ETV Bharat / state

ನಾಯಕತ್ವ ಬದಲಾವಣೆ ಇಲ್ಲವೇ ಇಲ್ಲ.. ಪೂರ್ಣಾವಧಿಗೆ ನಾನೇ ಸಿಎಂ: ಬಿಎಸ್​ವೈ...!

ಈಗಾಗಲೇ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಕೂಡ ಸ್ಪಷ್ಟ ಪಡಿಸಿದ್ದಾರೆ. ಹೀಗಾಗಿ ಮುಂದಿನ ಎರಡೂವರೆ ವರ್ಷ ನಾನೇ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತೇನೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸಿಎಂ ಬಿಎಸ್​ವೈ ತಿಳಿಸಿದ್ದಾರೆ.

CM Yediyurappa
ಸಿಎಂ ಬಿಎಸ್​ವೈ
author img

By

Published : Dec 31, 2020, 1:53 PM IST

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಯಡಿಯೂರಪ್ಪ ಅವರೇ ಎರಡೂವರೆ ವರ್ಷ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದಿದ್ದಾರೆ. ಹಾಗಾಗಿ ನಾಯಕತ್ವ ಬದಲಾವಣೆ ವಿಷಯದ ಚರ್ಚೆ ಅಪ್ರಸ್ತುತ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ನಾಯಕತ್ವ ಬದಲಾವಣೆ ಇಲ್ಲ, ಇದರಲ್ಲಿ ಗೊಂದಲವೂ ಇಲ್ಲ, ಪೂರ್ಣಾವಧಿಗೆ ನಾನೇ ಸಿಎಂ: ಬಿಎಸ್​ವೈ...!

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷದ‌ ನನ್ನ ಆಡಳಿತದಲ್ಲಿ ನಾಯಕತ್ವ ಬದಲಾವಣೆ ವಿಷಯದ ಕುರಿತು ಬರುತ್ತಿರುವ ಹೇಳಿಕೆಗಳ ಬಗ್ಗೆ ನಾನು ಯಾವುದೇ ತಲೆಕೆಡಿಸಿಕೊಂಡಿಲ್ಲ. ನಾನಾಯ್ತು, ನನ್ನ ಕೆಲಸ ಆಯ್ತು ಅಂತಾ ರಾಜ್ಯದ ಅಭಿವೃದ್ಧಿ ಬಗ್ಗೆ ಗಮನ ಕೊಟ್ಟಿದ್ದೇನೆ. ಈಗಾಗಲೇ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಕೂಡ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಮುಂದಿನ ಎರಡೂವರೆ ವರ್ಷ ನಾನೇ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತೇನೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಶಾಸಕರು, ಸಚಿವರು ಅಥವಾ ಯಾರೂ ಮಾತಾಡುತ್ತಿಲ್ಲ. ಗೊಂದಲ ಇರೋದು ಈ ಬಗ್ಗೆ ಮಾಧ್ಯಮಗಳಿಗೆ ಮಾತ್ರ ಎಂದರು.

ಇದನ್ನು ಓದಿ: ಚುನಾವಣೆಗಳಲ್ಲಿ ಉತ್ತಮ‌ ಸಾಧನೆಗೆ ಮೋದಿ ನಾಯಕತ್ವ ಕಾರಣ: ಸಿಎಂ ಯಡಿಯೂರಪ್ಪ

ನಾಯಕತ್ವ ಬದಲಾವಣೆ, ಅನುದಾನ ಸಿಕ್ಕಿಲ್ಲ ಈ ರೀತಿ ಒಂದಿಬ್ಬರು ಹೇಳಿಕೆ ನೀಡಿರಬಹುದು. ಹಾಗಾಗಿ ವಿಭಾಗವಾರು ಶಾಸಕರ ಸಭೆ ಕರೆದಿದ್ದೇನೆ. ಅವರ ಸಮಸ್ಯೆ ಪರಿಹರಿಸುತ್ತೇನೆ. ಕೊರೊನಾ ಕಾರಣದಿಂದ ಹಣಕಾಸು ಸಮಸ್ಯೆ ಆಗಿದೆ. ಸಾಲ ಪಡೆಯಲು ಕೇಂದ್ರ ಅನುಮತಿ ನೀಡಿದ್ದರೂ ಕೂಡ 30 ಸಾವಿರ ಕೋಟಿ ನಮಗೆ ಹಿನ್ನಡೆ ಆಗಲಿದೆ, ಮುಂದಿನ ಬಜೆಟ್​ನಲ್ಲೂ ಇದು ತೊಡಕಾಗಲಿದೆ. ಆದರೂ ಹಿನ್ನಡೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.