ETV Bharat / state

ತಬ್ಲಿಘಿ ಜಮಾತ್‌ನಲ್ಲಿ ಭಾಗಿಯಾದವರ ಮಾಹಿತಿ ಸಂಗ್ರಹಿಸಲಾಗ್ತಿದೆ, ಯಾರೂ ಆತಂಕಪಡ್ಬೇಕಿಲ್ಲ: ಸಿಎಂ - Collecting information on participants in Tablighi Jamaat

ದೆಹಲಿಯ ನಿಜಾಮುದ್ದೀನ್‌ನಲ್ಲಿ ತಬ್ಲಿಘಿ ಜಮಾತ್ ಧರ್ಮಸಭೆ ಭಾಗವಹಿಸಲು ಕರ್ನಾಟಕದಿಂದ 1,300ಕ್ಕೂ ಹೆಚ್ಚು ಜನರು ತೆರಳಿದ್ದು, ಅವರೆಲ್ಲರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.

CM BSY
ಸಿಎಂ ಬಿಎಸ್ವೈ
author img

By

Published : Apr 8, 2020, 5:21 PM IST

ಬೆಂಗಳೂರು: ದೆಹಲಿಯ ನಿಜಾಮುದ್ದೀನ್‌ನ ತಬ್ಲಿಘಿ ಜಮಾತ್‌ನ ಧರ್ಮಸಭೆಯಲ್ಲಿ ಭಾಗವಹಿಸಿದವರನ್ನು ಗುರುತಿಸಿ ಕ್ವಾರಂಟೈನ್ ನಲ್ಲಿರಿಸಲಾಗಿದೆ. ಇತರ ರಾಜ್ಯಗಳಿಗೆ ತೆರಳಿದವರ ಕುರಿತೂ ಸಹ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.

ದೆಹಲಿಯ ನಿಜಾಮುದ್ದೀನ್‌ನಲ್ಲಿ ತಬ್ಲಿಘಿ ಜಮಾತ್‌ನ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಲು ಕರ್ನಾಟಕದಿಂದ 1,300ಕ್ಕೂ ಹೆಚ್ಚು ಜನರು ತೆರಳಿದ್ದರು. ಅವರೆಲ್ಲರ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಅವರಲ್ಲಿ ಬೆಂಗಳೂರಿನಲ್ಲಿ 276 ಹಾಗೂ ಇತರ ಜಿಲ್ಲೆಗಳಲ್ಲಿ 482 ಕಾರ್ಯಕರ್ತರನ್ನು ಗುರುತಿಸಿ, ಕ್ವಾರಂಟೈನ್ ನಲ್ಲಿರಿಸಲಾಗಿದೆ. ಇತರ ರಾಜ್ಯಗಳಿಗೆ ತೆರಳಿದವರ ಕುರಿತೂ ಸಹ ಮಾಹಿತಿ ಸಂಗ್ರಹಿಸಿ, ಆಯಾ ರಾಜ್ಯಗಳಿಗೆ ಮಾಹಿತಿ ನೀಡಲಾಗಿದೆ ಎಂದು ಸಿಎಂ ಟ್ವಿಟ್ಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಭಾರತೀಯರನ್ನು ಹೊರತುಪಡಿಸಿ ಬೇರೆ ಬೇರೆ ರಾಷ್ಟ್ರೀಯತೆಯ 57 ತಬ್ಲಿಘಿ ಜಮಾತ್ ಕಾರ್ಯಕರ್ತರನ್ನು ಕರ್ನಾಟಕದ ಬೀದರ್ (8), ಬೆಳಗಾವಿ (10), ತುಮಕೂರು (8) ಹಾಗೂ ಬೆಂಗಳೂರು (31) ಜಿಲ್ಲೆಗಳಲ್ಲಿ ಗುರುತಿಸಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಭಾರತಕ್ಕೆ ಬರಲು ನೀಡುವ ವೀಸಾ ಪ್ರಕ್ರಿಯೆಯಲ್ಲಿ ಇವರನ್ನು ಕಪ್ಪುಪಟ್ಟಿಗೆ ಸೇರಿಸುವ ಸೂಚನೆಯೊಂದಿಗೆ 57 ಎಫ್ಐಆರ್ ಗಳನ್ನು ದಾಖಲಿಸಲಾಗಿದೆ.

ಅವರ ಪೈಕಿ 20 ಇಂಡೋನೇಷ್ಯಾ, 1 ಯುನೈಟೆಡ್ ಕಿಂಗ್ ಡಮ್, 4 ದಕ್ಷಿಣ ಆಫ್ರಿಕಾ, 3 ಗ್ಯಾಂಬಿಯಾ, 19 ಕಿರ್ಗಿಸ್ತಾನ್, 1 ಯುಎಸ್ ಎ, 1 ಫ್ರಾನ್ಸ್, 1 ಕೀನ್ಯಾ ಮತ್ತು ಏಳು ಮಂದಿ ಬಾಂಗ್ಲಾದೇಶದವರು. ನಿರ್ಣಾಯಕ ಅವಧಿಯಲ್ಲಿ ಹಾಟ್ ಸ್ಪಾಟ್ ನ ಸಮೀಪದಲ್ಲಿದ್ದ 276 ತಬ್ಲೀಘಿ ಜಮಾತ್ ಕಾರ್ಯಕರ್ತರನ್ನು ಬೆಂಗಳೂರಿನಲ್ಲಿ ಗುರುತಿಸಲಾಗಿದ್ದು, ಕ್ವಾರಂಟೈನ್ ನಲ್ಲಿರಿಸಲಾಗಿದೆ.

ಇದೇ ರೀತಿಯ ಹಿನ್ನೆಲೆ ಹೊಂದಿರುವ 482 ತಬ್ಲೀಘ್ ಜಮಾತ್ ಕಾರ್ಯಕರ್ತರನ್ನು ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಗುರುತಿಸಲಾಗಿದೆ. ಆದ್ದರಿಂದ ಕರ್ನಾಟಕದಲ್ಲಿ 808 ತಬ್ಲೀಘ್ ಜಮಾತ್ ಕಾರ್ಯಕರ್ತರನ್ನು ಕರ್ನಾಟಕದಲ್ಲಿ ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿರಿಸಿ ಪರೀಕ್ಷಿಸಲಾಗಿದೆ. ಇತರ ರಾಜ್ಯಗಳಲ್ಲಿ ಪ್ರವಾಸ ಮಾಡುತ್ತಿರುವ ತಬ್ಲೀಘಿ ಜಮಾತ್ ಗೆ ಸೇರಿದ 581 ಕಾರ್ಯಕರ್ತರ ಹೆಸರುಗಳಿವೆ. ನಾವು ಸಂಬಂಧಪಟ್ಟ ಎಲ್ಲ ರಾಜ್ಯಗಳಿಗೂ ಮಾಹಿತಿ ರವಾನಿಸಿದ್ದೇವೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.