ಬೆಂಗಳೂರು: ಮಕ್ಕಳಿಗೆ ಸರಿಯಾದ ಸಮಯಕ್ಕೆ ರೋಟಾ ವೈರಸ್ ಲಸಿಕೆ ನೀಡುವ ಮೂಲಕ ಶಿಶು ಮರಣ ಕಡಿಮೆ ಮಾಡುವ, ರೋಗದಿಂದ ಮುಕ್ತಿಗೊಳಿಸುವ ಕೆಲಸ ಮಾಡೋಣವೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದ್ದಾರೆ.
ಮಕ್ಕಳಿಗೆ ಹಾಕುವ ರೋಟಾ ವೈರಸ್ ಲಸಿಕೆ ಕಾರ್ಯಕ್ರಮಕ್ಕೆ ಗೃಹ ಕಚೇರಿ ಕೃಷ್ಣದಲ್ಲಿ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ರೋಟಾ ವೈರಸ್ ಲಸಿಕೆ ಕಾರ್ಯಕ್ರಮಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದ್ರು.
ನಂತರ ಮಾತನಾಡಿದ ಸಿಎಂ, ಆರೋಗ್ಯ ಇಲಾಖೆಯಿಂದ ಕರ್ನಾಟಕದಲ್ಲಿ ರೋಟಾ ವೈರಸ್ ಲಸಿಕೆ ಪರಿಚಯಿಸಲಾಗಿದೆ. ಮಕ್ಕಳ ಅತಿಸಾರ ಬೇಧಿಯನ್ನು ನಿಯಂತ್ರಿಸಿಲು ರೋಟಾ ವೈರಸ್ ಸಹಕಾರಿಯಾಗಿದೆ. ರೋಟಾ ವೈರಸ್ ಲಸಿಕೆಯನ್ನ 6,10,14 ವಯಸ್ಸಿನ ಮಕ್ಕಳಿಗೆ ನೀಡಲಾಗುತ್ತಿದ್ದು, ಎಲ್ಲರೂ ತಪ್ಪದೇ ಶಿಶುಗಳಿಗ ಲಸಿಕೆ ಹಾಕಿಸಿ ಎಂದರು.
ಅತಿಸಾರ ಬೇಧಿಯಿಂದ ಮರಣ ಸಂಭವಿಸುವ ಸಾಧ್ಯತೆ ಇರುತ್ತದೆ. ಆದ ಕಾರಣ ಇದರ ನಿಯಂತ್ರಣಕ್ಕೆ ಲಸಿಕೆ ಅಗತ್ಯವಿದೆ. ನಮ್ಮ ದೇಶದಲ್ಲಿ ನವಜಾತ ಶಿಶುಗಳ ಮರಣದಲ್ಲಿ ಶೇ.10 ಶಿಶುಗಳ ಸಾವಿಗೆ ಅತಿಸಾರ ಬೇಧಿ ಕಾರಣ, ಐದು ವರ್ಷಕ್ಕೂ ಕಡಿಮೆ ಮಕ್ಕಳಲ್ಲಿ ಶೇ. 40 ಕ್ಕೂ ಹೆಚ್ಚು ಮಕ್ಕಳು ಅತಿಸಾರ ಬೇಧಿಯಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. 78 ಸಾವಿರ ಮಕ್ಕಳು ಸಾವನ್ನಪ್ಪುತ್ತಿದ್ದಾರೆ, ಅಪೌಷ್ಠಿಕತೆಯಿಂದಲೂ ಅತಿಸಾರ ಬೇಧಿ ಬರುತ್ತಿದೆ. ಹಾಗಾಗಿ ಅಗತ್ಯ ಮುನ್ನೆಚ್ಚರಿಕೆ ವಹಿಸಿ ಮುಂಜಾಗ್ರತಾ ಕ್ರಮವಾಗಿ ರೋಟಾ ವೈರಸ್ ಲಸಿಕೆ ಹಾಕಿಸಿ ಮಕ್ಕಳನ್ನು ಅತಿಸಾರ ಬೇಧಿಯಿಂದ ಬಳಲುವುದನ್ನು ತಪ್ಪಿಸಿ ಎಂದು ಕರೆ ನೀಡಿದ್ರು.