ETV Bharat / state

ಹುಳಿಮಾವಿಗೆ ಸಿಎಂ ಭೇಟಿ: ಸಂಜೆಯೊಳಗೆ ಸಂತ್ರಸ್ತರ ಅಕೌಂಟ್​​ಗೆ 50ಸಾವಿರ ರೂ.

ಹುಳಿಮಾವಿನ ಕೆರೆ ಕಟ್ಟೆ ಒಡೆದು ಜನ ಜೀವನ ಅಸ್ತವ್ಯಸ್ಥಗೊಂಡಿದ್ದು, ಇಂದು ಸ್ಥಳಕ್ಕೆ ಸಿಎಂ ಬಿಎಸ್​​ವೈ ಭೇಟಿ ನೀಡಿ ಸಂತ್ರಸ್ತರಿಗೆ ಸಂಜೆಯೊಳಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

Cm visited hulimavu
ಹುಳಿಮಾವು ಪ್ರದೇಶಕ್ಕೆ ಭೇಟಿ ನೀಡಿದ ಸಿಎಂ
author img

By

Published : Nov 26, 2019, 1:51 PM IST

ಬೆಂಗಳೂರು: ಹುಳಿಮಾವಿನಲ್ಲಿ ಕೆರೆ ಕಟ್ಟೆ ಒಡೆದು ಅನಾಹುತಕ್ಕೊಳಗಾದ ಸ್ಥಳಕ್ಕೆ ಸಿಎಂ ಬಿಎಸ್​​ವೈ ಭೇಟಿ ನೀಡಿದ್ದು, ಶೀಘ್ರದಲ್ಲೇ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಂತ್ರಸ್ತರ ಭೇಟಿಯಾದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುಮಾರು 630 ಮನೆಗಳು ಹಾನಿಯಾಗಿವೆ, ಅದರಲ್ಲಿ 219 ಮನೆಗಳು ಬಡವರದಾಗಿದ್ದು, ಸಂಜೆಯೊಳಗೆ ಅವರ ಖಾತೆಗೆ 50000 ರೂ. ಜಮಾ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಹಾಗೂ ಇದಕ್ಕೆ ಕಾರಣ ಯಾರು ಎಂಬುದರ ಬಗ್ಗೆ ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಅಲ್ಲಿನ ಜನರಿಗೆ ಭರವಸೆ ನೀಡಿದ್ದಾರೆ.

ಹುಳಿಮಾವು ಪ್ರದೇಶಕ್ಕೆ ಭೇಟಿ ನೀಡಿದ ಸಿಎಂ

ಮೇಯರ್​​ ಹಾಗೂ ಕಮೀಷನರ್​​ಗೆ ಖಡಕ್​​ ಸೂಚನೆ:
ಬಿಬಿಎಂಪಿ ಮೇಯರ್​​ ಹಾಗೂ ಕಮೀಷನರ್​​ಗೆ ಖಡಕ್​ ಸೂಚನೆ ನೀಡಿದ ಸಿಎಂ, ಸ್ಥಳದಲ್ಲೇ ಇದ್ದು ಕಾರ್ಯವೈಖರಿಗಳನ್ನು ವಿಚಾರಿಸುವಂತೆ ಹೇಳಿದ್ದು, ಘಟನೆಗೆ ಕಾರಣಿಕರ್ತರಾಗಿರುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಾಕೀತು ಮಾಡಿದರು.

Intro:Body:

for love

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.