ಚಿತ್ರ ಸಂತೆಗೆ ಸಿಎಂ ಚಾಲನೆ, ಬಜೆಟ್ನಲ್ಲಿ 1 ಕೋಟಿ ರೂ. ಮೀಸಲಿಡುವುದಾಗಿ ಘೋಷಣೆ - ಬೆಂಗಳೂರಿನಲ್ಲಿ ಚಿತ್ರ ಸಂತೆ
ಚಿತ್ರ ಸಂತೆಗಾಗಿ ಈ ಬಾರಿಯ ಬಜೆಟ್ನಲ್ಲಿ 1 ಕೋಟಿ ರೂ. ಮೀಸಲಿಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.
ಬೆಂಗಳೂರು: ಚಿತ್ರ ಸಂತೆಗಾಗಿ ಈ ಬಾರಿಯ ಬಜೆಟ್ನಲ್ಲಿ 1 ಕೋಟಿ ರೂ. ಮೀಸಲಿಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.
ನಗರದಲ್ಲಿ 17 ನೇ ಚಿತ್ರ ಸಂತೆಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ನಮ್ಮ ಚಿತ್ರಸಂತೆ ದೇಶದಲ್ಲೇ ಬಹಳ ಅಪರೂಪದ ಸಂಗತಿಯಾಗಿದೆ. ದೇಶ, ವಿದೇಶದ ಕಲಾವಿದರಿಗೆ ಇದೊಂದು ತೆರೆದ ಗ್ಯಾಲರಿಯಾಗಿದೆ. ಚಿತ್ರ ಸಂತೆಗೆ ಬಜೆಟ್ನಲ್ಲಿ ಒಂದು ಕೋಟಿ ರೂ. ನೀಡುತ್ತೇನೆ. ಆ ಮೂಲಕ ಸರ್ಕಾರ ನಿಮ್ಮ ಜತೆ ಇದೆ ಎಂಬುದನ್ನು ಹೇಳಲು ಬಯಸುತ್ತೇನೆ ಎಂದರು.
ಇಡೀ ರಸ್ತೆ ಉದ್ದಕ್ಕೂ ಚಿತ್ರಗಳನ್ನು ನೋಡಿ ಖುಷಿಯಾಗಿದೆ. ಇದು ಕಲೆಯ ವೈಭವವನ್ನ ತೋರುತ್ತಿದೆ. ಗ್ರಾಮೀಣ ಬದುಕು ಜೀವನ ಶೈಲಿ ಬಗ್ಗೆ ಚಿತ್ರ ಬಿಡಿಸಿರುವುದು ಮನೋಜ್ಞವಾಗಿದೆ. ದೇಶದ ವಿವಿಧ ಭಾಗಗಳಿಂದ ಬಂದಿರುವ ಕಲಾವಿದರ ಚಿತ್ರ ಆಕರ್ಷಣೀವಾಗಿವೆ. ನೇಗಿಲಯೋಗಿಗೆ ಈ ಬಾರಿಯ ಚಿತ್ರ ಸಂತೆಯನ್ನು ಸಮರ್ಪಿಸಿರುವುದು ಖುಷಿ ತಂದಿದೆ ಎಂದು ಸಿಎಂ ಸಂತಸ ವ್ಯಕ್ತಪಡಿಸಿದರು.
ಸಹಿ ಹಾಕುವ ಮೂಲಕ ಚಿತ್ರ ಜಾತ್ರೆಗೆ ಚಾಲನೆ:
ಸಿಎಂ ಯಡಿಯೂರಪ್ಪ ಸಹಿ ಹಾಕುವ ಮೂಲಕ 17ನೇ ಚಿತ್ರ ಸಂತೆಗೆ ಚಾಲನೆ ನೀಡಿದ್ರು. ಈ ವೇಳೆ ಡಿಸಿಎಂ ಅಶ್ವತ್ಥ ನಾರಾಯಣ, ಸಂಸದ ಪಿ.ಸಿ. ಮೋಹನ್, ಶಾಸಕ ರಿಜ್ವಾನ್ ಅರ್ಷದ್ ಮುಂತಾದವರು ಉಪಸ್ಥಿತರಿದ್ದರು. ಇದೇ ವೇಳೆ ಮಾತನಾಡಿದ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ. ಬಿಲ್.ಶಂಕರ್, ಮೈಸೂರು ದಸರಾದಂತೆ ಸರ್ಕಾರದ ಕಾರ್ಯಕ್ರಮವಾಗಿ ಈ ಚಿತ್ರಸಂತೆಯನ್ನು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಬಜೆಟ್ನಲ್ಲಿ ಪ್ರತಿ ವರ್ಷ ಚಿತ್ರಸಂತೆಗೆ 1 ಕೋಟಿ ರೂ. ಮೀಸಲಿಡಬೇಕು. ಸಾಂಸ್ಕೃತಿಕ ಕಾರ್ಯಕ್ರಮದಂತೆ ಚಿತ್ರಸಂತೆಯನ್ನು ಪರಿಗಣಿಸಬೇಕು ಮತ್ತು ಚಿತ್ರಕಲಾ ಪರಿಷತ್ನಲ್ಲಿ ಡಿಸೈನ್ ಕಾಲೇಜ್ ಪ್ರಾರಂಭಿಸಲು ಅನುದಾನ ನೀಡುವಂತೆ ಮನವಿ ಮಾಡಿದರು.
1,500 ಕ್ಕೂ ಹೆಚ್ಚು ಕಲಾವಿದರ ಕಲಾಕೃತಿ:
17 ನೇ ಚಿತ್ರ ಸಂತೆಯಲ್ಲಿ ಸುಮಾರು 1,500 ಕ್ಕೂ ಅಧಿಕ ಕಲಾವಿದರು ಭಾಗವಹಿಸಿದ್ದು, ತಮ್ಮ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಚಿತ್ರಸಂತೆಗಾಗಿ ಕುಮಾರ ಕೃಪ ರಸ್ತೆಯಿಂದ ಕ್ರಸೆಂಟ್ ರಸ್ತೆ ತನಕ ಸಂಪೂರ್ಣ ರಸ್ತೆ ಬಂದ್ ಮಾಡಲಾಗಿದೆ. ಚಿತ್ರ ಸಂತೆಯಲ್ಲಿ ರಾಜ್ಯದ ಕಲಾವಿದರು ಸೇರಿ ಕೇರಳ, ಮಹಾರಾಷ್ಟ್ರ, ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶದ ಕಲಾವಿದರು ಪಾಲ್ಗೊಂಡಿದ್ದಾರೆ.
Body:hhh
Conclusion:hhhh