ಬೆಂಗಳೂರು : ವಿಕಾಸಸೌಧದಲ್ಲಿ ಸಾರಿಗೆ ಯೂನಿಯನ್ ಮುಖಂಡರ ಸಭೆ ನಂತರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿವಾಸದಲ್ಲಿ ಮಹತ್ವ ಸಭೆ ನಡೆಯುತ್ತಿದೆ.
ಸಿಎಂ ನಿವಾಸ ಕಾವೇರಿಗೆ ಸಾರಿಗೆ ಸಚಿವರೂ ಆದ ಡಿಸಿಎಂ ಲಕ್ಷ್ಮಣ್ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಬಿಎಂಟಿಸಿ ಎಂಡಿ ಶಿಖಾ, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಆಗಮಿಸಿದ್ದು, ಸಿಎಂ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ವಿಕಾಸಸೌಧದಲ್ಲಿ ನೌಕರರ ಮುಖಂಡರ ಜೊತೆ ತಾವು ನಡೆಸಿದ ಸಭೆಯ ಬಗ್ಗೆ ಸಿಎಂಗೆ ಸವದಿ ಮಾಹಿತಿ ನೀಡಿದ್ದಾರೆ.
ಸಾರಿಗೆ ನೌಕರರ ಬೇಡಿಕೆ ಕುರಿತು ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಾಗುತ್ತಿದೆ. ಸಿಎಂ ಯಡಿಯೂರಪ್ಪ ವಿಕಾಸಸೌಧದಲ್ಲಿನ ಸಭೆಯ ನಂತರ ಯಾವ ಹೆಜ್ಜೆ ಇಡಬೇಕು ಎಂದು ಸಿಎಂ ಜೊತೆ ಸಚಿವರು ಅಧಿಕಾರ ಸಮಾಲೋಚನೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಸರ್ಕಾರದ ಸ್ಪಷ್ಟ ನಿರ್ಧಾರ ಹೊರ ಬೀಳುವ ನಿರೀಕ್ಷೆ ಇದೆ.
ಇದನ್ನೂ ಓದಿ:ಸಿ ಎಂ ಇಬ್ರಾಹಿಂ ಭೇಟಿ ಮಾಡಿದ ಡಿಕೆಶಿ.. ಪಕ್ಷ ಬಿಡದಂತೆ ಮನವೊಲಿಸುವ ಯತ್ನ..