ಶಿವಮೊಗ್ಗ : ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 8 ತಿಂಗಳ ಬಳಿಕ ತರಗತಿಗಳ ಪುನರಾರಂಭಕ್ಕೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ಕಾಲೇಜಿನಲ್ಲಿ ಬಿಎ, ಬಿಕಾಂ, ಬಿಬಿಎಂ ಹಾಗೂ ಇತರೆ ಕೋರ್ಸ್ಗಳು ಸೇರಿ ಅಂತಿಮ ವರ್ಷದಲ್ಲಿ ಒಟ್ಟು 760 ವಿದ್ಯಾರ್ಥಿಗಳಿದ್ದಾರೆ. ಒಂದು ಬೆಂಚ್ಗೆ ಇಬ್ಬರು ವಿದ್ಯಾರ್ಥಿಗಳು ಕೂರುವಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಇತ್ತೀಚಿನ ಕೋವಿಡ್ ನಗೆಟಿವ್ ವರದಿ ಮತ್ತು ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿ ತರುವಂತೆ ಸೂಚಿಸಲಾಗಿದೆ. ಈ ಕುರಿತು ಕಾಲೇಜಿನ ಪ್ರಾಂಶುಪಾಲ ಧನಂಜಯ್ ಹಾಗೂ ಉಪನ್ಯಾಸಕ ಪ್ರಸನ್ನ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಲಾಕ್ಡೌನ್ ನಂತರ ನಾಳೆಯಿಂದ ಪದವಿ ತರಗತಿಗಳು ಪ್ರಾರಂಭ-live Update - ಕರ್ನಾಟಕ ಕಾಲೇಜ್ ಆರಂಭ,
22:18 November 16
ಶಿವಮೊಗ್ಗ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಕಲ ಸಿದ್ದತೆ
22:01 November 16
ಕಸದ ತೊಟ್ಟಿಯಂತಾದ ಗುಲ್ಬರ್ಗ ವಿವಿ ವಸತಿ ನಿಲಯ
ಕಲಬುರಗಿ : ನಾಳೆಯಿಂದ ರಾಜ್ಯಾದ್ಯಂತ ಪದವಿ ತರಗತಿಗಳು ಪುನರಾಂಭವಾಗಲಿದ್ದು, ಕಾಲೇಜುಗಳಲ್ಲಿ ಸರ್ಕಾರದ ಮಾರ್ಗಸೂಚಿ ಅನುಸಾರ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಆದರೆ ಜಿಲ್ಲೆಯ ಬಹುತೇಕ ವಸತಿ ನಿಲಯಗಳಲ್ಲಿ ಯಾವುದೇ ಪೂರ್ವ ಸಿದ್ಧತೆಗಳು ಕಂಡುಬಂದಿಲ್ಲ.
ಗುಲ್ಬರ್ಗ ವಿವಿಯ ಕೃಷ್ಣಾ ವಸತಿ ನಿಲಯದ ತುಂಬಾ ಕಸ-ಕಡ್ಡಿ ತುಂಬಿಕೊಂಡಿದ್ದು, ಕಸದ ತೊಟ್ಟಿಯಂತೆ ಕಾಣಿಸುತ್ತಿದೆ. ಲಾಕ್ ಡೌನ್ ಬಳಿಕ ವಿದ್ಯಾರ್ಥಿಗಳಾಗಲಿ, ಸಿಬ್ಬಂದಿಯಾಗಲಿ ಹಾಸ್ಟೆಲ್ ಕಡೆ ಕಾಲಿಟ್ಟಿಲ್ಲ, ಹೀಗಾಗಿ ಈ ಪರಿಸ್ಥಿತಿಯಾಗಿದೆ. ರಾಜ್ಯಾದ್ಯಂತ ಎಲ್ಲಾ ಪದವಿ ಕಾಲೇಜುಗಳಲ್ಲಿ ತರಗತಿ ಆರಂಭಿಸಲು ಸಿದ್ದತೆ ಮಾಡಿಕೊಳ್ಳಲಾಗಿದ್ದು, ಈಗಾಗಲೇ ತರಗತಿ ಕೊಠಡಿಗಳನ್ನು ಸ್ಯಾನಿಟೈಸ್ ಮಾಡುವ ಕಾರ್ಯ ಮುಗಿದಿದೆ. ಆದರೆ, ಗುಲ್ಬರ್ಗ ವಿವಿಯ ವಸತಿ ನಿಲಯಗಳಲ್ಲಿ ಕಸ ಗುಡಿಸುವವರೇ ಇಲ್ಲದಿರುವಾಗ, ಸ್ಯಾನಿಟೈಸ್ ಮಾಡುವುದು ಕನಸು ಎಂಬಂತಾಗಿದೆ.
ಕಾಲೇಜು ಪುನರಾರಂಭವಾದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ಸಹಕಾರಿಯಾಗುವ ಹಾಸ್ಟೆಲ್ ಕಟ್ಟಡವನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಸ್ ಮಾಡುವ ಮೂಲಕ ಉಳಿದುಕೊಳ್ಳಲು ಅನುವು ಮಾಡಿಕೊಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
20:03 November 16
ವಿದ್ಯಾರ್ಥಿಗಳನ್ನು ಸ್ವಾಗತಿಸಲು ಹೆಬ್ಬಗೋಡಿಯ ಎಸ್ಎಫ್ಎಸ್ ಕಾಲೇಜು ಸಿದ್ದ
ಅನೇಕಲ್ : ನಾಳೆ ಪದವಿ ಕಾಲೇಜುಗಳು ಪುನರಾರಂಭವಾಗುವ ಹಿನ್ನೆಲೆ ಹೆಬ್ಬಗೋಡಿಯ ಎಸ್ಎಫ್ಎಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಸಕಲ ರೀತಿಯಲ್ಲೂ ಸಿದ್ದತೆ ಮಾಡಿಕೊಳ್ಳಲಾಗಿದೆ.
ಸರ್ಕಾರದ ನಿರ್ದೇಶನ ಅನುಸಾರ ಎಲ್ಲಾ ರೀತಿಯ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೇವಲ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗಳನ್ನು ಆರಂಭಿಸಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಇಡೀ ಕಾಲೇಜನ್ನು ಅವರಿಗೋಸ್ಕರ ಮೀಸಲಿಡಲಾಗಿದೆ ಎಂದು ಪ್ರಾಂಶುಪಾಲ ಟೋನಿ ತಿಳಿಸಿದ್ದಾರೆ.
19:27 November 16
ಬಳ್ಳಾರಿಯ ಸರಳಾದೇವಿ ಸತೀಶ್ಚಂದ್ರ ಅಗರವಾಲ ಕಾಲೇಜು ಪುನರಾರಂಭಕ್ಕೆ ಸಿದ್ದತೆ
ಬಳ್ಳಾರಿ : ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ ಪ್ರಥಮ ದರ್ಜೆ ಕಾಲೇಜು ಪುನರಾರಂಭಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಎಲ್ಲಾ ತರಗತಿ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಒಂದು ಬೆಂಚ್ನಲ್ಲಿ ಇಬ್ಬರು ವಿದ್ಯಾರ್ಥಿಗಳು ಕೂರುವ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ, ಡೆಸ್ಕ್ನ ಮೇಲೆ ಸಾಮಾಜಿಕ ಅಂತರ ಕಾಪಾಡಿ ನಂಬರ್ಗಳನ್ನು ಹಾಕಲಾಗಿದೆ.
17:41 November 16
ಕಾಲೇಜು ಪುನರಾರಂಭಕ್ಕೆ ಮೈಸೂರು ವಿವಿಯಿಂದ ಎಸ್‌ಓಪಿ ಪ್ರಕಟ
ಮೈಸೂರು : ಕಾಲೇಜು ಪುನಾರಾರಂಭದ ಹಿನ್ನಲೆ ಮೂರು ಸುತ್ತಿನ ಸಭೆ ನಡೆಸಿ ಪ್ರಾಂಶುಪಾಲರಿಗೆ ಮಾರ್ಗಸೂಚಿಗಳ ಬಗ್ಗೆ ವಿವರಣೆ ನೀಡಿದ್ದೇವೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.
ಕಾಲೇಜು ಆರಂಭ ಕುರಿತಂತೆ ಮೈಸೂರು ವಿವಿಯಿಂದ ಎಸ್‌ಓಪಿ ಪ್ರಕಟ ಮಾಡಲಾಗಿದೆ. ವಿವಿ ಅಧೀನ ಕಾಲೇಜುಗಳಲ್ಲಿ 1.30 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು 35 ಸಾವಿರಕ್ಕೂ ಅಧಿಕ ಇದ್ದಾರೆ. ಎಲ್ಲರಿಗೂ ಕೊರೊನಾ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಪೋಷಕರಿಂದ ಅನುಮತಿ ಪತ್ರ ತರಬೇಕು. ಆನ್‌ಲೈನ್ ಹಾಗೂ ಆಫ್‌ಲೈನ್ ಎರಡೂ ವ್ಯವಸ್ಥೆಗಳಿವೆ, ಆಯ್ಕೆ ವಿದ್ಯಾರ್ಥಿಗಳಿಗೆ ಬಿಟ್ಟಿದ್ದು. ಕಾಲೇಜಿನಲ್ಲಿ ತರಗತಿ ಮಾತ್ರ ನಡೆಯಲಿವೆ, ಕ್ಯಾಂಟಿನ್ ಮತ್ತು ಲೈಬ್ರರಿ ತೆರೆದಿರುವುದಿಲ್ಲ ಎಂದು ಕುಲಪತಿ ಪ್ರೊ. ಹೇಮಂತ್ ಕುಮಾರ್ ತಿಳಿಸಿದರು.
ಕಾಲೇಜಿಗೆ ಆಗಮಿಸಲು, ಕೋವಿಡ್ ಪರೀಕ್ಷೆಗೂ ವಿದ್ಯಾರ್ಥಿಗಳ ನಿರಾಸಕ್ತಿ :
ನಾಳೆಯಿಂದ ಕಾಲೇಜು ಪುನಾರಂಭವಾಗಲಿದ್ದು, ತರಗತಿಗೆ ಬರಲು ವಿದ್ಯಾರ್ಥಿಗಳಲ್ಲಿ ನಿರಾಸಕ್ತಿ ಕಂಡುಬರುತ್ತಿದೆ. ಸುದೀರ್ಘ ರಜೆಯ ಗುಂಗಿನಿಂದ ಹೊರಬಾರದ ವಿದ್ಯಾರ್ಥಿಗಳು ಕೋವಿಡ್ ಪರೀಕ್ಷೆಗೂ ನಿರಾಸಕ್ತಿ ತೋರಿಸುತ್ತಿದ್ದಾರೆ. ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ವ್ಯಾಪ್ತಿಯ ಕಾಲೇಜುಗಳ ಪುನಾರಂಭಕ್ಕೆ ಎಸ್‌ಒಪಿ ಸಿದ್ಧಪಡಿಸಿರುವ ವಿವಿ, ಅದರನ್ವಯ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಪ್ರಾಂಶುಪಾಲರಿಗೆ ಸೂಚನೆ ನೀಡಿದೆ.
ಮಹಾರಾಣಿ ಪದವಿ ಕಾಲೇಜಿನಲ್ಲಿ ಸಿದ್ದತೆ :
ಮಹಾರಾಣಿ ಕಾಲೇಜಿನಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿಯಿಂದ ಕೊಠಡಿ, ಆವರಣ, ಕಚೇರಿ ಸೇರಿದಂತೆ ಇಡೀ ಕಾಲೇಜು ಸ್ಯಾನಿಟೈಸ್ ಮಾಡಲಾಗಿದೆ. ಸರ್ಕಾರದ ಮಾರ್ಗಸೂಚಿಯನ್ವಯ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾಲೇಜನಲ್ಲಿ ಅಂತಿಮ ಪದವಿಯ 600 ವಿದ್ಯಾರ್ಥಿಗಳು, ಸ್ನಾತಕೋತ್ತರ ಅಂತಿಮ ತರಗತಿಯ 250 ವಿದ್ಯಾರ್ಥಿಗಳು ಇದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಪಾಸ್, ಹಾಸ್ಟೆಲ್ ಸೌಲಭ್ಯಗಳ ಗೊಂದಲ ನಿವಾರಣೆ ಮಾಡಲಾಗುತ್ತಿದೆ. ಹೊಸ ಪಾಸ್ ಬರುವವರೆಗೆ ಈಗ ಇರುವ ಬಸ್ ಪಾಸ್‌ಗಳನ್ನೇ ಮುಂದುವರಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.
15:43 November 16
ತರಗತಿ ಅರಂಭಿಸುವುದರ ಬಗ್ಗೆ ಸಿಎಂಗೆ ಡಾ.ಅಶ್ವತ್ಥನಾರಾಯಣ ಮಾಹಿತಿ
ಬೆಂಗಳೂರು: ನಾಳೆಯಿಂದ ಪದವಿ ತರಗತಿಗಳು ಆರಂಭಗೊಳ್ಳುತ್ತಿದ್ದು, ತರಗತಿಗಳನ್ನು ನಡೆಸಲು ಕೈಗೊಂಡಿರುವ ಸುರಕ್ಷತಾ ಕ್ರಮಗಳ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಭೇಟಿ ನೀಡಿದರು. ದೀಪಾವಳಿ ಹಬ್ಬದ ಶುಭ ಕೋರಿ ನಾಳೆಯಿಂದ ಪದವಿ, ಡಿಪ್ಲೊಮಾ, ಇಂಜಿನಿಯರಿಂಗ್ ತರಗತಿಗಳ ಆರಂಭಕ್ಕೆ ಕೊರೊನಾ ಮಾರ್ಗಸೂಚಿಯನ್ವಯ ಕೈಗೊಂಡಿರುವ ಕ್ರಮಗಳ ಕುರಿತು ವಿವರ ನೀಡಿದ್ದಾರೆ.
15:06 November 16
ಮಂಗಳೂರಿನ ದಯಾನಂದ ಪೈ-ಸತೀಶ್ ಪೈ ಕಾಲೇಜಿನಲ್ಲಿ ತರಗತಿ ಆರಂಭಿಸಲು ಸಕಲ ಸಿದ್ದತೆ
ಮಂಗಳೂರು : ನಗರದ ರಥಬೀದಿಯ ದಯಾನಂದ ಪೈ-ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತರಗತಿ ಆರಂಭಿಸಲು ಪೂರ್ವ ತಯಾರಿ ನಡೆಯುತ್ತಿದೆ. ಈಗಾಗಲೇ ಕಾಲೇಜು ಪೂರ್ತಿ ಸ್ಯಾನಿಟೈಸ್ ಮಾಡಲಾಗಿದ್ದು, ಎಲ್ಲ ವಿದ್ಯಾರ್ಥಿಗಳಿಗೂ ಕಾಲೇಜಿನಲ್ಲಿಯೇ ಕೋವಿಡ್ ತಪಾಸಣೆ ನಡೆಸಲಾಗುತ್ತಿದೆ. ಒಂದು ಬೆಂಚ್ - ಡೆಸ್ಕ್ ನಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಕೂರಿಸಿ ತರಗತಿ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ಕಾಲೇಜು ಮುಖ್ಯ ದ್ವಾರದಲ್ಲಿಯೇ ಸ್ಯಾನಿಟೈಸರ್ ಇಡಲಾಗಿದ್ದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಭೌತಿಕ ತರಗತಿಗಳಿಗೆ ಹಾಜರಾಗಲು ಅನಾನುಕೂಲ ಇರುವವರಿಗೆ ಆನ್‌ಲೈನ್ ತರಗತಿಯನ್ನೇ ಮುಂದುವರಿಸಲಾಗುತ್ತದೆ.
ಈ ಕುರಿತು ಕಾಲೇಜಿನ ಪ್ರಾಂಶುಪಾಲ ಡಾ.ರಾಜಶೇಖರ ಹೆಬ್ಬಾರ್ ಮಾತನಾಡಿ, ನಾಳೆಯಿಂದ ಅಂತಿಮ ವರ್ಷದ ಸ್ನಾತಕೋತ್ತರ ಪದವಿ ತರಗತಿಗಳು ಆರಂಭಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಸ್ಒಪಿ ನಿಯಮಗಳನ್ನು ಜಾರಿಗೊಳಿಸಿದ್ದು, ಇಡೀ ಕ್ಯಾಂಪಸ್ನ್ನು ಸ್ಯಾನಿಟೈಸೇಷನ್ ಮಾಡಲಾಗಿದೆ. ಅಲ್ಲದೆ ಈಗಾಗಲೇ ಕಾಲೇಜಿನ 72 ಮಂದಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಕೋವಿಡ್ ತಪಾಸಣೆ ನಡೆಸಲಾಗಿದೆ. ವಿದ್ಯಾರ್ಥಿಗಳ ಕೋವಿಡ್ ತಪಾಸಣೆಯನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
14:16 November 16
ಕಾಲೇಜು ಆರಂಭಕ್ಕೆ ಸಿದ್ಧತೆ
ಬಳ್ಳಾರಿ: ಅನ್ ಲಾಕ್ ಡೌನ್ ಜಾರಿಗೊಂಡ ನಂತರ ಇಡೀ ರಾಜ್ಯವ್ಯಾಪಿ ಪದವಿ ಕಾಲೇಜುಗಳ ಆರಂಭವಾಗೋದರ ಹಿನ್ನೆಲೆಯಲ್ಲಿ ಗಣಿ ಜಿಲ್ಲೆಯಲ್ಲಿ ಕಾಲೇಜುಗಳ ಆರಂಭಕ್ಕೆ ತಯಾರಿ ನಡೆದಿದೆ.
14:09 November 16
ಪದವಿ ತರಗತಿಗಳು ಪ್ರಾರಂಭ ಹಿನ್ನಲೆ: ಕೊಡಗಿನಲ್ಲಿ ಕಾಲೇಜು ಸಿಬ್ಬಂದಿಗೆ ಆರೋಗ್ಯ ತಪಾಸಣೆ..!
ಕೊಡಗು: ನಾಳೆಯಿಂದ ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳು ಪ್ರಾರಂಭವಾಗುತ್ತಿರುವುದರಿಂದ ಮಡಿಕೇರಿಯ ಎಫ್ಎಂಸಿ ಕಾಲೇಜಿನಲ್ಲಿ ಉಪನ್ಯಾಸಕರಿಗೆ ಕೊರೊನಾ ತಪಾಸಣೆ ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಸಿಬ್ಬಂದಿ ಕಾಲೇಜಿನ ಎಲ್ಲಾ ಸಿಬ್ಬಂದಿಗಳಿಗೆ ಆ್ಯಂಟಿಜೆನ್ ಟೆಸ್ಟ್ ಮಾಡುತ್ತಿದ್ದಾರೆ. ಕೊರೊನಾ ಪರಿಣಾಮ ಪೋಷಕರು ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಹಿಂದೇಟು ಹಾಕುತ್ತಿರುವ ಹಿನ್ನೆಲೆ ಕಾಲೇಜು ಆಡಳಿತ ಮಂಡಳಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ.
14:08 November 16
ಕಲಬುರಗಿಯಲ್ಲಿ ಕಾಲೇಜ್ಗಳು ಪುನಾರಂಭಕ್ಕೆ ಕ್ಷಣಗಣನೆ
ಕಲಬುರಗಿ: ಕಾಲೇಜುಗಳ ಪುನಾರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಕ್ಲಾಸ್ ಆರಂಭಿಸಲು ಕಲಬುರಗಿ ಜಿಲ್ಲೆಯಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಪದವಿಯ ಅಂತಿಮ ವರ್ಷದ ತರಗತಿಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಕ್ಲಾಸ್ ರೂಮ್ಗಳ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತಿದೆ.
14:07 November 16
ಧಾರವಾಡದಲ್ಲಿ ಕಾಲೇಜ್ ಆರಂಭಕ್ಕೆ ಭರದಿಂದ ಸಾಗಿದ ಸಿದ್ಧತೆ
ಧಾರವಾಡ: ಕೊರೊನಾ ಹಾವಳಿಯಿಂದ ಬಂದ್ ಆಗಿದ್ದ ಪದವಿ ಕಾಲೇಜುಗಳು ನಾಳೆಯಿಂದ ಆರಂಭ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಧಾರವಾಡದ ಬಹುತೇಕ ಕಾಲೇಜುಗಳಲ್ಲಿ ಸಿದ್ದತಾ ಕಾರ್ಯ ನಡೆಯುತ್ತಿದೆ.
14:02 November 16
ಕಾಲೇಜು ಆರಂಭಕ್ಕೆ ಸರ್ಕಾರ ಹಸಿರು ನಿಶಾನೆ... ಚಿತ್ರದುರ್ಗದಲ್ಲಿ ಕಾಲೇಜು ಆರಂಭಕ್ಕೆ ಸಿದ್ಧತೆ
ಚಿತ್ರದುರ್ಗ: ಇದೀಗ ರಾಜ್ಯದಲ್ಲಿ ಕೊರೊನಾ ಕಡಿಮೆಯಾಗುತ್ತಿರುವ ಬೆನ್ನಲ್ಲೇ ರಾಜ್ಯಾದ್ಯಂತ ಕಾಲೇಜುಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಚಿತ್ರದುರ್ಗ ನಗರದಲ್ಲಿರುವ ಕಲಾ ಪದವಿ ಪೂರ್ವ ಕಾಲೇಜ್ ಆರಂಭಿಸಲು ಸಿಬ್ಬಂದಿ ಸಿದ್ದತೆ ನಡೆಸಿದ್ದಾರೆ.
13:58 November 16
ನಾಳೆ ತುಮಕೂರಿನಲ್ಲಿ ಕಾಲೇಜ್ ಆರಂಭಿಸಲು ಸೂಚನೆ ನೀಡಲಾಗಿದೆ: ಉಪಕುಲಪತಿ ಸಿದ್ದೇಗೌಡ
ತುಮಕೂರು: ನವೆಂಬರ್ 17ರಿಂದ ತುಮಕೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವಂತಹ ಪದವಿ ಸ್ನಾತಕೋತ್ತರ ಪದವಿ ಡಿಪ್ಲೊಮಾ ಕಾಲೇಜುಗಳು ಪ್ರಾರಂಭಿಸಲು ಈಗಾಗಲೇ ಎಲ್ಲಾ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ ಎಂದು ತುಮಕೂರು ವಿಶ್ವವಿದ್ಯಾಲಯ ಉಪಕುಲಪತಿ ಸಿದ್ದೇಗೌಡ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಪೋಷಕರು ಹಾಗೂ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳು ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗುವುದು ಅಗತ್ಯವಿಲ್ಲ. ಸರ್ಕಾರದ ಸೂಚನೆಯಂತೆ ಪಾಠ ಪ್ರವಚನಗಳು ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
13:53 November 16
ಕೋವಿಡ್ ಟೆಸ್ಟ್ ಮಾಡಿಸಲು ಸಾಲುಗಟ್ಟಿ ನಿಂತ ವಿದ್ಯಾರ್ಥಿಗಳು
ಕೋಲಾರ: ನಾಳೆಯಿಂದ ಪದವಿ ಹಾಗೂ ಸ್ನಾತಕೋತ್ತರ ತರಗತಿಗಳು ಆರಂಭವಾಗುತ್ತಿರುವ ಹಿನ್ನೆಲೆ ಕೋವಿಡ್ ಟೆಸ್ಟ್ ಮಾಡಿಸಲು ವಿದ್ಯಾರ್ಥಿಗಳು ಜಿಲ್ಲಾಸ್ಪತ್ರೆ ಬಳಿ ಸಾಲುಗಟ್ಟಿ ನಿಂತಿರುವುದು ಕಂಡು ಬಂತು. ಅಂತಿಮ ವಿದ್ಯಾರ್ಥಿಗಳಿಗೆ ಕಾಲೇಜುಗಳು ಪ್ರಾರಂಭವಾಗುತ್ತಿರುವ ಹಿನ್ನಲೆ ಕಾಲೇಜಿಗೆ ಆಗಮಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಲು ಸರ್ಕಾರ ಸೂಚನೆ ನೀಡಿದೆ. ಹೀಗಾಗಿ ಬೆಳ್ಳಂ ಬೆಳಗ್ಗೆ ಜಿಲ್ಲಾಸ್ಪತ್ರೆಯ ಕೋವಿಡ್ ಕೇಂದ್ರದ ಬಳಿ, ಟೆಸ್ಟ್ ಮಾಡಿಸಿಕೊಳ್ಳುವ ಸಲುವಾಗಿ ವಿದ್ಯಾರ್ಥಿಗಳು ಸಾಲುಗಟ್ಟಿ ನಿಂತಿರುವುದು ಕಂಡು ಬಂತು.
13:50 November 16
ಬೆಂಗಳೂರಿನಲ್ಲಿ ನಾಳೆಯಿಂದ ಕಾಲೇಜ್ ಆರಂಭ
ಬೆಂಗಳೂರು : ಕೊರೊನಾ ಭೀತಿ ನಡುವೆ ರಾಜ್ಯದಲ್ಲಿ ನಾಳೆಯಿಂದ ಕಾಲೇಜು ಶುರುವಾಗುತ್ತಿದೆ. ನಾಳೆಯಿಂದ ಪಿಜಿ, ಯುಜಿ, ಡಿಪ್ಲೊಮಾ ತರಗತಿಗಳು ಆರಂಭವಾಗುತ್ತಿರುವ ಹಿನ್ನೆಲೆ ಕಾಲೇಜುಗಳ ಓಪನ್ಗೆ ಸಕಲ ಸಿದ್ದತೆ ನಡೆದಿದೆ.
12:48 November 16
ನಾಳೆಯಿಂದ ಕಾಲೇಜುಗಳು ಆರಂಭ
ದೊಡ್ಡಬಳ್ಳಾಪುರ: ಲಾಕ್ ಡೌನ್ ತೆರವಾದ ನಂತರ ನವೆಂಬರ್ 17 ರಿಂದ ಅಂತಿಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿಯ ತರಗತಿಗಳು ಪ್ರಾರಂಭವಾಗುತ್ತಿವೆ. ಕಾಲೇಜು ಶಿಕ್ಷಣ ಇಲಾಖೆ ನೀಡಿರುವ ಮಾರ್ಗದರ್ಶಿ ಸೂಚನೆಯಂತೆ ಪದವಿ ಕಾಲೇಜುಗಳು ಸಿದ್ದತೆ ನಡೆಸಿದ್ದಾರೆ. ನಾಳೆ 10 ಗಂಟೆಯಿಂದ ತರಗತಿಗಳು ಪ್ರಾರಂಭವಾಗಲಿದ್ದು. ನಗರಸಭೆಯಿಂದ ತರಗತಿಗಳನ್ನ ಸ್ಯಾನಿಟೈಸ್ ಮಾಡಲಾಗಿದೆ, ಕಾಲೇಜು ಗೇಟ್ನಿಂದಲೇ ಹ್ಯಾಂಡ್ ಸ್ಯಾನಿಟೈಸರ್ ಮಾಡಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ಒಂದು ತರಗತಿಗೆ 30 ವಿದ್ಯಾರ್ಥಿಗಳಿಗೆ ಸೀಮಿತಗೊಳಿಸಲಾಗಿದೆ. ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ ಮಾಡಲಾಗಿದೆ.