ETV Bharat / state

ದೆಹಲಿ ಪ್ರವಾಸಕ್ಕೆ ಸಿಎಂ ಬಿಎಸ್​​ವೈ 6 ಬ್ಯಾಗ್ ಕೊಂಡೊಯ್ದಿದ್ದಾರೆ: ಹೆಚ್​ಡಿಕೆ ಹೊಸ ಬಾಂಬ್​ - ಗೃಹ ಸಚಿವ ಅಮಿತ್​ ಶಾ

ದೆಹಲಿ ಪ್ರವಾಸಕ್ಕೆ ಹೋಗಿರುವ ಸಿಎಂ ಜೊತೆಯಲ್ಲಿ 6 ಬ್ಯಾಗ್​ಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನೋ ಮಾಹಿತಿ ಇದೆ. ಆ ಬ್ಯಾಗ್​ಗಲ್ಲಿ ಏನು ಹೈಕಮಾಂಡ್​​ಗೆ ಸಿಎಂ ಯಡಿಯೂರಪ್ಪ ಉಡುಗೊರೆ ತೆಗೆದುಕೊಂಡು ಹೋಗಿದ್ದಾರಾ? ಎಂದು ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

cm yadiyurappa taken  6 bags for   Delhi tour says  hd kumarswamy
ಬಿಎಸ್​​ವೈ ಮತ್ತು ಹೆಚ್​ಡಿಕೆ
author img

By

Published : Jul 17, 2021, 1:49 PM IST

Updated : Jul 17, 2021, 7:50 PM IST

ಬೆಂಗಳೂರು: ಸಿಎಂ ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ದೆಹಲಿ ಪ್ರವಾಸ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಸಿಎಂ ನಿನ್ನೆ ದೆಹಲಿಗೆ ಹೋಗುವಾಗ ಆರು ಬ್ಯಾಗ್​ಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಹೈಕಮಾಂಡ್​​ಗೆ ಕೊಡುವುದಕ್ಕೆ ನಿನ್ನೆ ವಿಶೇಷ ವಿಮಾನದಲ್ಲಿ ಹೋಗುವಾಗ ಬ್ಯಾಗ್​ಗಳನ್ನು ತೆಗೆದುಕೊಂಡು ಹೋಗಿದ್ದಾರೆ ಅನ್ನುವ ಮಾಹಿತಿ ಇದೆ ಎಂದು ಹೆಚ್​ಡಿಕೆ ಹೊಸ ಬಾಂಬ್ ಸಿಡಿಸಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಆಯೋಜಿಸಿರುವ ಜಿಲ್ಲಾವಾರು ಸಭೆಗೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹೆಚ್​ಡಿಕೆ, ಉಡುಗೊರೆ ತೆಗೆದುಕೊಂಡು ಹೋಗಿದ್ದಾರಾ? ಅಥವಾ ಬೇರೆ ಏನು ತೆಗೆದುಕೊಂಡು ಹೋಗಿದ್ದಾರೆ ಎಂಬುದನ್ನು ಅವರೇ ಹೇಳಬೇಕು ಎಂದರು.

ಹೆಚ್​ಡಿಕೆ ಹೊಸ ಬಾಂಬ್​

ಪ್ರಧಾನಿಗಳನ್ನು ಭೇಟಿ ಮಾಡೋಕೆ ಸಿಎಂ ಒಬ್ಬರೇ ಹೋಗಿದ್ರಾ..? ಅಥವಾ ಬ್ಯಾಗ್​ಗಳನ್ನು ತೆಗೆದುಕೊಂಡು ಹೋಗಿ ಭೇಟಿ ಮಾಡಿದ್ರಾ..? ಎಂಬುದನ್ನು ಸಿಎಂ ಸ್ಪಷ್ಟಪಡಿಸಬೇಕು ಎಂದು ಅವರು ಇದೇ ವೇಳೆ ಹೇಳಿದರು.

ಅಕ್ರಮ ಗಣಿಗಾರಿಕೆ ವಿರುದ್ಧ ಯಾರೇ ಹೋರಾಟ ಮಾಡಿದರೂ ಬೆಂಬಲ :

ಸಂಸದೆ ಸುಮಲತಾ ಅಂಬರೀಶ್ ರಾಜ್ಯಪಾಲರ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರ ಬಗ್ಗೆ ನಾನು ಮಾತನಾಡೋದಿಲ್ಲ. ರಾಜ್ಯಾದ್ಯಂತ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅಕ್ರಮ ಗಣಿಗಾರಿಕೆ ಬಗ್ಗೆ ಈ ಹಿಂದೆ ಹಲವಾರು ಬಾರಿ ಪ್ರಸ್ತಾಪ ಮಾಡಿದ್ದೆ. ಅಕ್ರಮ ಗಣಿಗಾರಿಕೆ ವಿರುದ್ಧ ಯಾರೇ ನಾಯಕರು ಹೋರಾಡಿದರೂ ವೈಯಕ್ತಿಕವಾಗಿ ನಾನು ಹಾಗೂ ನಮ್ಮ ಪಕ್ಷ ಬೆಂಬಲ ನೀಡಲಿದೆ ಎಂದರು.

Last Updated : Jul 17, 2021, 7:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.