ರೇಮ ಅಂತ ಓರ್ವ ಹುಡುಗಿಯ ಹಿಂದೆ ಬಿದ್ದ ಇಬ್ಬರು ಹುಡುಗರು ಈಗ ತಮ್ಮ ಜೀವನವನ್ನೆ ಹಾಳು ಮಾಡಿಕೊಂಡಿದ್ದಾರೆ.

ಓದಿಕೊಂಡು ಒಂದೊಳ್ಳೆ ಕೆಲಸ ಹುಡುಕಿಕೊಳ್ಳುವ ವಯಸ್ಸಲ್ಲಿ ಲವ್ವು-ಡವ್ವು ಅಂದ್ಕೊಂಡೇ ಜೀವನ ಹಾಳು ಮಾಡಿಕೊಳ್ಳುವ ಯುವಕರ‌ ಸಂಖ್ಯೆ ಹೆಚ್ಚಾಗುತ್ತಿದೆ. ಒಂದು ಹುಡುಗಿಯನ್ನ ಇಬ್ಬರು ಹುಡುಗರು ಲವ್ ಮಾಡಿ ಇದೀಗ ಭವಿಷ್ಯವನ್ನೇ ಹಾಳು ಮಾಡಿಕೊಂಡಿದ್ದಾರೆ.

college students arrested over fights for girlfriend
ಹುಡುಗಿ ವಿಚಾರಕ್ಕೆ ಚಾಕು ಇರಿತ

ಬುಧವಾರ ಸಂಜೆ ಬ್ಯಾಡರಹಳ್ಳಿಯಿಂದ ಬಿಕಾಂ ವಿದ್ಯಾರ್ಥಿ ಬಸ್​​ನಲ್ಲಿ ಬರುತ್ತಿದ್ದ. ಈ ವೇಳೆ ಬೈಕ್​​ನಲ್ಲಿ ಬಂದ ಮತ್ತೋರ್ವ ವಿದ್ಯಾರ್ಥಿ ಹಾಗೂ ಸಹಚರ ಸುಂಕದಕಟ್ಟೆ ಬಳಿ ಬಸ್ ಅಡ್ಡಗಟ್ಟಿ ಚೂರಿ ಇರಿದು ಪರಾರಿಯಾಗಿದ್ದರು.

ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡ ಕಾಮಾಕ್ಷಿಪಾಳ್ಯ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತಾನು ಬ್ಯಾಡರಹಳ್ಳಿಯ ಬಳಿಯ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದೆ. ಅದೇ ಯುವತಿಯನ್ನ ಈತ ಕೂಡ ಲವ್ ಮಾಡುತಿದ್ದ. ನಿನ್ನೆ ನನ್ನ ಹುಡುಗಿಯ ಜೊತೆ ಅವನು ಮಾತನಾಡ್ತಿದ್ದ ಅದನ್ನ ನೋಡಿ ವಾರ್ನಿಂಗ್ ಕೊಟ್ಟಿದ್ದೆ. ಆದರೆ, ತನ್ನ ಹುಡುಗ್ರನ್ನ ಕರೆದುಕೊಂಡು ಬರುತ್ತೇನೆ ಎಂದು ಆವಾಜ್ ಹಾಕಿದ್ದ. ಇದೇ ಕಾರಣಕ್ಕೆ ಬಸ್​ನ ಫಾಲೋ ಮಾಡಿಕೊಂಡು ಅವನಿಗೆ ಚಾಕು ಇರಿದಿದ್ದೆವು ಎಂದು ನಡೆದ ಘಟನೆ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದಾನೆ.

ಸದ್ಯ ಪ್ರಕರಣ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.