ETV Bharat / state

ದೆಹಲಿಗೆ ತೆರಳುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ: ಸಿಎಂ ಯಡಿಯೂರಪ್ಪ - CM Yeddyurappa news

ಅತಿವೃಷ್ಟಿ ಪ್ರದೇಶಕ್ಕೆ ಮೂರು ತಂಡಗಳಲ್ಲಿ ಪ್ರವಾಸ ಮಾಡಲಾಗುತ್ತದೆ. ದೆಹಲಿಯಿಂದ ಬಂದಿರುವ ತಂಡ ಪ್ರವಾಸ ಮಾಡುತ್ತಿದೆ. ಅವರ ಜೊತೆ ನಮ್ಮ ಅಧಿಕಾರಿಗಳು ಇದ್ದಾರೆ. ಕಳೆದ ವರ್ಷ ಏನಾಗಿತ್ತು ಅದರ ಮಾಹಿತಿ ಕೊಟ್ಟಿದ್ದೇವೆ. ಕೇಂದ್ರದ ತಂಡ ಏನು‌ ವರದಿ ಸಲ್ಲಿಸುತ್ತೆ ನೋಡೋಣ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

CM Yeddyurappa has yet to decide on his move to Delhi
ಸಿಎಂ ಯಡಿಯೂರಪ್ಪ
author img

By

Published : Sep 8, 2020, 12:21 PM IST

ಬೆಂಗಳೂರು: ದೆಹಲಿಗೆ ತೆರಳುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಮಳೆ ಅನಾಹುತದ ಬಗ್ಗೆ ಕೇಂದ್ರದ ಜೊತೆ ಮಾತನಾಡುತ್ತೇನೆ. ದೆಹಲಿಗೆ ಹೋಗುವ ದಿನಾಂಕ ಫಿಕ್ಸ್ ಆಗಿಲ್ಲ. ನಿನ್ನೆ ಸಚಿವರ ಜೊತೆ ಸಭೆ ಮಾಡಿದ್ದೇನೆ. ಅಧಿವೇಶನದ ಸಂಬಂಧ ಚರ್ಚೆ ಮಾಡಿದ್ದೇನೆ ಎಂದರು.

ನಾವು ದೆಹಲಿಗೆ ತೆರಳಿ ವಾಸ್ತವಾಂಶ ತಿಳಿಸುತ್ತೇವೆ. ಸದನದಲ್ಲಿ ವಾಸ್ತವಾಂಶ ಜನರ ಮುಂದಿಡುತ್ತೇವೆ. ಅತಿವೃಷ್ಟಿ ಪ್ರದೇಶಕ್ಕೆ ಮೂರು ತಂಡಗಳಲ್ಲಿ ಪ್ರವಾಸ ಮಾಡಲಾಗುತ್ತದೆ. ದೆಹಲಿಯಿಂದ ಬಂದಿರುವ ತಂಡ ಪ್ರವಾಸ ಮಾಡುತ್ತಿದೆ. ಅವರ ಜೊತೆ ನಮ್ಮ ಅಧಿಕಾರಿಗಳು ಇದ್ದಾರೆ. ಕಳೆದ ವರ್ಷ ಏನಾಗಿತ್ತು ಅದರ ಮಾಹಿತಿ ಕೊಟ್ಟಿದ್ದೇವೆ. ಕೇಂದ್ರದ ತಂಡ ಏನು‌ ವರದಿ ಸಲ್ಲಿಸುತ್ತೆ ನೋಡೋಣ ಎಂದು ಹೇಳಿದರು.

ಡ್ರಗ್ಸ್ ಮಾಫಿಯಾ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ: ಡ್ರಗ್ಸ್​​ ವಿಚಾರದಲ್ಲಿ ಪ್ರಭಾವಿಗಳ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ರಾಜ್ಯ ಸರ್ಕಾರ ಡ್ರಗ್ಸ್​​ ಮಾಫಿಯಾಗೆ ಕಡಿವಾಣ ಹಾಕುವ ವಿಚಾರದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತದೆ. ನಮ್ಮ ಶಕ್ತಿ ಮೀರಿ‌ ಕ್ರಮ ತೆಗೆದುಕೊಳ್ಳಲು ನಾವು ಬದ್ಧವಾಗಿದ್ದೇವೆ. ಯಾವುದೇ ಒತ್ತಡಕ್ಕೂ ನಮ್ಮ ಸರ್ಕಾರ ಮಣಿಯಲ್ಲ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.